ಕೆಲವೇ ಮಂದಿಯಲ್ಲಿರುವ ದುಬಾರಿ ವಾಹನ ಖರೀದಿಸಿದ್ದಾರೆ ಮಾಧವನ್, ದುಬೈನಲ್ಲಿ ಪಾರ್ಕಿಂಗ್!

First Published | Mar 18, 2024, 8:55 PM IST

ಬಾಲಿವುಡ್ ನಟ ಆರ್ ಮಾಧವನ್ ತುಂಬಾ ಸಿಂಪಲ್ ನಟ. ಹೀಗಾಗಿ ಐಷಾರಾಮಿ ಕಾರು, ಬೈಕ್ ಕುರಿತು ಅತೀಯಾದ ವ್ಯಾಮೋಹವಿಲ್ಲ. ಆದರೆ ಇದೀಗ ಆರ್ ಮಾಧವನ್ ಭಾರತದಲ್ಲಿ ಅಂಬಾನಿ, ಸಿಂಘಾನಿಯಾ ಸೇರಿದಂತೆ ಕೆಲವೇ ಮಂದಿಯಲ್ಲಿರುವ ಐಷಾರಾಮಿ, ಅತೀ ದುಬಾರಿ ವಾಹನ ಖರೀದಿಸಿದ್ದಾರೆ. ಈ ವಾಹವನ್ನು ದುಬೈನಲ್ಲಿ ಪಾರ್ಕ್ ಮಾಡಿದ್ದಾರೆ.
 

ಆರ್ ಮಾಧವನ್ ತಮ್ಮ ಪಾತ್ರಕ್ಕೆ ಪರಿಪೂರ್ಣ ಜೀವ ತುಂಬುವ ನಟ. ಚಿತ್ರಗಳ ಆಯ್ಕೆಯಲ್ಲೂ ಅಷ್ಟೇ ಜಾಣತನ, ವಿವಾದಗಳಿಲ್ಲ, ಆಡಂಬರವಿಲ್ಲ. ನಟನೆಯಿಂದ ಕೋಟಿ ಕೋಟಿ ಆದಾಯ ಸಂಪಾದಿಸುತ್ತಿದ್ದರೂ ಮಾಧವನ್ ತುಂಬಾ ಸಿಂಪಲ್.
 

ಆರ್ ಮಾಧವನ್‌ಗೆ ಐಷಾರಾಮಿ ಕಾರು ಬೈಕ್‌ಗಳ ಅತಿಯಾದ ವ್ಯಾಮೋಹವಿಲ್ಲ. ಆದರೆ ಮಾಧವನ್ ಅತೀ ದುಬಾರಿ, ಐಷಾರಾಮಿ ವಾಹನವೊಂದನ್ನು ಖರೀದಿಸಿದ್ದಾರೆ. ಭಾರತದಲ್ಲಿ ಕೆಲವೇ ಕೆಲವು ಮಂದಿಯಲ್ಲಿ ಈ ವಾಹನವಿದೆ.
 

Tap to resize

ಇಷ್ಟೇ ಅಲ್ಲ ಈ ದುಬಾರಿ ವಾಹನವನ್ನು ಮಾಧವನ್ ಪಾರ್ಕ್ ಮಾಡಿರುವುದು ದುಬೈನಲ್ಲಿ. ಹೌದು, ಮಾಧವನ್ ಖರೀದಿಸಿದ ವಾಹನ ಅತೀ ದುಬಾರಿ ಯಾಚ್(ಖಾಸಗಿ ನೌಕೆ)
 

ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಆರ್ ಮಾಧವನ್ ಈ ಮಾಹಿತಿ ಬಹಿರಂಗಪಡಿಸಿದ್ದಾರೆ. ಖಾಸಗಿ ವಿಹಾರ ನೌಕೆ ಖರೀದಿಸಬೇಕು ಅನ್ನೋದು ನನ್ನ ಬಹುದೊಡ್ಡ ಕನಸಾಗಿತ್ತು. ಅದನ್ನು ಪೂರೈಸಿದ್ದೇನೆ ಎಂದಿದ್ದಾರೆ.
 

ಇಷ್ಟೇ ಅಲ್ಲ, ಈ ಯಾಚ್ ಖರೀದಿಸುವುದಕ್ಕಿಂತ ಮೊದಲು ಕ್ಯಾಪ್ಟನ್ ಲೈಸೆನ್ಸ್ ಕೂಡ ಪಡೆದುಕೊಂಡಿದ್ದಾರೆ. ಇದು ಸುಲಭದ ಮಾತಲ್ಲ. ನೌಕೆಯ ಕ್ಯಾಪ್ಟನ್ ಲೈಸೆನ್ಸ್ ಪಡೆದ ಭಾರತದ ಏಕೈಕ ನಟ ಆರ್ ಮಾಧವನ್.
 

40 ಫೀಟ್ ಬೋಟ್ ಅಥವಾ ಬೋಟ್ ಚಲಾಯಿಸುವ ಲೈಸೆನ್ಸ್ ಮಾಧವನ್‌ಗಿದೆ. ಇದಕ್ಕಾಗಿ 1 ವರ್ಷ ಕಷ್ಟಪಟ್ಟಿದ್ದಾರೆ. 6 ತಿಂಗಳು ಓದಿದ್ದಾರೆ. ಮತ್ತೆ ಆರು ತಿಂಗಳು ತರಬೇತಿ ಪಡೆದಿದ್ದಾರೆ. 
 

actor r madhavan named new president of ftii nsn

ಕೋವಿಡ್ ಸಮಯದಲ್ಲಿ ಕ್ಯಾಪ್ಟನ್ ಲೈಸೆನ್ಸ್ ಪರೀಕ್ಷೆ ಬರೆದು ಪಾಸ್ ಮಾಡಿದ್ದರು. ಬಳಿಕ ಲೈಸೆನ್ಸ್ ಪಡೆದಕೊಂಡಿದ್ದಾರೆ. ಮಾಧವನ್ ಖರೀದಿಸಿದ ಯಾಚ್ ದುಬೈನಲ್ಲಿದೆ. ಅಲ್ಲಿ ಪಾರ್ಕ್ ಮಾಡಿದ್ದಾರೆ. ತಿಂಗಳಿಗೊಂದು ಬಾರಿ ಮಾಧವನ್ ದುಬೈಗೆ ತೆರಳಿ ಯಾಚ್ ಚಲಾಯಿಸುತ್ತಾರೆ.

ಇದರ ಬೆಲೆ ಕುರಿತು ಮಾಧನ್ ಮಾಹಿತಿ ಬಹಿರಂಗಪಡಿಸಿಲ್ಲ. ಆದರೆ ಖಾಸಗಿ ನೌಕೆಗಳ ಬೆಲೆ 50 ಕೋಟಿ ರೂಪಾಯಿಂದ ಆರಂಭಗೊಳ್ಳುತ್ತದೆ. 300 ಕೋಟಿ, 500 ಕೋಟಿ ರೂ ಯಾಚ್‌ಗಳು ಇವೆ. ಭಾರತದಲ್ಲಿ ಉದ್ಯಮಿ ಮುಕೇಶ್ ಅಂಬಾನಿ, ಗೌತಮ್ ಸಿಂಘಾನಿಯಾ, ಲಕ್ಷ್ಮಿ ಮಿತ್ತಲ್ ಸೇರಿದಂತೆ ಕೆಲವೇ ಕೆಲವು ಮಂದಿ ಯಾಚ್ ಮಾಲೀಕರಾಗಿದ್ದಾರೆ.
 

Latest Videos

click me!