ಓ ಹೆಣ್ಮಗು ಹೆಣ್ಮಗು, ಲೆಫ್ಟ್ ರೈಟ್ ಗೊಂದಲಕ್ಕೆ ಕೈಯಲ್ಲೇ ಬರೆದು ಡ್ರೈವಿಂಗ್, ಅಡ್ಡ ಬರಬೇಡಿ ಅಷ್ಟೆ

Published : Feb 18, 2026, 03:46 PM IST

ಓ ಹೆಣ್ಮಗು ಹೆಣ್ಮಗು, ಈ ವೈರಲ್ ಮೀಮ್ಸ್‌ಗೆ ಪರ ವಿರೋಧಗಳಿವೆ. ಇದಕ್ಕೆ ಅನ್ವರ್ಥವಾಗುವ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಮಹಿಳೆಗೆ ಡ್ರೈವಿಂಗ್ ವೇಳೆ ಯಾವತ್ತೂ ಗೊಂದಲ. ಇದಕ್ಕೆ ಮಹಿಳೆ ಮಾಡಿದ ಐಡಿಯಾ ಚೆನ್ನಾಗಿದೆ. ಆದರೆ ರಸ್ತೆ ಖಾಲಿ ಇರಬೇಕು ಅಷ್ಟೆ. 

PREV
15
ಗೊಂದಲಕ್ಕೆ ಪರಿಹಾರ

ಓ ಹೆಣ್ಮಗು ಹೆಣ್ಣಗು ವೈರಲ್ ವಿಡಿಯೋ ಭಾರಿ ಸಂಚಲನ ಸೃಷ್ಟಿಸಿತ್ತು. ಇದೇ ವೇಳೆ ಪರ ವಿರೋಧಗಳು ವ್ಯಕ್ತವಾಗಿತ್ತು. ವಿಶೇಷವಾಗಿ ಮಹಿಳೆಯರು ವಾಹನ ಚಲಾಯಿಸುವಾಗ ಇತರರು ಎಚ್ಚರಿಕೆಯಿಂದ ಇರಬೇಕು ಅನ್ನೋದನ್ನು ಮೀಮ್ಸ್ ಮೂಲಕ, ಮಾರ್ಮಿಕವಾಗಿ ಹೇಳಲಾಗಿತ್ತು. ಒಂದೆರಡು ಘಟನೆ ಹಿಡಿದು ಮಹಿಳೆಯರನ್ನು ಟೀಕಿಸುವುದು ಉತ್ತಮವಲ್ಲ ಅನ್ನೋ ಅಭಿಪ್ರಾಯಗಳು ಇದೇ ಅದು ಏನೇ ಇರಲಿ. ಇದೀಗ ಮಹಿಳೆಯೊಬ್ಬರು ಡ್ರೈವಿಂಗ್ ಮಾಡುವಾಗ ಎದುರಾಗುವ ಗೊಂದಲ ಪರಿಹಾರಕ್ಕೆ ಮಾಡಿದ ಐಡಿಯಾ ಭಾರಿ ಚರ್ಚೆಯಾಗುತ್ತಿದೆ.

25
ಲೆಫ್ಟ್ ರೈಟ್ ಗೊಂದಲ

ಮಹಿಳೆ ಕಾರು ಚಲಾಯಿಸುವಾಗ ವಿಶೇಷವಾಗಿ ಸವಾಲಿನ ಸಂದರ್ಭಗಳಲ್ಲಿ ಲೆಫ್ಟ್ ಯಾವುದು ರೈಟ್ ಯಾವುದು ಅನ್ನೋ ಗೊಂದಲ ಎದುರಾಗುತ್ತದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಹೊಸ ಐಡಿಯಾ ಮಾಡಿದ್ದಾಳೆ. ತನ್ನ ಎರಡು ಕೈಗಳಿಗೆ ಗ್ಲೌವ್ಸ್ ಹಾಕಿ ಡ್ರೈವಿಂಗ್ ಮಾಡಲು ಮುಂದಾಗಿದ್ದಾಳೆ. ಇಷ್ಟೇ ಅಲ್ಲ ಎಡಗೈ ಗ್ಲೌವ್ಸ್ ಮೇಲೆ ಲೆಫ್ಟ್ ಎಂದು, ಬಲಗೈ ಗ್ಲೌವ್ಸ್ ಮೇಲೆ ರೈಟ್ ಎಂದು ಬರೆದುಕೊಂಡಿದ್ದಾಳೆ.

