ಟೂಲ್ ಬೂತ್‌ಗಳಲ್ಲಿ ಹೆಚ್ಚಿನ ಸಮಯ ವ್ಯರ್ಥವಾಗುವುದನ್ನು ತಪ್ಪಿಸಲು ಹಾಗೂ ಪಾರದರ್ಶಕತೆ ನಿಟ್ಟಿನಿಂದ ಭಾರತದಲ್ಲಿ ಫಾಸ್ಟ್ಯಾಗ್ ಪಾವತಿ ವ್ಯವಸ್ಥೆ ಜಾರಿಯಲ್ಲಿದೆ. ಇದರಿಂದ ಪ್ರಯಾಣವು ಸುಲಭವಾಗಿದೆ.
ಸದ್ಯ ಹೊಸ ಫಾಸ್ಟ್ಯಾಗ್ ನೀತಿ ಜಾರಿಯಲ್ಲಿದೆ. ಹೊಸ ನೀತಿ ಪ್ರಕಾರ, ನಿಮ್ಮ ಫಾಸ್ಟ್ಯಾಗ್ 5 ವರ್ಷಕ್ಕಿಂತ ಹಳೆಯದಾಗಿದ್ದರೆ ಕಡ್ಡಾಯವಾಗಿ ಬದಲಿಸಬೇಕು. ನಿಮ್ಮ ಹಳೆಯ ಫಾಸ್ಟ್ಯಾಗ್ ಖಾತೆಗೆ ಹೊಸ ಟ್ಯಾಗ್ ನೀಡಲಾಗುತ್ತದೆ.
ಹಳೇ ಟ್ಯಾಗ್ ಬದಲಿಸದಿದ್ದರೆ, ಟೋಲ್ ಬೂತ್‌ಗಳಲ್ಲಿ ಫಾಸ್ಟ್ಯಾಗ್ ಕಾರ್ಯನಿರ್ವಹಣೆ ಅಥವಾ ರೀಚಾರ್ಜ್ ವೇಳೆ ಸಮಸ್ಯೆಗಳು ಎದುರಾಗಲಿದೆ. ಇದರಿಂದ ಪ್ರಯಾಣ ತಲೆನೋವು ಹೆಚ್ಚಿಸಲಿದೆ.
ಫಾಸ್ಟ್ಯಾಗ್ 3 ವರ್ಷಕ್ಕಿಂತ ಹಳೆಯದಾಗಿದ್ದರೆ, ಕಡ್ಡಾಯವಾಗಿ ಕೆವೈಸಿ ಅಪ್‌ಡೇಟ್ ಮಾಡಿಸಬೇಕು. ಎಲ್ಲಾ ಮಾಹಿತಿ ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಬೇಕು.
ಫಾಸ್ಟ್ಯಾಗ್ ಖಾತೆಗೆ ವಾಹನ ರಿಜಿಸ್ಟ್ರೇಶನ್ ನಂಬರ್, ಚಾಸಿ ನಂಬರ್ ಸೇರಿದಂತೆ ವಾಹನದ ಇತರ ಮಾಹಿತಿಗಳನ್ನು ಲಿಂಕ್ ಮಾಡಬೇಕು. ಈ ಪೈಕಿ ಒಂದು ಮಾಹಿತಿ ಕೊರತೆ ಇದ್ದರೂ ಫಾಸ್ಟಾಗ್ ಕಾರ್ಯನಿರ್ವಹಿಸುವುದಿಲ್ಲ.
ಮಾಲೀಕರ ಹೆಸರು, ಫೋನ್ ನಂಬರ್, ಇಮೇಲ್ ಐಡಿ ಸೇರಿದಂತೆ ಇತರ ಕೆಲ ಅಗತ್ಯ ಮಾಹಿತಿಗಳನ್ನು ಲಿಂಕ್ ಮಾಡಬೇಕು. ಇದು ಕೂಡ ಕಡ್ಡಾಯವಾಗಿ ಮಾಡಲೇಬೇಕು.
ಹೊಸ ವಾಹನ ಖರೀದಿಸುವಾಗ ರಿಜಿಸ್ಟ್ರೇಶನ್ ಆದ ವಾಹನ ಗರಿಷ್ಠ 90 ದಿನದ ಒಳಗೆ ಫಾಸ್ಟ್ಯಾಗ್ ಖಾತೆಯನ್ನು ಲಿಂಕ್ ಮಾಡಬೇಕು. ಈ ಮೇಲಿನ ಎಲ್ಲಾ ಪ್ರಕ್ರಿಯೆಯೊಂದಿಗೆ ಹೊಸ ಫಾಸ್ಟ್ಯಾಗ್ ಖಾತೆ ತೆರೆದು ಲಿಂಕ್ ಮಾಡಿಸಬೇಕು.
ವಾಹನ ಡೇಟಾಬೇಸ್‌ನಲ್ಲಿರುವ ಮಾಹಿತಿಗೂ, ಫಾಸ್ಟಾಗ್‌ನಲ್ಲಿನ ಮಾಹಿತಿ ಹೊಂದಿಕೆಯಾಗಬೇಕು. ವ್ಯತ್ಯಾಸಗಳಿದ್ದರೆ ಫಾಸ್ಟ್ಯಾಗ್ ಆಕ್ಟಿವೇಟ್ ಆಗುವುದಿಲ್ಲ.
ಭಾರತದಲ್ಲಿ ಸುಮಾರು 1,000ಕ್ಕೂ ಹೆಚ್ಚು ಟೂಲ್ ಬೂತ್‌ಗಳಿವೆ. ಬರೋಬ್ಬರಿ 80 ಮಿಲಿಯನ್ ಬಳಕೆದಾರರು ಫಾಸ್ಟ್ಯಾಗ್ ಮೂಲಕ ಪಾವತಿ ಮಾಡಿ ಸಾಗುತ್ತಿದ್ದಾರೆ.
45,000 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್ ವೇಗಳಲ್ಲಿ ಟೂಲ್ ಬೂತ್ ಅಳವಡಿಸಲಾಗಿದೆ. ಎಲೆಕ್ಟ್ರಾನಿಕ್ ಸಿಸ್ಟಮ್ ಮೂಲಕ ಪ್ರಯಾಣದ ಅಡೆ ತಡೆಗಳಿಗೆ ಮುಕ್ತಿ ನೀಡಲಾಗಿದೆ.