12ನೇ ತರಗತಿ ಮಕ್ಕಳ ಉತ್ತರ ಪತ್ರಿಕೆ ಡಿಜಿಟಲಿ ಮೌಲ್ಯಮಾಪನ ಮಾಡಲಿದೆ ಸಿಬಿಎಸ್ಇ

Published : Feb 11, 2026, 02:05 PM IST

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) 12ನೇ ತರಗತಿಯ ಸುಮಾರು 1 ಕೋಟಿ ಉತ್ತರ ಪತ್ರಿಕೆಗಳನ್ನು ಡಿಜಿಟಲ್ ಮೌಲ್ಯಮಾಪನ ಮಾಡಲು ನಿರ್ಧರಿಸಿದೆ. ಈ ಬದಲಾವಣೆಯು 12ನೇ ತರಗತಿಗೆ ಮಾತ್ರ ಸೀಮಿತವಾಗಿದ್ದು, 10ನೇ ತರಗತಿಯ ಮೌಲ್ಯಮಾಪನ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ.

PREV
17
12 ತರಗತಿ ಪ್ರಶ್ನೆಪತ್ರಿಕೆ ಡಿಜಿಟಲ್ ಮೌಲ್ಯಮಾಪನ

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಸಿಬಿಎಸ್‌ಇ 12ನೇ ತರಗತಿಯ ಮಕ್ಕಳ ಉತ್ತರ ಪತ್ರಿಕೆಯ ಮೌಲ್ಯಮಾಪನದ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಗೆ ನಿರ್ಧರಿಸಿದ್ದು,ಸುಮಾರು 12 ನೇ ತರಗತಿಯ ಸುಮಾರು 1 ಕೋಟಿ ಮಕ್ಕಳ ಉತ್ತರ ಪತ್ರಿಕೆಗಳನ್ನು ಡಿಜಿಟಲ್ ಮೌಲ್ಯಮಾಪನ ಮಾಡಲಿದೆ. ಇದಕ್ಕಾಗಿ ಅದು ಮಕ್ಕಳ ಉತ್ತರ ಪತ್ರಿಕೆಯ 32 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಲಿದೆ. ಫೆಬ್ರವರಿ 17 ರಿಂದ ಏಪ್ರಿಲ್ 10 ರವರೆಗೆ ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಗಳು ನಡೆಯಲಿವೆ. 

27
ಪ್ರತಿ ವಿದ್ಯಾರ್ಥಿಯ ಉತ್ತರ ಪತ್ರಿಕೆ ಸ್ಕ್ಯಾನ್

ಹೌದು ಸಿಬಿಎಸ್‌ಇ 12ನೇ ತರಗತಿ ವಿದ್ಯಾರ್ಥಿಗಳ 17 ಲಕ್ಷಕ್ಕೂ ಹೆಚ್ಚು ಉತ್ತರ ಪತ್ರಿಕೆಗಳನ್ನು ಡಿಜಿಟಲ್ ಆನ್-ಸ್ಕ್ರೀನ್ ಮಾರ್ಕಿಂಗ್ ವ್ಯವಸ್ಥೆಯನ್ನು ಬಳಸಿಕೊಂಡು ಪರಿಶೀಲಿಸಲಿದೆ ಎಂದು ವರದಿಯಾಗಿದೆ. ಇದಕ್ಕಾಗಿ, ಪ್ರತಿ ವಿದ್ಯಾರ್ಥಿಯ ಉತ್ತರ ಪತ್ರಿಕೆಗಳ ಪ್ರತಿಯೊಂದು ಪುಟವನ್ನು ಪರೀಕ್ಷಾ ಕೇಂದ್ರದಲ್ಲಿಯೇ ಸ್ಕ್ಯಾನ್ ಮಾಡಿ ಕಂಪ್ಯೂಟರ್ ವ್ಯವಸ್ಥೆಗೆ ಅಪ್‌ಲೋಡ್ ಮಾಡಲಾಗುತ್ತದೆ. ಸುಮಾರು 1 ಕೋಟಿ ಉತ್ತರ ಪತ್ರಿಕೆಗಳಿಂದ ಸುಮಾರು 32 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಲಾಗುತ್ತದೆ. ಈ ಡಿಜಿಟಲ್ ಪ್ರತಿಗಳನ್ನು ಪರಿಶೀಲಿಸಿದ ನಂತರವೇ ಮೌಲ್ಯಮಾಪಕರು ವಿದ್ಯಾರ್ಥಿಗಳಿಗೆ ಅಂಕಗಳನ್ನು ನೀಡುತ್ತಾರೆ.

