ವಾಹನ ಡ್ರೈವಿಂಗ್‌ನಲ್ಲಿ ಯಾರು ