Most Expensive Schools: ಇವೇ ನೋಡಿ ದೇಶದ ಬಲು ದುಬಾರಿ ಶಾಲೆಗಳು… ಇಲ್ಲಿನ ಫೀಸ್ ಕೇಳಿದ್ರೆ ಬೆಚ್ಚಿ ಬೀಳ್ತೀರಿ

Published : Oct 24, 2025, 03:17 PM IST

ಭಾರತ ದೇಶವು ವಿದ್ಯಾಭ್ಯಾಸದ ದೃಷ್ಟಿಯಲ್ಲಿ ತುಂಬಾನೆ ಮುಂದುವರೆದಿದೆ. ಸದ್ಯಕ್ಕಂತೂ ವಿದ್ಯಾಭ್ಯಾಸ ಅನ್ನೋದು ಬ್ಯುಸಿನೆಸ್ ಆಗಿಬಿಟ್ಟಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇವೇ ನೋಡಿ ದೇಶದ ಬಲು ದುಬಾರಿ ಶಾಲೆಗಳು. ಇಲ್ಲಿನ ವಾರ್ಷಿಕ ಫೀಸ್ ಕೇಳಿದ್ರೆ ಬೆಚ್ಚಿ ಬೀಳುವಿರಿ.

PREV
111
ದೇಶದ ದುಬಾರಿ ಶಾಲೆಗಳು

ಧೀರುಬಾಯಿ ಅಂಬಾನಿ ಇಂಟರ್ ನ್ಯಾಷನಲ್ ಸ್ಕೂಲ್ ಮಾತ್ರ ದೇಶದ ಅತ್ಯಂತ ದುಬಾರಿ ಸ್ಕೂಲ್ ಅಂತ ನೀವು ಅಂದುಕೊಂಡಿದ್ದರೆ ಅದು ತಪ್ಪು. ಯಾಕಂದ್ರೆ ನಮ್ಮ ದೇಶದಲ್ಲಿ ಅಂತಹ ಹಲವಾರು ದುಬಾರಿ ಶಾಲೆಗಳಿವೆ. ಇಲ್ಲಿನ ವಾರ್ಷಿಕ ದರ ಕೇಳಿದ್ರೆ ಶಾಕ್ ಆಗುತ್ತೆ. ಯಾಕಂದ್ರೆ ಇಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು ಅಂದ್ರೆ ಅವರು ಕೋಟ್ಯಾಧಿಪತಿಯಾಗಿರಲೇಬೇಕು.

211
ವುಡ್ ಸ್ಟಾಕ್ ಸ್ಕೂಲ್

ದೇಶದ ಅತ್ಯಂತ ದುಬಾರಿ ಶಾಲೆ ಅಂದ್ರೆ ಅದು ಮುಸೋರಿಯಲ್ಲಿರುವ ವುಡ್ ಸ್ಟಾಕ್ ಸ್ಕೂಲ್ (ಐಬಿ). ಇಲ್ಲಿನ ವಾರ್ಷಿಕ ಶುಲ್ಕ ಸುಮಾರು 16 ಲಕ್ಷದಿಂದ ಹಿಡಿದು 18 ಲಕ್ಷದವರೆಗೂ ಇರುತ್ತದೆ.

311
ಧೀರುಭಾಯಿ ಅಂಬಾನಿ ಇಂಟರ್ ನ್ಯಾಷನಲ್ ಸ್ಕೂಲ್

ಅಂಬಾನಿ ಒಡೆತನದ ಧೀರುಭಾಯಿ ಅಂಬಾನಿ ಇಂಟರ್ ನ್ಯಾಷನಲ್ ಸ್ಕೂಲ್ ದುಬಾರಿ ಶಾಲೆಗಳ ಲಿಸ್ಟ್ ನಲ್ಲಿ ಎರಡನೇ ಸ್ಥಾನದಲ್ಲಿದೆ. ಮುಂಬೈನಲ್ಲಿರುವ ICSE, IGCSE, IB ಶಾಲೆಯ ವಾರ್ಷಿಕ ಶುಲ್ಕ 9 ರಿಂದ 10 ಲಕ್ಷಗಳವರೆಗೆ ಇರುತ್ತವೆ.

411
ಎಕೋಲ್ ಮೋಂಡಿಯಾಲ್ ವರ್ಲ್ಡ್ ಸ್ಕೂಲ್

ಮುಂಬೈನಲ್ಲಿರುವ ಎಕೋಲ್ ಮೋಂಡಿಯಾಲ್ ವರ್ಲ್ಡ್ ಸ್ಕೂಲ್ ಮೂರನೇ ಸ್ಥಾನದಲ್ಲಿದೆ. ಇದು IB(PYP, MYP, DP) ಸಿಲೆಬಸ್ ಹೊಂದಿರುವ ಶಾಲೆ ಇದಾಗಿದೆ. ಇಲ್ಲಿನ ವಾರ್ಷಿಕ ಶುಲ್ಕ ಕೂಡ ಸುಮಾರು 9 ರಿಂದ 11 ಲಕ್ಷ ರೂಪಾಯಿಗಳಾಗಿವೆ.

