5.35 ಲಕ್ಷ ಮಾರುತಿ ಇಗ್ನಿಸ್ ಕಾರಿನ ಫ್ಯಾನ್ಸಿ ನಂಬರ್‌ಗೆ 2 ಕೋಟಿ ಕೊಟ್ಟ ಉದ್ಯಮಿ, ದುಬಾರಿ ದಾಖಲೆ

Published : Feb 03, 2026, 02:01 PM IST

5.35 ಲಕ್ಷ ಮಾರುತಿ ಇಗ್ನಿಸ್ ಕಾರಿನ ಫ್ಯಾನ್ಸಿ ನಂಬರ್‌ಗೆ 2 ಕೋಟಿ ಕೊಟ್ಟ ಉದ್ಯಮಿ, ಇದು ಭಾರತದ ಅತೀ ದುಬಾರಿ ರಿಜಿಸ್ಟ್ರೇಶನ್ ನಂಬರ್. ಸಾಮಾನ್ಯವಾಗಿ ಲಕ್ಷುರಿ ಕಾರಿಗೆ ಈ ರೀತಿ ನಂಬರ್ ಖರೀದಿಸುತ್ತಾರೆ. ಆದರೆ ಇದೇ ಮೊದಲ ಬಾರಿಗೆ ಅಗ್ಗದ ಕಾರಿಗೆ 2.08 ಕೋಟಿ ನಂಬರ್ ಖರೀದಿಸಲಾಗಿದೆ.

PREV
16
ಮಾರುತಿ ಇಗ್ನಿಸ್ ಕಾರಿಗೆ ದುಬಾರಿ ನಂಬರ್ ಪ್ಲೇಟ್

ಭಾರತದಲ್ಲಿ ಶ್ರೀಮಂತರು, ಉದ್ಯಮಿಗಳು, ರಾಜಕಾರಣಿಗಳು ತಮ್ಮ ಕಾರುಗಳ ರಿಜಿಸ್ಟ್ರೇಶನ್ ನಂಬರ್‌ಗೆ ಹೆಚ್ಚು ಶ್ರಮವಹಿಸುತ್ತಾರೆ. ಹರಾಜಿನ ಮೂಲಕ ತಮ್ಮ ನೆಚ್ಚಿನ, ಲಕ್ಕಿ, ಅದೃಷ್ಠದ ನಂಬರ್ ಖರೀದಿಸುತ್ತಾರೆ. ಕೋಟಿ ಕೋಟಿ ರೂಪಾಯಿ ಬೆಲೆ ಬಾಳುವ ಕಾರಿಗೆ ಲಕ್ಷ ಲಕ್ಷ ರೂಪಾಯಿ ನೀಡಿ ನೋಂದಣಿ ಸಂಖ್ಯೆ ಖರೀದಿಸುತ್ತಾರೆ. ಆದರೆ ಭಾರತದಲ್ಲಿ ಇದೇ ಮೊದಲ ಬಾರಿಗೆ ಜನಸಾಮಾನ್ಯರು ಖರೀದಿಸುವ ಮಾರುತಿ ಇಗ್ನಿಸ್ ಕಾರಿಗೆ ದುಬಾರಿ ನೋಂದಣಿ ಸಂಖ್ಯೆ ಖರೀದಿಸಲಾಗಿದೆ. ಇದು ದಾಖಲೆಯಾಗಿದೆ.

26
ರಾಷ್ಟ್ರೀಯ ದಾಖಲೆ ಬರೆದ ಉದ್ಯಮಿ

ಆಂಧ್ರ ಪ್ರದೇಶದ ಶ್ರೀಮಂತ ಉದ್ಯಮಿ ಕಿರಣ್ ಕೊಲ್ಪಾಕುಲಾ ಈ ದುಬಾರಿ ರಿಜಿಸ್ಟ್ರೇಶನ್ ನಂಬರ್ ಖರೀದಿಸಿ ದಾಖಲೆ ಬರೆದಿದ್ದಾರೆ. ಮಾರುತಿ ಇಗ್ನಿಸ್ ಕಾರಿನ ಆರಂಭಿಕ ಬೆಲೆ 5.35 ಲಕ್ಷ ರೂಪಾಯಿ, ಟಾಪ್ ಮಾಡೆಲ್ ಬೆಲೆ 7.55 ಲಕ್ಷ ರೂಪಾಯಿ. ಈ ಕಾರಿಗೆ ಉದ್ಯಮಿ ಕಿರಣ್ ಕೋಲ್ಪಾಕುಲಾ ಹರಾಜಿನ ಮೂಲಕ ಖರೀದಿಸಿದ ರಿಜಿಸ್ಟ್ರೇಶನ್ ನಂಬರ್ ಬೆಲೆ 2.08 ಕೋಟಿ ರೂಪಾಯಿ

