ನೀವು ವಾಹನ ವಿಮೆ ಮಾಡುವಾಗ ಎನ್‌ಸಿಬಿ ಲಾಭ ಪಡೆದಿದ್ದೀರಾ? NCB ಮೂಲಕ ನಿಮ್ಮ ಪ್ರಿಮಿಯಂ ಮೊತ್ತದಲ್ಲಿ ಶೇಕಡಾ 50ರಷ್ಟು ಡಿಸ್ಕೌಂಟ್ ಪಡೆಯಬಹುದು. ಇದರಿಂದ ವಿಮೆ ಪ್ರೀಮಿಯಂ ಮೊತ್ತ ಗಣನೀಯವಾಗಿ ಕಡಿಮೆಯಾಗುತ್ತದೆ.
ವಾಹನಗಳ ವಿಮೆ ಮಾಡಿಸುವಾಗ ಜಾಗರೂಕರಾಗಿರಬೇಕು. ಕೆಲ ವಿಚಾರಗಳಲ್ಲಿ ಮೋಸ ಹೋಗುವುದೇ ಹೆಚ್ಚು. ವಿಶೇಷವಾಗಿ ಇನ್ಶೂರೆನ್ಸ್ ರಿನೀವಲ್ ಮಾಡುವಾಗ ಎನ್‌ಸಿಬಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಹಲವರು ವಾಹನಗಳ ವಿಮೆಯಲ್ಲಿ ಯಾವುದೇ ಕ್ಲೇಮ್ ಮಾಡಿರುವುದಿಲ್ಲ. ಇಂತಹವರು ಗರಿಷ್ಠ ಅಂದರೆ ಶೇಕಡಾ 50ರಷ್ಟು ಎನ್‌ಸಿಬಿ ಪಡೆಯಲು ಸಾಧ್ಯವಿದೆ.
26
ಪ್ರೀಮಿಯಂ ಅರ್ಧದಷ್ಟು ಕಡಿಮೆ
ವಾಹನ ಇನ್ಶೂರೆನ್ಸ್ ಪ್ರೀಮಿಯಂನಲ್ಲಿ ದೊಡ್ಡ ಮೊತ್ತ ಉಳಿತಾಯ ಮಾಡಲು 'ನೋ ಕ್ಲೇಮ್ ಬೋನಸ್ (NCB) ಒಂದು ಸೂಪರ್ ಐಡಿಯಾ. ಇನ್ಶೂರೆನ್ಸ್ ಪಾಲಿಸಿ ಅವಧಿಯಲ್ಲಿ ಯಾವುದೇ ಅಪಘಾತ ಅಥವಾ ಡ್ಯಾಮೇಜ್‌ಗೆ ನೀವು ಕ್ಲೇಮ್ ಮಾಡಿಲ್ಲ ಅಂದ್ರೆ, ಇನ್ಶೂರೆನ್ಸ್ ಕಂಪನಿಗಳು ಪಾಲಿಸಿದಾರರಿಗೆ ಒಂದು ರಿವಾರ್ಡ್ ಕೊಡುತ್ತವೆ. ಇದೇ ನೋ ಕ್ಲೇಮ್ ಬೋನಸ್. ಇದರ ಲಾಭವನ್ನು ಸರಿಯಾಗಿ ಪಡೆದುಕೊಂಡರೆ, ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಅರ್ಧದಷ್ಟು ಕಡಿಮೆ ಮಾಡಬಹುದು.
36
ಏನಿದು ನೋ ಕ್ಲೇಮ್ ಬೋನಸ್?
ಇನ್ಶೂರೆನ್ಸ್ ರಿನ್ಯೂ ಮಾಡುವಾಗ 'ಓನ್ ಡ್ಯಾಮೇಜ್' (ನಿಮ್ಮ ಸ್ವಂತ ವಾಹನಕ್ಕಾಗುವ ಹಾನಿ) ಪ್ರೀಮಿಯಂ ಮೇಲೆ ಸಿಗುವ ಡಿಸ್ಕೌಂಟ್ ಇದು. ಮೊದಲ ವರ್ಷ ನೀವು ಯಾವುದೇ ಕ್ಲೇಮ್ ಮಾಡಿಲ್ಲ ಅಂದ್ರೆ, ಪ್ರೀಮಿಯಂನಲ್ಲಿ 20% ರಿಯಾಯಿತಿ ಸಿಗುತ್ತದೆ. ಇದೇ ರೀತಿ ಸತತ ಐದು ವರ್ಷ ಕ್ಲೇಮ್ ಮಾಡದೆ ಪಾಲಿಸಿ ಮುಂದುವರಿಸಿದರೆ, ಈ ರಿಯಾಯಿತಿ 50% ವರೆಗೆ ಹೆಚ್ಚಾಗುತ್ತದೆ. ಉದಾಹರಣೆಗೆ, ನಿಮ್ಮ ಗಾಡಿಯ ಪ್ರೀಮಿಯಂ 35,000 ರೂಪಾಯಿ ಅಂದುಕೊಳ್ಳಿ. ಮೊದಲ ಕ್ಲೇಮ್-ಫ್ರೀ ವರ್ಷದ ನಂತರ ನಿಮಗೆ 7,000 ರೂಪಾಯಿ ಕಡಿಮೆ ಆಗುತ್ತದೆ. ಇದೇ ರೀತಿ ಐದು ವರ್ಷ ಕ್ಲೇಮ್ ಮಾಡದಿದ್ದರೆ ಬರೋಬ್ಬರಿ 17,500 ರೂಪಾಯಿ ಉಳಿಸಬಹುದು.
