ರಾಜಸ್ಥಾನದ ಭಿಲ್ವಾರಾದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಈಶ್ವರ್, 10ನೇ ತರಗತಿಯಲ್ಲಿ ಫೇಲ್ ಆಗಿದ್ದವರು ಅಂದ್ರೆ ನೀವು ನಂಬಲೇಬೇಕು. 10ನೇ ಕ್ಲಾಸ್‌ನಲ್ಲಿ ಫೇಲ್ ಆಗಿದ್ದರಿಂದ ನಿರಾಶೆಗೊಂಡು ಓದು ಬಿಡಲು ಈಶ್ವರ್ ಗುರ್ಜರ್ ಯೋಚಿಸಿದ್ದರು. ಆದರೆ ತಂದೆಯ ಪ್ರೋತ್ಸಾಹ ಅವರ ಜೀವನಕ್ಕೆ ಹೊಸ ತಿರುವು ನೀಡಿತು. ತಂದೆಯ ಪ್ರೋತ್ಸಾಹದಿಂದ ಈಶ್ವರ್ ಗುರ್ಜರ್ ಇಂದು ಎಲ್ಲರಿಗೂ ಮಾದರಿಯಾಗಿದ್ದಾರೆ.