ವಿಶ್ವದ ಮೊದಲ ಫೋಲ್ಡೇಬಲ್ ಇ ಬೈಕ್ ಮೇಲೆ ಆನಂದ್ ಮಹೀಂದ್ರ ಸವಾರಿ, ಬೆಲೆ 44,999 ರೂ!

First Published | Oct 24, 2023, 3:29 PM IST

ಆನಂದ್ ಮಹೀಂದ್ರ ಇತ್ತೀಚೆಗೆ ಟ್ವಿಟರ್ ಮೂಲಕ  ಹಾರ್ನ್‌‍ಬಾಕ್ X1 ಇ ಬೈಕ್ ಕುರಿತು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ. IIT ಬಾಂಬೆ ವಿದ್ಯಾರ್ಥಿಗಳ ಅಭಿವೃದ್ಧಿಪಡಿಸಿದ ಈ ಇ ಸೈಕಲ್ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ಅಷ್ಟಕ್ಕೂ ಹಾರ್ನ್‌‍ಬಾಕ್ X1 ವಿಶೇಷತೆ, ಬೆಲೆ ಹಾಗೂ ಕಂಪನಿ ಕುರಿತು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
 

ಮಹೀಂದ್ರ ಆಟೋಮೊಬೈಲ್ ಭಾರತ ಮಾತ್ರವಲ್ಲ, ವಿಶ್ವಾದ್ಯಂತ ಅತೀ ದೊಡ್ಡ ಮಾರುಕಟ್ಟೆ ಹೊಂದಿದೆ. ಅತ್ಯುತ್ತಮ ಕಾರುಗಳನ್ನು ಮಾರಾಟ ಮಾಡುತ್ತಿರುವ ಮಹೀಂದ್ರ ಕಂಪನಿ ಚೇರ್ಮೆನ್ ಆನಂದ್ ಮಹೀಂದ್ರ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ.

ಪ್ರತಿ ದಿನ ಹೊಸ ವಿಚಾರಗಳನ್ನು ಹಂಚಿಕೊಳ್ಳುವ ಆನಂದ್ ಮಹೀಂದ್ರ ಇದೀಗ ಇ ಬೈಕ್ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹಾರ್ನ್‌‍ಬಾಕ್ X1  ಇ ಬೈಕ್ ಸವಾರಿ ಮಾಡಿ ತಮ್ಮ ಅನುಭವವನ್ನೂ ಬಿಚ್ಚಿಟ್ಟಿದ್ದಾರೆ.

Latest Videos


ಐಐಟಿ ಬಾಂಬೆ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ಇ ಬೈಕ್ ಇದು. ಇದು ವಿಶ್ವದ ಮೊದಲ ಫೋಲ್ಡೇಬಲ್ ಇ ಬೈಕ್ ಆಗಿದೆ.ಇತರ ಫೋಲ್ಡೇಬಲ್ ಬೈಕ್‌ಗಿಂತ ಶೇಕಡಾ 35 ರಷ್ಟು ಹೆಚ್ಚು ಪರಿಣಾಮಕಾರಿಯಾಗಿದೆ.
 

ವಿಶೇಷ ಅಂದರೆ  ಹಾರ್ನ್‌‍ಬಾಕ್ X1 ಇ ಬೈಕ್ ಮೇಲೆ ಆನಂದ್ ಮಹೀಂದ್ರ ಹಣ ಹೂಡಿಕೆ ಮಾಡಿದ್ದಾರೆ. ಇದೀಗ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಈ ಬೈಕ್ ಪಡೆದುಕೊಂಡಿದೆ.

ಅಮೇಜಾನ್, ಫ್ಲಿಪ್‌ಕಾರ್ಟ್‌ನಲ್ಲೂ ಹಾರ್ನ್‌‍ಬಾಕ್ X1 ಇ ಬೈಕ್ ಖರೀದಿಗೆ ಲಭ್ಯವಿದೆ. ಇದರ ಬೆಲೆ 44,999 ರೂಪಾಯಿ. ಇನ್ನು ಇ ಬೈಕ್‌ನಲ್ಲಿ 36V ಬ್ಯಾಟರಿ ಪ್ಯಾಕ್ ಬಳಸಲಾಗಿದೆ.

250W ಮೋಟಾರ್‌ನಿಂದ ಇ ಬೈಕ್ ಚಾಲಿವಾಗಿದೆ. ಒಂದು ಬಾರಿ ಹಾರ್ನ್‌‍ಬಾಕ್ X1 ಇ ಬೈಕ್ ಸಂಪೂರ್ಣ ಚಾರ್ಜ್ ಮಾಡಿದರೆ 25 ಕಿಲೋಮೀಟರ್ ಮೈಲೇಜ್ ನೀಡಲಿದೆ. 

ಆನಂದ್ ಮಹೀಂದ್ರ ಇದೇ ಇ ಬೈಕ್ ಮೂಲಕ ತಮ್ಮ ಕಚೇರಿ ಸುತ್ತ ಸುತ್ತಾಡಿದ್ದಾರೆ. ಬಳಿಕ ಫೋಲ್ಡ್ ಮಾಡಿ ಕಾರಿನಲ್ಲಿಟ್ಟು ತೆರಳಿದ್ದಾರೆ. ಅತ್ಯಂತ ಸುಲಭವಾಗಿ ಇ ಬೈಕ್ ಫೋಲ್ಡ್ ಮಾಡಬಹುದು. ಹಾಗೇ ಬಿಡಿಸಿಕೊಂಡು ಪ್ರಯಾಣಿಸಬಹುದು.

ಮತ್ತೊಂದು ವಿಶೇಷ ಎಂದರೆ ಮೆಟ್ರೋ, ರೈಲು, ಬಸ್‌ನಲ್ಲೂ ಇ ಬೈಕ್ ಒಯ್ಯಲು ಸಾಧ್ಯವಿದೆ. ಮಡಚಿದರೆ ಸೂಟ್‌ಕೇಸ್‌ನಷ್ಟಾಗುವ ಪೋಲ್ಡೇಬಲ್ ಬೈಕ್ ಇದೀ ಎಲ್ಲರ ಆಪ್ತಮಿತ್ರವಾಗಿ ಬದಲಾಗುತ್ತಿದೆ.

click me!