511
ದಿ ಡೂನ್ ಸ್ಕೂಲ್

ಡೆಹ್ರಾಡೂನ್ ನಲ್ಲಿರುವ IB, IGCSE, ISC ಸಿಲೆಬಸ್ ಇರುವ ದಿ ಡೂನ್ ಸ್ಕೂಲ್. ಈ ಶಾಲೆ ತುಂಬಾನೆ ದುಬಾರಿಯಾಗಿದ್ದು, ಇಲ್ಲಿ ಭಾರತೀಯ ಮಕ್ಕಳಿಗೆ ವರ್ಷಕ್ಕೆ 11 . 95 ಲಕ್ಷ ಹಾಗೂ ವಿದೇಶಿ ಮಕ್ಕಳ ಫೀಸ್ 14. 93 ಲಕ್ಷ ರೂಪಾಯಿ ಆಗಿದೆ.

611
ದಿ ಸಿಂಧಿಯಾ ಸ್ಕೂಲ್

ಗ್ವಾಲಿಯರ್ ನಲ್ಲಿರುವ ದುಬಾರಿ ಶಾಲೆ ದಿ ಸಿಂಧಿಯಾ ಸ್ಕೂಲ್. ಇದು ಸಿಬಿಎಸ್ ಸಿ ಶಾಲೆಯಾಗಿದ್ದು, ಇಲ್ಲಿವ ವಾರ್ಷಿಕ ಶುಲ್ಕ 7 ರಿಂದ 9 ಲಕ್ಷ ರೂಪಾಯಿಯಾಗಿರುತ್ತದೆ.

711
ದಿ ಬ್ರಿಟಿಷ್ ಸ್ಕೂಲ್

ದೇಶದ ರಾಜಧಾನಿ ದೆಹಲಿಯಲ್ಲಿರುವ ಶಾಲೆ ದಿ ಬ್ರಿಟಿಷ್ ಸ್ಕೂಲ್. ಇದು ಅತ್ಯಂತ ಜನಪ್ರಿಯ ಹಾಗೂ ದುಬಾರಿ ಶಾಲೆಯಾಗಿದೆ. IB, IGCSE ಸಿಲೆಬಸ್ ಇದ್ದು, ಈ ಶಾಲೆಯ ಶುಲ್ಕ 10 ರಿಂದ 12 ಲಕ್ಷ ರೂಪಾಯಿ.

811
ಪಾತ್ ವೇಸ್ ವರ್ಲ್ಡ್ ಸ್ಕೂಲ್

ಪಾತ್ ವೇಸ್ ವರ್ಲ್ಡ್ ಸ್ಕೂಲ್ ಗುರುಗಾಂನಲ್ಲಿರುವ IB(PYP, MYP, DP) ಸಿಲೆಬಸ್ ಹೊಂದಿರು ಶಾಲೆ ಇದಾಗಿದೆ. ಇಲ್ಲಿನ ವಾರ್ಷಿಕ ಶುಲ್ಕ 6.45 -13.85 ಲಕ್ಷ ರೂಪಾಯಿ ಆಗಿದೆ.

911
ಓಕ್ರಿಡ್ಜ್ ಇಂಟರ್ ನ್ಯಾಷನಲ್ ಸ್ಕೂಲ್

ಈ ಓಕ್ರಿಡ್ಜ್ ಇಂಟರ್ ನ್ಯಾಷನಲ್ ಸ್ಕೂಲ್ ಹೈದರಾಬಾದ್ ನಲ್ಲಿದೆ. ಇಲ್ಲಿ IB, IGCSE, CBSE ಸಿಲೇಬಸ್ ಇದೆ. ಇಲ್ಲಿನ ವಾರ್ಷಿಕ ಶುಲ್ಕ 3.14- 7.95 ಲಕ್ಷ ರೂಪಾಯಿ ಆಗಿದೆ.

1011
ಗುಡ್ ಶೆಪರ್ಡ್ ಇಂಟರ್ ನ್ಯಾಷನಲ್ ಸ್ಕೂಲ್

ತಮಿಳುನಾಡಿನ ಊಟಿಯಲ್ಲಿರುವ ದುಬಾರಿ ಶಾಲೆ ಇದಾಗಿದ್ದು, ಗುಡ್ ಶೆಪರ್ಡ್ ಇಂಟರ್ ನ್ಯಾಷನಲ್ ಸ್ಕೂಲ್ IB, IGCSE, CBSE ಸಿಲೇಬಸ್ ಹೊಂದಿದೆ. ಇಲ್ಲಿನ ವರ್ಷಕ್ಕೆ ಮಕ್ಕಳು ಸುಮಾರು 6 ರಿಂದ 10 ಲಕ್ಷ ರೂಪಾಯಿ ಶುಲ್ಕ ಕಟ್ಟಬೇಕಾಗುತ್ತದೆ.

1111
ವೆಲ್ಹಾಮ್ ಗರ್ಲ್ಸ್ ಸ್ಕೂಲ್

ಇದು ಡೆಹ್ರಾಡೂನ್ ನಲ್ಲಿರುವ ಮತ್ತೊಂದು ಪ್ರಸಿದ್ಧ ಹಾಗೂ ದುಬಾರಿ ಶಾಲೆಯಾಗಿದೆ. ICSE, ISC ಸಿಲೆಬಸ್ ಹೊಂದಿರುವ ವರ್ಷಕ್ಕೆ ಬರೋಬ್ಬರಿ 7 ರಿಂದ 9 ಲಕ್ಷದವರೆಗೆ ಫೀಸ್ ತೆಗೆದುಕೊಳ್ಳುವ ಶಾಲೆಯಾಗಿದೆ.

Read more Photos on
click me!

Recommended Stories