35
ಸೋಶಿಯಲ್ ಮೀಡಿಯಾದಲ್ಲಿ ಕೋಲಾಹಲ

ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲ್ ಆಗಿದೆ. ಇದು ಭಾರಿ ಪ್ರತಿಕ್ರಿಯೆ ಪಡೆದಿದೆ.ಹಲವರು ಮಹಿಳೆ ಗೊಂದಲ ಪರಿಹಾರಕ್ಕೆ ಕ್ಯೂಟ್ ಐಡಿಯಾ ಕಂಡುಕೊಂಡಿದ್ದಾಳೆ. ಡ್ರೈವಿಂಗ್ ಮಾಡುತ್ತಾ ಆಕೆ ಗೊಂದಲ ಮರೆಯುತ್ತಾಳೆ. ತಮ್ಮದೆ ರೀತಿಯಲ್ಲಿ ಈ ರೀತಿ ಗೊಂದಲಕ್ಕೆ ಪರಿಹಾರ ಕಂಡುಕೊಳ್ಳುವುದು ಉತ್ತಮ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

45
ಇದು ಉತ್ತಮ ನಿರ್ಧಾರವೇ?

ಮಹಿಳೆ ತಾನು ರಸ್ತೆಯಲ್ಲಿ ಲೆಫ್ಟ್‌ನಲ್ಲಿ ಹೋಗುತ್ತಿದ್ದೇನಾ, ರೈಟ್‌ನಲ್ಲಿ ಸಾಗುತ್ತಿದ್ದೇನಾ ಅನ್ನೋದು ತನ್ನ ಕೈಗಳನ್ನು ನೋಡಿ ಅರ್ಥ ಮಾಡಿಕೊಳ್ಳುವಷ್ಟು ಗೊಂದಲ ಇದೆ ಎಂದರೆ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತುಕೊಳ್ಳುವುದು ಉತ್ತಮ. ಕೈಗಳನ್ನು ನೋಡಿ ಲೆಫ್ಟ್ ರೈಟ್ ಅರ್ಥಮಾಡಿಕೊಳ್ಳುವಷ್ಟರಲ್ಲಿ ರಸ್ತೆಯಲ್ಲಿ ಏನಾಗಿರುತ್ತೋ ದೇವರೆ ಬಲ್ಲ ಎಂದು ಕಮೆಂಟ್ ಮಾಡಿದ್ದಾರೆ.

55
ಅಡ್ಡ ಬರಬಾರದು ಅಷ್ಟೆ

ಲೆಫ್ಟ್ ರೈಟ್ ಗೊಂದಲ ಇರುವ ಈ ಮಹಿಳೆ ಡ್ರೈವಿಂಗ್ ಮಾಡುವಾಗ ಅಡ್ಡ ಬರಬಾರದು ಅಷ್ಟೆ. ಕಾರಣ ವಾಹನ ಅಥವಾ ಯಾರೇ ಅಡ್ಡ ಬಂದರೂ ತನ್ನ ಕೈ ನೋಡಿ ಲೆಫ್ಟ್ ರೈಟ್ ಅರ್ಥ ಮಾಡಿಕೊಂಡು ಸ್ಟೀರಿಂಗ್ ತಿರುಗಿಸುವಷ್ಟರಲ್ಲೇ ಅನಾಹುತ ಸಂಭವಿಸಿರುತ್ತೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಡ್ಡ ಬರಬಾರದು ಅಷ್ಟೆ

Read more Photos on
click me!

Recommended Stories