37
ಈ ಪ್ರಕ್ರಿಯೆಗಳಿಂದ ಹಲವು ವೆಚ್ಚಗಳ ಉಳಿಕೆ

ಇದು ಕೇವಲ ದ್ವಿತೀಯ ಪಿಯುಸಿ ಅಥವಾ 12ನೇ ತರತಗತಿಯ ಮಕ್ಕಳ ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಮಾತ್ರ ಅನ್ವಯವಾಗುತ್ತದೆ. ಆದರೆ ಸಿಬಿಎಸ್‌ಇಯ 10 ನೇ ತರಗತಿ ಪರೀಕ್ಷೆಗಳ ಉತ್ತರ ಪತ್ರಿಕೆಗಳನ್ನು ಎಂದಿನಂತೆ ಕಾಗದ ರೂಪದ ಪತ್ರಿಕೆಯಲ್ಲೇ ಮೌಲ್ಯಮಾಪನ ಮಾಡಲಾಗುತ್ತದೆ. ಸಿಬಿಎಸ್‌ಇಯ ಪರೀಕ್ಷಾ ನಿಯಂತ್ರಕರಾದ ಸಂಯಮ್ ಭಾರದ್ವಾಜ್ ಅವರ ಪ್ರಕಾರ, ಈ ಹೊಸ ವ್ಯವಸ್ಥೆಯು ಉತ್ತರ ಪತ್ರಿಕೆಗಳನ್ನು ಸಾಗಿಸುವಲ್ಲಿನ ಸಮಯ ಮತ್ತು ವೆಚ್ಚವನ್ನು ಉಳಿಸುತ್ತದೆ. ಜೊತೆಗೆ ಶಿಕ್ಷಕರು ತಮ್ಮ ಶಾಲೆಗಳಲ್ಲಿಯೇ ಇದ್ದುಕೊಂಡು ಮೌಲ್ಯಮಾಪನ ಮಾಡಲು ಸಾಧ್ಯವಾಗುತ್ತದೆ ಮತ್ತು ಮಕ್ಕಳ ನಿಯಮಿತ ಅಧ್ಯಯನದ ಮೇಲೆ ಇದು ಯಾವುದೇ ಪರಿಣಾಮ ಬೀರುವುದಿಲ್ಲ. ಮೌಲ್ಯಮಾಪನವನ್ನು ಹೆಚ್ಚು ಪಾರದರ್ಶಕ, ವೇಗ ಮತ್ತು ದೋಷ-ಮುಕ್ತವಾಗಿಸಲು, ಮಂಡಳಿಯು ಈ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.

47
ಅಂಕಗಳ ಸ್ವಯಂಚಾಲಿತ ಎಣಿಕೆ

ವಿದ್ಯಾರ್ಥಿಗಳು ಗಳಿಸಿದ ಅಂಕಗಳನ್ನು ಸ್ವಯಂಚಾಲಿತವಾಗಿ ಎಣಿಸಲಾಗುತ್ತದೆ. ಎಲ್ಲಾ ಉತ್ತರ ಪತ್ರಿಕೆಯ ಎಲ್ಲಾ ಪುಟಗಳನ್ನು ಸ್ಕ್ಯಾನ್ ಮಾಡಲಾಗುತ್ತದೆ ಮತ್ತು ಡಿಜಿಟಲ್ ರೂಪದಲ್ಲಿ ಮಾತ್ರ ಪರಿಶೀಲಿಸಲಾಗುತ್ತದೆ. ಮೌಲ್ಯಮಾಪನವು ವೇಗವಾಗಿರುತ್ತದೆ, ಫಲಿತಾಂಶಗಳನ್ನು ಸಮಯಕ್ಕೆ ಸರಿಯಾಗಿ ಘೋಷಿಸಲು ಅನುವು ಮಾಡಿಕೊಡುತ್ತದೆ.

