ಯಾವುದೇ ಬ್ಯಾಂಕ್ FASTag ಆಗಿರಲಿ, ಕೆವೈಸಿ ಪೂರ್ಣಗೊಳಿಸಲು ಫೆ.29 ಕೊನೆಯ ದಿನ!

First Published Feb 26, 2024, 12:03 PM IST

ಫಾಸ್ಟ್ಯಾಗ್ ಕೆವೈಸಿ ಅಪ್‌ಡೇಟ್ ಮಾಡಲು ಫೆ.29 ಕೊನೆಯ ದಿನ. ಫೆ.29ರ ಬಳಿಕ ಕೆವೈಸಿ ಪೂರ್ಣಗೊಳ್ಳದ ಫಾಸ್ಟ್ಯಾಗ್ ಕಾರ್ಯನಿರ್ವಹಿಸುವುದಿಲ್ಲ. ವಿಸ್ತರಿಸಿದ ಗಡುವು ಅಂತ್ಯಗೊಳ್ಳುತ್ತಿದ್ದು, ಸುಲಭವಾಗಿ ಕೆವೈಸಿ ಪೂರ್ಣಗೊಳಿಸಿ ಸಂಕಷ್ಟದಿಂದ ಮುಕ್ತರಾಗಲು ಇಲ್ಲಿದೆ ಟಿಪ್ಸ್

ಹೆದ್ದಾರಿ ರಸ್ತೆಗಳಲ್ಲಿ ಟೋಲ್ ಪಾವತಿಸಲು ಫಾಸ್ಟ್ಯಾಗ್ ಕಡ್ಡಾಯ. 32 ಅಧಿಕೃತ ಬ್ಯಾಂಕ್‌ಗಳಿಂದ ಫಾಸ್ಟ್ಯಾಗ್ ಪಡೆದು ವಾಹನದಲ್ಲಿ ಅಳವಡಿಸಿದ ಮಾಲೀಕರು ಮತ್ತೊಮ್ಮೆ ಕೆವೈಸಿ ಪರಿಶೀಲಿಸುವುದು ಅಗತ್ಯ.
 

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಫಾಸ್ಟ್ಯಾಗ್‌ಗೆ ಕೆವೈಸಿ ಅಪ್ಡೇಟ್‌ ಮಾಡಲು ನೀಡಲಾಗಿದ್ದ ಗಡುವನ್ನು ಒಂದು ತಿಂಗಳು ವಿಸ್ತರಣೆ ಮಾಡಿದೆ. ಈ ಅವಧಿ ಫೆಬ್ರವರಿ 29ಕ್ಕೆ ಅಂತ್ಯಗೊಳ್ಳುತ್ತಿದೆ.

ಜನರು ಹೆದ್ದಾರಿ ಟೋಲ್‌ಗಳಲ್ಲಿ, ತಮ್ಮ ಬ್ಯಾಂಕ್‌ಗಳಲ್ಲಿ ಹಾಗೂ ರಾಷ್ಟ್ರೀಯ ಹೆದ್ದಾರಿ ಫಾಸ್ಟ್ಯಾಗ್ ವೆಬ್‌ಸೈಟ್‌ನಲ್ಲಿ ಇ-ಕೆವೈಸಿ ಸುಲಭವಾಗಿ ಅಪ್‌ಡೇಟ್ ಮಾಡಬಹುದು. 

ಫಾಸ್ಟ್ಯಾಗ್ ವೆಬ್‌ಸೈಟ್ ಮೂಲಕ ನಿಮ್ಮ ಫಾಸ್ಟ್ಯಾಗ್ ಐಡಿ ಮುಖಾಂತರ ಖಾತೆಗೆ ಲಾಗಿನ್ ಆಗಿ. ಬಳಿಕ ನಿಮ್ಮ ಫಾಸ್ಟ್ಯಾಗ್ ಪ್ರೊಫೈಲ್ ಕ್ಲಿಕ್ ಮಾಡಿ ಕೆವೈಸಿ ಕುರತು ಪರಿಶಿಲಿಸಿ.

ಕೆವೈಸಿ ಫುಲ್ ಎಂದಿದ್ದರೆ ನಿಮ್ಮ ಫಾಸ್ಟ್ಯಾಗ್ ಕೆವೈಸಿ ಅಪ್‌ಡೇಟ್ ಎಂದರ್ಥ. ಆದರೆ ಅಪೂರ್ಣವಾಗಿದ್ದರೆ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಕೆವೈಸಿ ಪೂರ್ಣಗೊಳಿಸಬೇಕು.
 

ನೀವು ಫಾಸ್ಟ್ಯಾಗ್ ಪಡೆದಿರುವ ಬ್ಯಾಂಕ್‌ನ ಹತ್ತಿರದ ಶಾಖೆಗೆ ತೆರಳಿ ಅರ್ಜಿ ಪಡೆದು ಅಗತ್ಯ ದಾಖಲೆಗಳನ್ನು ಲಗತ್ತಿಸಿ ನೀಡಬೇಕು. ಹೀಗೆ ಮಾಡಿದರೂ ಕೆವೈಸಿ ಅಪ್‌ಡೇಟ್ ಮಾಡಬಹುದು. ಆದರೆ ಇನ್ನುಳಿದಿರುವುದು 3 ದಿನ ಮಾತ್ರ ಹೀಗಾಗಿ ಈಗಲೇ ಬ್ಯಾಂಕ್‌ಗೆ ತೆರಳಿ ಅರ್ಜಿ ಸಲ್ಲಿಸಬೇಕು.  

ಒಂದು ವಾಹನ ಒಂದು ಫಾಸ್ಟ್ಯಾಗ್‌ ಪರಿಕಲ್ಪನೆಯಲ್ಲಿ ಫಾಸ್ಟ್ಯಾಗ್‌ಗಳಿಗೆ ಕೆವೈಸಿ (ಗ್ರಾಹಕರ ಮಾಹಿತಿ ತಿಳಿಯುವಿಕೆ) ಅಪ್ಡೇಟ್‌ ಮಾಡಲು ಹೆದ್ದಾರಿ ಪ್ರಾಧಿಕಾರ ಸೂಚಿಸಿದೆ. ಇದರಿಂದ ಒಂದೇ ಫಾಸ್ಟ್ಯಾಗ್‌ನಿಂದ ಹಲವು ವಾಹನಗಳಲ್ಲಿ ಬಳಕೆ ಮಾಡುವ ಪ್ರಕ್ರಿಯೆ ತಪ್ಪಿಸಬಹುದಾಗಿದೆ.

ಇದುವರೆಗೆ 1.27 ಅಕ್ರಮ ಫಾಸ್ಟ್ಯಾಗ್‌ಗಳ ಪೈಕಿ ಕೇವಲ 7 ಲಕ್ಷ ಫಾಸ್ಟ್ಯಾಗ್‌ಗಳನ್ನು ಮಾತ್ರ ಇ-ಕೆವೈಸಿ ಮಾಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಫಾಸ್ಟ್ಯಾಗ್‌ಗೆ ಕೆವೈಸಿ ಅಪ್ಡೇಟ್‌ ಮಾಡಲು ನೀಡಲಾಗಿದ್ದ ಗಡುವನ್ನು ಜ.31ರಿಂದ ಮತ್ತೊಂದು ತಿಂಗಳು ವಿಸ್ತರಣೆ ಮಾಡಲಾಗಿದೆ. 

click me!