ಭಾರತೀಯ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಮಾಡಲು ಬೆಸ್ಟ್ ಎನಿಸಿದ ಟಾಪ್ 5 ಮಧ್ಯ ಏಷ್ಯಾ ದೇಶಗಳಿವು

Published : Jun 06, 2025, 08:14 PM IST

ಭಾರತದಲ್ಲಿ ಸರ್ಕಾರಿ ವೈದ್ಯಕೀಯ ಸೀಟುಗಳು ಕಡಿಮೆ ಇರುವುದರಿಂದ ಹಾಗೂ ಖಾಸಗಿ ಕಾಲೇಜುಗಳು ದುಬಾರಿಯಾಗಿರುವುದರಿಂದ ವಿದ್ಯಾರ್ಥಿಗಳು ಮಧ್ಯ ಏಷ್ಯಾದ ದೇಶಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವುದಕ್ಕೆ ಆಸಕ್ತಿ ತೋರುತ್ತಿದ್ದಾರೆ. ಭಾರತೀಯರಿಗೆ ಅಗ್ಗವೆನಿಸಿದ ಮಧ್ಯ ಏಷ್ಯಾದ ದೇಶಗಳ ಬಗ್ಗೆ ಇಲ್ಲಿದೆ ಮಾಹಿತಿ.

PREV
18
ವೈದ್ಯಕೀಯ ಕಾಲೇಜುಗಳ ಕೊರತೆ

ಭಾರತದಲ್ಲಿ ಪ್ರತಿವರ್ಷ ವೈದ್ಯರಾಗುವ ಕನಸಿನಿಂದ ಲಕ್ಷಾಂತರ ಆಕಾಂಕ್ಷಿಗಳು ವೈದ್ಯಕೀಯ ಪ್ರವೇಶ ಪರೀಕ್ಷೆ ಪಾಸು ಮಾಡುತ್ತಾರೆ. ಆದರೆ ಭಾರತದಾದ್ಯಂತ ಲಭ್ಯವಿರುವ ಸರ್ಕಾರಿ ವೈದ್ಯಕೀಯ ಸೀಟುಗಳು 55,616 ಮಾತ್ರ, ಹಾಗೂ ಇಡೀ ಭಾರತದಲ್ಲೇ ಒಟ್ಟು 434 ಸರ್ಕಾರಿ ವೈದ್ಯಕೀಯ ಕಾಲೇಜುಗಳಿವೆ. ಮತ್ತುಳಿದವು ಎಲ್ಲವೂ ದುಬಾರಿ ಹಾಗೂ ಖಾಸಗಿ ಕಾಲೇಜುಗಳಾಗಿವೆ. ಹೀಗಾಗಿ ಬಹುತೇಕರ ವೈದ್ಯ ವೃತ್ತಿಯ ಕನಸು ಭಗ್ನಗೊಂಡು ಬಿಡುತ್ತದೆ.

28
ಭಾರತದಲ್ಲಿ ಖಾಸಗಿಯಾಗಿ ಎಂಬಿಬಿಎಸ್ ಮಾಡುವುದು ಅತೀ ದುಬಾರಿ

ಹೀಗೆ ವೈದ್ಯಕೀಯ ಪ್ರವೇಶ ಪರೀಕ್ಷೆ ಪಾಸು ಮಾಡಿದ ಅನೇಕರಿಗೆ ಭಾರತದ ಖಾಸಗಿ ಕಾಲೇಜುಗಳಲ್ಲಿ ವೈದ್ಯಕೀಯ ಕೋರ್ಸ್‌ ಓದುವಷ್ಟು ಆರ್ಥಿಕ ಸಾಮರ್ಥ್ಯ ಇರುವುದಿಲ್ಲ, ಏಕೆಂದರೆ ಭಾರತದ ಖಾಸಗಿ ವೈದ್ಯಕೀಯ ಕಾಲೇಜುಗಳು ಅತೀ ದುಬಾರಿ. ಅಲ್ಲದೇ ವಿದ್ಯಾರ್ಥಿಗಳು ಕೂಡ ನೀಟ್ ಯುಜಿಯಲ್ಲಿ ಕಟ್‌-ಆಫ್‌ ಪಡೆಯಲು ವಿಫಲರಾಗುವುದು ಕೂಡ ಇದಕ್ಕೆ ಕಾರಣ.

38
ಮಧ್ಯ ಏಷ್ಯಾದ ದೇಶಗಳತ್ತ ವಿದ್ಯಾರ್ಥಿಗಳ ಚಿತ್ತ

ಹೀಗಾಗಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಈಗ ಮಧ್ಯ ಏಷ್ಯಾದ ದೇಶಗಳಲ್ಲಿ ತಮ್ಮ ವೈದ್ಯರಾಗುವ ಕನಸುನನ್ನು ನನಸಾಗಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಇದಕ್ಕಾಗಿ ಅವರು ಮಧ್ಯ ಏಷ್ಯಾದ ದೇಶಗಳಲ್ಲಿ ಹುಡುಕಾಟ ನಡೆಸುತ್ತಾರೆ. ಹೀಗಿರುವಾಗ ವೈದ್ಯಕೀಯ ಶಿಕ್ಷಣವನ್ನು ಪೂರೈಸುವುದಕ್ಕೆ ಬೆಸ್ಟ್ ಎನಿಸಿದ ಕೆಲ ಮಧ್ಯ ಏಷ್ಯಾ ದೇಶಗಳ ಬಗ್ಗೆ ನಾವೀಗ ನೋಡೋಣ.