NCBಯ ಅತಿದೊಡ್ಡ ಪ್ಲಸ್ ಪಾಯಿಂಟ್ ಅಂದ್ರೆ, ಇದು ಗಾಡಿಗಲ್ಲ, ಅದರ ಮಾಲೀಕರಿಗೆ ಸಿಗೋದು. ಹಾಗಾಗಿ, ನೀವು ಹಳೆ ಕಾರ್ ಮಾರುವಾಗ ಅಥವಾ ಹೊಸ ಕಾರ್ ಕೊಂಡುಕೊಳ್ಳುವಾಗ ನಿಮ್ಮ ಬೋನಸ್ ಅನ್ನು ಹೊಸ ಗಾಡಿಗೆ ವರ್ಗಾಯಿಸಬಹುದು. ಅಷ್ಟೇ ಅಲ್ಲ, ನೀವು ಇನ್ಶೂರೆನ್ಸ್ ಕಂಪನಿ ಬದಲಾಯಿಸಿದರೂ ಈ ಬೋನಸ್ ನಿಮ್ಮ ಕೈತಪ್ಪಿ ಹೋಗಲ್ಲ.
56
ಸಣ್ಣಪುಟ್ಟ ಕ್ಲೇಮ್‌ಗಳು ಲಾಭವೋ? ನಷ್ಟವೋ?
ಸಣ್ಣ ಮೊತ್ತದ ರಿಪೇರಿ ಖರ್ಚುಗಳಿಗೆಲ್ಲಾ ಇನ್ಶೂರೆನ್ಸ್ ಕ್ಲೇಮ್ ಮಾಡಿದರೆ, ದೀರ್ಘಾವಧಿಯಲ್ಲಿ ನಿಮಗೆ ನಷ್ಟವೇ ಹೆಚ್ಚು. ಯಾಕಂದ್ರೆ, ಸಣ್ಣ ಕ್ಲೇಮ್‌ನಿಂದಾಗಿ ನೀವು ದೊಡ್ಡ ಮೊತ್ತದ NCB ಕಳೆದುಕೊಳ್ಳಬೇಕಾಗಬಹುದು.ಹಳೆ ಗಾಡಿ ಮಾರುವಾಗ, ಆ ಮಾಹಿತಿಯನ್ನು ನಿಮ್ಮ ಇನ್ಶೂರೆನ್ಸ್ ಕಂಪನಿಗೆ ತಿಳಿಸಿ 'NCB ರಿಟೆನ್ಷನ್ ಸರ್ಟಿಫಿಕೇಟ್' ಪಡೆದುಕೊಳ್ಳಬೇಕು. ನಿಮ್ಮ NCB ಲಾಭವು ಗಾಡಿ ಖರೀದಿಸಿದವರಿಗೆ ಸಿಗುವುದಿಲ್ಲ. ಅದನ್ನು ನೀವು ಹೊಸ ಗಾಡಿ ಖರೀದಿಸುವಾಗ ಬಳಸಿಕೊಳ್ಳಬಹುದು.
66
90 ದಿನಗಳ ನಿಯಮ:
ಇನ್ಶೂರೆನ್ಸ್ ಅವಧಿ ಮುಗಿದ 90 ದಿನಗಳ ಒಳಗೆ ಅದನ್ನು ರಿನ್ಯೂ ಮಾಡಿಲ್ಲ ಅಂದ್ರೆ, ನೀವು ಕಷ್ಟಪಟ್ಟು ಗಳಿಸಿದ NCB ಪೂರ್ತಿಯಾಗಿ ಲ್ಯಾಪ್ಸ್ ಆಗುತ್ತದೆ. ಒಂದು ವೇಳೆ ಗಾಡಿ ಕಳ್ಳತನವಾಗಿ, ನೀವು ಪಾಲಿಸಿ ಹಣವನ್ನು ಕ್ಲೇಮ್ ಮಾಡಿದರೆ, ನಿಮ್ಮ NCB ಸೊನ್ನೆ ಆಗುತ್ತದೆ. ಇನ್ನು IDV ಅಂದ್ರೆ ನಿಮ್ಮ ವಾಹನದ ಮಾರುಕಟ್ಟೆ ಮೌಲ್ಯ. NCBಯಿಂದ ಗಾಡಿಯ ಬೆಲೆ ಕಮ್ಮಿ ಆಗಲ್ಲ, ಬದಲಿಗೆ ನೀವು ಕಟ್ಟಬೇಕಾದ ಇನ್ಶೂರೆನ್ಸ್ ಪ್ರೀಮಿಯಂ ಮಾತ್ರ ಕಡಿಮೆಯಾಗುತ್ತದೆ