ಎಲ್ಲಾ 32 ಸಾವಿರ ಶಾಲೆಗಳಿಗೆ ಪ್ರಶ್ನೆಪತ್ರಿಕೆಯ ಸ್ಕ್ಯಾನಿಂಗ್‌ಗೆ ಸಂಪೂರ್ಣವಾಗಿ ಸಿದ್ಧರಾಗಿರುವಂತೆ ಸೂಚಿಸಲಾಗಿದೆ. ಇದು ಒಟ್ಟು ಎಣಿಕೆಯಲ್ಲಿನ ದೋಷಗಳನ್ನು ನಿವಾರಿಸುತ್ತದೆ ಎಂದು ತಿಳಿದು ಬಂದಿದೆ.

57
7 ಹಂತಗಳಲ್ಲಿ ಉತ್ತರ ಪತ್ರಿಕೆಗಳ ಮೌಲ್ಯ

ಮೊದಲ ಹಂತ: ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಉತ್ತರ ಪತ್ರಿಕೆಯಲ್ಲಿ ಮೊದಲಿನಂತೆ ಉತ್ತರಗಳನ್ನು ಬರೆಯುತ್ತಾರೆ. ಪರೀಕ್ಷೆಯು ಆಫ್‌ಲೈನ್‌ನಲ್ಲಿ ಮಾತ್ರ ಇರುತ್ತದೆ. ಬೋರ್ಡ್ ಪರೀಕ್ಷೆಯಲ್ಲಿ ಇರುವ ವಿಷಯವನ್ನು ಅವಲಂಬಿಸಿ 40 ಪುಟಗಳು, 32 ಪುಟಗಳು ಮತ್ತು 20 ಪುಟಗಳ ಉತ್ತರ ಪತ್ರಿಕೆಗಳನ್ನು ಬಳಸಲಾಗುತ್ತದೆ.

ಎರಡನೇ ಹಂತ: ಎಲ್ಲಾ ಉತ್ತರ ಪತ್ರಿಕೆಗಳನ್ನು ಹೆಚ್ಚಿನ ಭದ್ರತೆಯ ಸ್ಕ್ಯಾನಿಂಗ್ ಕೇಂದ್ರದಲ್ಲಿ ಸ್ಕ್ಯಾನ್ ಮಾಡಲಾಗುತ್ತದೆ. ಇದು ಶಾಲೆಯ ಕಂಪ್ಯೂಟರ್ ಲ್ಯಾಬ್‌ನಲ್ಲಿಯೇ ನಡೆಯುತ್ತದೆ. ಪ್ರತಿ ಪುಟದ ಡಿಜಿಟಲ್ ಫೋಟೋ ರೆಡಿಯಾಗುತ್ತದೆ. ಪ್ರತಿ ಉತ್ತರ ಪತ್ರಿಕೆಗೆ ವಿಶಿಷ್ಟ ಕೋಡ್ ಇರುತ್ತದೆ. ಉತ್ತರ ಪತ್ರಿಕೆಯನ್ನು ಪರಿಶೀಲಿಸುವಾಗ ವಿದ್ಯಾರ್ಥಿಯ ಹೆಸರು ಮತ್ತು ರೋಲ್ ಸಂಖ್ಯೆ ಗೋಚರಿಸುವುದಿಲ್ಲ. ಇದು ಪಕ್ಷಪಾತದ ಸಾಧ್ಯತೆಯನ್ನು ನಿವಾರಿಸುತ್ತದೆ.