48
ಅಗ್ಗದಲ್ಲಿ ವೈದ್ಯಕೀಯ ಶಿಕ್ಷಣ ನೀಡುವ ದೇಶಗಳು

ಕಜಕಿಸ್ತಾನ, ಉಜ್ಬೇಕಿಸ್ತಾನ, ಕಿರ್ಗಿಸ್ತಾನ, ತಜಕಿಸ್ತಾನ ಮುಂತಾದ ದೇಶಗಳು ಭಾರತೀಯ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯುವುದಕ್ಕೆ ಹೆಚ್ಚು ಜನಪ್ರಿಯವಾಗಿರುವ ದೇಶಗಳಾಗಿವೆ. ಉಜ್ಬೇಕಿಸ್ತಾನದ ಹೆಚ್ಚಿನ ವಿಶ್ವವಿದ್ಯಾಲಯಗಳು ಅಥವಾ ಮೆಡಿಕಲ್ ಕಾಲೇಜುಗಳು ಇಂಗ್ಲೀಷ್ ಮಾಧ್ಯಮದಲ್ಲಿ ವೈದ್ಯಕೀಯ ಶಿಕ್ಷಣವನ್ನು ನೀಡುತ್ತವೆ. ಜೊತೆಗ ನೀಟ್ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತವೆ.

58
ಅಗ್ಗದಲ್ಲಿ ವೈದ್ಯಕೀಯ ಶಿಕ್ಷಣ ನೀಡುವ ದೇಶಗಳು

ಹಾಗೆಯೇ ಕಿರ್ಗಿಸ್ತಾನವೂ ಭಾರತೀಯ ವಿದ್ಯಾರ್ಥಿಗಳಿಗೆ ಎನ್‌ಎಂಸಿ ಮಾನದಂಡ ಅಂದರೆ ರಾಷ್ಟ್ರೀಯ ವೈದ್ಯಕೀಯ ಕಮೀಷನ್‌ನ ಮಾನದಂಡದ ಮೇಲೆ ಒಂದು ವರ್ಷದ ಕ್ಲಿನಿಕಲ್ ಇಂಟರ್ನ್‌ಶಿಪ್ ಜೊತೆ ಅಗ್ಗದಲ್ಲಿ ವೈದ್ಯಕೀಯ ಶಿಕ್ಷಣ ನೀಡುತ್ತದೆ.

68
ಅಗ್ಗದಲ್ಲಿ ವೈದ್ಯಕೀಯ ಶಿಕ್ಷಣ ನೀಡುವ ದೇಶಗಳು

ಹಾಗೆಯೇ ಕಜಕಿಸ್ತಾನವೂ ಕೂಡ ಭಾರತೀಯ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಮಾಡುವುದಕ್ಕೆ ಒಂದು ಒಳ್ಳೆಯ ಸ್ಥಳವಾಗಿದೆ. ಇಲ್ಲಿ ಕೈಗೆಟುಕುವ ಭೋದನಾ ವೆಚ್ಚದ ಜೊತೆ ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಬಹುದಾಗಿದೆ.

78
ಅಗ್ಗದಲ್ಲಿ ವೈದ್ಯಕೀಯ ಶಿಕ್ಷಣ ನೀಡುವ ದೇಶಗಳು

ಇದರ ತಜಕಿಸ್ತಾನವೂ ಕೂಡ ತನ್ನ ಇಂಗ್ಲೀಷ್ ಮಾಧ್ಯಮ ಶಿಕ್ಷಣದ ಮೂಲಕ ಕಡಿಮೆ ಭೋಧನಾ ವೆಚ್ಚದ ಜೊತೆ ವೈದ್ಯಕೀಯ ಶಿಕ್ಷಣವನ್ನು ನೀಡುವ ಮತ್ತೊಂದು ದೇಶವಾಗಿದೆ. ಈ ಮೂಲಕ ಇದು ಭಾರತೀಯ ವಿದ್ಯಾರ್ಥಿಳನ್ನು ಆಕರ್ಷಿಸಿದೆ.

88
ಅಗ್ಗದಲ್ಲಿ ವೈದ್ಯಕೀಯ ಶಿಕ್ಷಣ ನೀಡುವ ದೇಶಗಳು

ಜಾರ್ಜಿಯಾ: ಈ ದೇಶ ಯುರೋಪ್ ಹಾಗೂ ಜಾರ್ಜಿಯಾದ ಮಧ್ಯೆ ಇದ್ದರೂ ಕೂಡ ಜಾರ್ಜಿಯಾವನ್ನು ಮಧ್ಯ ಏಷ್ಯಾದ ಎಂಬಿಬಿಎಸ್ ಕೇಂದ್ರಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಇದು ಜಾಗತಿಕವಾಗಿ ಮಾನ್ಯತೆ ಪಡೆದ ಪದವಿಗಳು ಅಧುನಿಕ ಶಿಕ್ಷಣವನ್ನು ನೀಡುತ್ತದೆ.

Read more Photos on
click me!

Recommended Stories