ಭಾರತದ ಮಾರುಕಟ್ಟೆಗೆ ಹೋಂಡಾ ಕಂಪನಿಯು ತನ್ನ ಹೊಸ QC3 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಚಯಿಸಿದೆ. ಈ ಸ್ಕೂಟರ್ ಒಂದು ಪೂರ್ಣ ಚಾರ್ಜ್‌ನಲ್ಲಿ 151 ಕಿ.ಮೀ ರೇಂಜ್ ನೀಡಲಿದ್ದು, 32 ಲೀಟರ್‌ನಷ್ಟು ಅಂಡರ್ ಸೀಟ್ ಸ್ಟೋರೇಜ್ ಮತ್ತು ಸ್ಮಾರ್ಟ್ ಕೀ ಸಿಸ್ಟಮ್‌ನಂತಹ ಆಧುನಿಕ ಫೀಚರ್‌ಗಳನ್ನು ಹೊಂದಿದೆ.
ಭಾರತದಲ್ಲಿ ದಿನದಿಂದ ದಿನಕ್ಕೆ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಏರಿಕೆಯಾಗುತ್ತಿದೆ. ಇಂಧನ ಬೆಲೆ ಏರಿಕೆಯಿಂದಾಗಿ ಜನರು ಬಜೆಟ್ ಫ್ರೆಂಡ್ಲಿ ಮತ್ತು ಉತ್ತಮ ಮೈಲೇಜ್ ವಾಹನಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ಇದೀಗ ಭಾರತದ ಮಾರುಕಟ್ಟೆಗೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಂದಿದೆ. ಹೋಂಡಾ ಕಂಪನಿ QC3 Electric Scooter ಪರಿಚಯಿಸಿದೆ.
25
151 ಕಿ.ಮೀ ವರೆಗೆ IDC ರೇಂಜ್
ಈ ಸ್ಕೂಟರ್‌ನ್ನು ಭಾರತದ ನಗರವಾಸಿಗಳು, ಪ್ರತಿನಿತ್ಯ ಆಫಿಸ್, ಕಾಲೇಜಿಗೆ ತೆರಳುವ ವರ್ಗದವರನ್ನು ಗುರಿಯಾಗಿಸಿಕೊಂಡು ತಯಾರಿಸಲಾಗಿದೆ. ಈ ಸ್ಕೂಟರ್ ಒಂದು ಫುಲ್ ಚಾರ್ಜ್‌ನಲ್ಲಿ 151 ಕಿ.ಮೀ ವರೆಗೆ IDC ರೇಂಜ್ ನೀಡುತ್ತದೆ. ಇದರಿಂದ ಪದೇ ಪದೇ ಚಾರ್ಜಿಂಗ್ ಮಾಡುವ ಕಿರಿಕಿರಿ ಇರಲ್ಲ ಎಂದು ಹೋಂಡಾ ಹೇಳಿದೆ.
35
ಬ್ಯಾಟರಿ ಚಾರ್ಜಿಂಗ್ ಸಮಯ
Honda QC3ನಲ್ಲಿ 3kWh ಫಿಕ್ಸಡ್ ಲಿಥಿಯಂ-ಅಯಾನ್ ಬ್ಯಾಟರಿ ಫಿಕ್ಸ್ ಮಾಡಲಾಗಿದೆ. ಪ್ರತಿದಿನ 30 ರಿಂದ 40 ಕಿಮೀ ಪ್ರಯಾಣಿಸುವ ಜನರಿಗೆ ಈ ಸ್ಕೂಟರ್ ಒಳ್ಳೆಯ ಆಯ್ಕೆಯಾಗಲಿದೆ ಎಂಬುವುದು ಕಂಪನಿಯ ಹೇಳಿಕೆಯಾಗಿದೆ.
ಇನ್ನು Honda QC3 ಬ್ಯಾಟರಿ ಶೂನ್ಯದಿಂದ ಶೇ.80ರಷ್ಟು ಚಾರ್ಜ್ ಆಗಲು 2 ಗಂಟೆ 40 ನಿಮಿಷ ತೆಗೆದುಕೊಳ್ಳುತ್ತದೆ. ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಆಗಲು 4 ಗಂಟೆ ಸಮಯ ತೆಗೆದುಕೊಳ್ಳುತ್ತದೆ.
Honda QC3 ಮತ್ತೊಂದು ವಿಶೇಷತೆ ಅಂದ್ರೆ ಇದು 32 ಲೀಟರ್‌ನಷ್ಟು ಅಂಡರ್ ಸೀಟ್ ಸ್ಟೋರೇಜ್ ಹೊಂದಿದೆ. ಈ ಸ್ಟೋರೇಜ್‌ನಲ್ಲಿ ಹೆಲ್ಮೇಟ್, ಬ್ಯಾಗ್ ಸೇರಿದಂತೆ ಇನ್ನಿತರ ಅವಶ್ಯಕ ವಸ್ತುಗಳನ್ನು ಇರಿಸಬಹುದಾಗಿದೆ. ಹೊಸ ಸ್ಕೂಟರ್ ಗಮನಿಸುತ್ತಿದ್ರೆ, ಇದನ್ನು ಮಿಸ್ ಮಾಡಿಕೊಳ್ಳಬೇಡಿ.
55
ಬೆಲೆ ಎಷ್ಟು?
Honda QC3 ಮಾಡರ್ನ್ ಫೀಚರ್ ಹೊಂದಿದ್ದು, ಇದು Smart Key ಸಿಸ್ಟಮ್ ಒಳಗೊಂಡಿದೆ. ಇದರ ಜೊತೆಯಲ್ಲಿ 5 ಇಂಚಿನ TFT Display ನೀಡಲಾಗಿದೆ. ಕನೆಕ್ಟೆಡ್ ಫೀಚರ್ಸ್ ಮತ್ತು ನ್ಯಾವಿಗೇಷನ್ ಸಪೋರ್ಟ್ ನೀಡಲಾಗಿದ್ದು, ಸವಾರರಿಗೆ ಬೆಸ್ಟ್ ರೈಡಿಂಗ್ ಎಕ್ಸ್‌ಪಿರೀಯನ್ಸ್ ನೀಡುತ್ತದೆ. QC3 Electric Scooter ಎಕ್ಸ್ ಶೋರೂಂ ಬೆಲೆ 1,20,000 ರೂಪಾಯಿ ಆಗಿದೆ. ಇದೇ ವರ್ಷ ಡಿಸೆಂಬರ್‌ನಲ್ಲಿ ಗ್ರಾಹಕರಿಗೆ ಈ ಸ್ಕೂಟರ್ ಸಿಗಲಿದೆ.