ಮೂರನೇ ಹಂತ: ಸಿಬಿಎಸ್‌ಇ ಶಾಲಾ ಶಿಕ್ಷಕರು ಕಂಪ್ಯೂಟರ್ ಲ್ಯಾಬ್‌ನಲ್ಲಿ ತಮ್ಮ ಓಯಸಿಸ್ ಐಡಿ ಬಳಸಿ ಆನ್-ಸ್ಕ್ರೀನ್ ಮಾರ್ಕಿಂಗ್ (ಒಎಸ್‌ಎಂ) ಪೋರ್ಟಲ್‌ಗೆ ಲಾಗಿನ್ ಆಗುತ್ತಾರೆ. ಆಗ ಅವರಿಗೆ ಇಂದು ಎಷ್ಟು ಉತ್ತರ ಪತ್ರಿಕೆಗಳನ್ನು ಪರಿಶೀಲಿಸಬೇಕೆಂಬ ಮಾಹಿತಿ ಸಿಗುತ್ತದೆ.

67
ಶಿಕ್ಷಕರು ಅಂಕಗಳನ್ನು ಕೂಡಿಸುವ ಕಳೆಯುವ ಅಗತ್ಯವಿಲ್ಲ

ನಾಲ್ಕನೇ ಹಂತ: ವಿದ್ಯಾರ್ಥಿಯ ಉತ್ತರ ಪತ್ರಿಕೆಯ ಸ್ಕ್ಯಾನ್ ಮಾಡಿದ ಪುಟಗಳು ಶಿಕ್ಷಕರ ಮುಂದೆ ಕಾಣಿಸಿಕೊಳ್ಳುತ್ತವೆ. ಪ್ರತಿ ಪ್ರಶ್ನೆಗೆ ಪ್ರತ್ಯೇಕ ಅಂಕಗಳ ಕಾಲಮ್ ಇರುತ್ತದೆ, ಅದು ಆ ಪ್ರಶ್ನೆಗೆ ಪೂರ್ಣ ಅಂಕಗಳನ್ನು (ಒಟ್ಟು ಅಂಕಗಳು) ಪ್ರದರ್ಶಿಸುತ್ತದೆ. ವಿದ್ಯಾರ್ಥಿಯ ಉತ್ತರದ ಆಧಾರದ ಮೇಲೆ ಶಿಕ್ಷಕರು ನಮೂದಿಸುವ ಯಾವುದೇ ಅಂಕಗಳನ್ನು ಸ್ವಯಂಚಾಲಿತವಾಗಿ ವ್ಯವಸ್ಥೆಯಲ್ಲಿ ದಾಖಲಿಸಲಾಗುತ್ತದೆ.

ಐದನೇ ಹಂತ: ಉತ್ತರ ಪತ್ರಿಕೆಯನ್ನು ಸಂಪೂರ್ಣವಾಗಿ ಪರಿಶೀಲಿಸಿದ ನಂತರ, ಶಿಕ್ಷಕರು ಅಂಕಗಳನ್ನು ಸೇರಿಸುವ ಅಥವಾ ಕಳೆಯುವ ಅಗತ್ಯವಿಲ್ಲ. ಒಟ್ಟು ಮಾಡುವುದು ಸ್ವಯಂಚಾಲಿತವಾಗಿ ಆಗುತ್ತದೆ.

ಆರನೇ ಹಂತ: ಕೆಲವು ಉತ್ತರ ಪತ್ರಿಕೆಗಳನ್ನು ಮರು ಪರಿಶೀಲನೆ ಅಥವಾ ಮಾಡರೇಶನ್‌ಗಾಗಿ ಇನ್ನೊಬ್ಬ ಹಿರಿಯ ಪರೀಕ್ಷಕರಿಗೆ ತೋರಿಸಬಹುದು. ಸಂಪೂರ್ಣ ಟ್ರ್ಯಾಕ್ ರೆಕಾರ್ಡ್ ವ್ಯವಸ್ಥೆಯಲ್ಲಿ ಉಳಿಯುತ್ತದೆ, ಯಾವ ಶಿಕ್ಷಕರು ಯಾವಾಗ, ಎಷ್ಟು ಸಮಯ ತೆಗೆದುಕೊಂಡರು ಮತ್ತು ಹೇಗೆ ಮೌಲ್ಯಮಾಪನ ಮಾಡಿದರು ಎಂಬುದನ್ನು ತೋರಿಸುತ್ತದೆ.