36
DDC 001 ನಂಬರ್ ಪ್ಲೇಟ್ ದಾಖಲೆ

ಉದ್ಯಮಿ ಕಿರಣ್ 2.08 ಕೋಟಿ ರೂಪಾಯಿ ನೀಡಿದ ಖರೀದಿಸಿದ ರಿಜಿಸ್ಟ್ರೇಶನ್ ನಂಬರ್ DDC 001. ಇದು ಭಾರತದಲ್ಲಿ ಅತೀ ದುಬಾರಿ ನೋಂದಣಿ ಸಂಖ್ಯೆಯಾಗಿದೆ. ಇದಕ್ಕೂ ಮೊದಲು 1.17 ಕೋಟಿ ರೂಪಾಯಿ ನೀಡಿ ಉದ್ಯಮಿಯೊಬ್ಬರು HR 88 B8888 ನಂಬರ್ ದೇಶದ ಅತೀ ದುಬಾರಿ ನಂಬರ್ ಆಗಿತ್ತು. ಆದರೆ ಕಿರಣ್ ಎಲ್ಲಾ ದಾಖಲೆ ಮುರಿದಿದ್ದಾರೆ. ವಿಶೇಷ ಅಂದರೆ ಒಂದು ಅತೀ ದುಬಾರಿ ಕಾರು, ಮತ್ತೊಂದು ಅತೀ ಅಗ್ಗದ ಕಾರಿಗೆ ಈ ದುಬಾರಿ ನಂಬರ್ ಪ್ಲೇಟ್ ದಾಖಲೆ ಬರೆದಿದ್ದಾರೆ.

46
ಬಿಗ್ ಬಾಯ್ ಟಾಯ್ಸ್ ಹರಾಜು

ಬಿಗ್ ಬಾಯ್ ಟಾಯ್ಸ್ ಈ ಹರಾಜು ಪ್ರಕ್ರಿಯೆ ನಡೆಸಿತ್ತು. ಕಾರಣ ಈ ನಂಬರ್ ಹೊಸದಾಗಿ ಆರ್‌ಟಿಒ ಕಚೇರಿಯಿಂದ ಖರೀದಿಸಿದ ನಂಬರ್ ಅಲ್ಲ. ಕಿರಣ್ ಕೋಲ್ಪಾಕುಲಾ ಈ ದುಬಾರಿ ನಂಬರ್ ಪ್ಲೇಟ್‌ನ್ನು ಬಿಗ್ ಬಾಯ್ ಟಾಯ್ಸ್ ಸಂಸ್ಥಾಪಕ ಜತೀನ್ ಅಹುಜಾ ಅವರಿಂದ ಖರೀದಿಸಿದ್ದರೆ. ಈ ನಂಬರ್‌ಗೆ ಬಾರಿ ಬೇಡಿಕೆ ಬಂದ ಕಾರಣ ಹರಾಜು ಹಾಕಲಾಗಿತ್ತು. ಹರಾಜಿನಲ್ಲಿ ಉದ್ಯಮಿ ಕಿರಣ್ ಕೋಲ್ಪಾಕುಲಂ 2.08 ಕೋಟಿ ರೂಪಾಯಿ ನೀಡಿ ಖರೀದಿಸಿದ್ದರು.

56
ಕಾರಿಗಿಂತ ನಂಬರ್ ಪ್ಲೇಟ್ ತೂಕ ಜಾಸ್ತಿ

ಮಾರುತಿ ಸುಜುಗಿ ಇಗ್ನಿಸ್ ಕಾರು ಅಗ್ಗದ ಕಾರಾಗಿ ಗುರುತಿಸಿಕೊಂಡಿದೆ. ಶ್ರೀಮಂತರು, ಉದ್ಯಮಿಗಳು ಸಾಮಾನ್ಯವಾಗಿ ಐಷಾರಾಮಿ ಕಾರು ಖರೀದಿಸುತ್ತಾರೆ. ಆದರೆ ಕಿರಣ್ ಕೋಲ್ಪಾಕುಲಾ 5.35 ರಿಂದ 7.55ಲಕ್ಷ ರೂಪಾಯಿ ಮೌಲ್ಯದ ಮಾರುತಿ ಇಗ್ನಿಸ್ ಕಾರು ಖರೀದಿಸಿ ಅದಕ್ಕೆ 2.08 ಕೋಟಿ ಫ್ಯಾನ್ಸಿ ನಂಬರ್ ಖರೀದಿಸಿದ್ದಾರೆ.ಇದೀಗ ಕಾರಿಗಿಂತ ನಂಬರ್ ಪ್ಲೇಟ್ ಭಾರವೇ ಹೆಚ್ಚಾಗಿದೆ.

66
ಭಾರತದಲ್ಲಿ ನಂಬರ್ ಪ್ಲೇಟ್ ಕ್ರೇಜ್

ಭಾರತದಲ್ಲಿ ಫ್ಯಾನ್ಸಿ ನಂಬರ್ ಕ್ರೇಜ್ ಹೊಸದೇನಲ್ಲ. 1.17 ಕೋಟಿ ರೂಪಾಯಿ ನೀಡಿ ಖರೀದಿಸಿದ HR 88 B8888 ನಂಬರ್, ಇನ್ನು ಕೇರಳದ ಉದ್ಯಮಿ ತಮ್ಮ ಲ್ಯಾಂಬೋರ್ಗಿನಿ ಉರುಸ್ ಕಾರಿಗೆ 46 ಲಕ್ಷ ರೂಪಾಯಿ ನೀಡಿ KL 07 DG 0007 ನಂಬರ್ ಖರೀದಿಸಿದ್ದರು.

ಭಾರತದಲ್ಲಿ ನಂಬರ್ ಪ್ಲೇಟ್ ಕ್ರೇಜ್

Read more Photos on
click me!

Recommended Stories