ಇದನ್ನೂ ಓದಿ:

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಕುರ್ಚಿ ಮೇಲೆ ಮಲಗಿ ಗಾಢ ನಿದ್ದೆಗೆ ಜಾರಿದ ನಾಯಿ: ವೀಡಿಯೋ ವೈರಲ್ ಆಗ್ತಿದ್ದಂತೆ ಆಕ್ರೋಶ

77
ಶಿಕ್ಷಕರಿಗೆ ತರಬೇತಿ

ಏಳನೇ ಹಂತ: ಇಲ್ಲಿಂದ, ಅಂಕಗಳು ನೇರವಾಗಿ CBSE ಫಲಿತಾಂಶದ ಡಾಟಾಬೇಸ್ ತಲುಪುತ್ತವೆ, ಅಂದರೆ ಅಂಕ ವರ್ಗಾವಣೆ, ಹಸ್ತಚಾಲಿತ ನಮೂದು ಅಥವಾ ಮರು ಪರಿಶೀಲನೆಯ ಅಗತ್ಯವಿರುವುದಿಲ್ಲ. ಕಡಿಮೆ ವಿವಾದಗಳು ಮತ್ತು ಹೆಚ್ಚಿನ ನಂಬಿಕೆಯೊಂದಿಗೆ ನಿಗದಿತ ದಿನಾಂಕದಂದು ಫಲಿತಾಂಶಗಳನ್ನು ಘೋಷಿಸಬಹುದು.

ತರಬೇತಿ ಪಡೆಯಲಿರುವ ಶಿಕ್ಷಕರು

ಡಿಜಿಟಲ್ ಪರಿಶೀಲನೆಗಾಗಿ ಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್ ಕಡ್ಡಾಯವಾಗಿದೆ. ಇದಕ್ಕಾಗಿ ಇತ್ತೀಚಿನ ಇಂಟರ್ನೆಟ್ ಬ್ರೌಸರ್, ಅಡೋಬ್ ರೀಡರ್, ಕನಿಷ್ಠ 2 Mbps ಸ್ಥಿರ ಇಂಟರ್ನೆಟ್ ವೇಗ ಮತ್ತು ನಿರಂತರ ವಿದ್ಯುತ್ ಪೂರೈಕೆಯನ್ನು ಶಾಲೆ ಖಚಿತಪಡಿಸಿಕೊಳ್ಳಬೇಕು.

ಜೊತೆಗೆ ಓಯಸಿಸ್ ಐಡಿ ಹೊಂದಿರುವ ಎಲ್ಲಾ ಶಿಕ್ಷಕರಿಗೆ ತರಬೇತಿ ನೀಡಲಾಗುವುದು. ಹಲವಾರು ಡ್ರೈ ರನ್‌ಗಳು ಇರುತ್ತವೆ. ಸಮಸ್ಯೆ ಪರಿಹಾರಕ್ಕಾಗಿ ಕಾಲ್ ಸೆಂಟರ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಪರೀಕ್ಷಾ ಮಂಡಳಿಯು ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಸೂಚನಾ ವೀಡಿಯೊಗಳನ್ನು ಸಹ ಬಿಡುಗಡೆ ಮಾಡುತ್ತಿದೆ.

ಇದನ್ನೂ ಓದಿ: ಶಾಲೆಯಲ್ಲಿ ಮಹಿಳೆಯ ಅಟ್ಟಹಾಸ: ಗುಂಡಿನ ದಾಳಿಗೆ 10 ಬಲಿ, 25ಕ್ಕೂ ಹೆಚ್ಚು ಜನರಿಗೆ ಗಾಯ

Read more Photos on
click me!

Recommended Stories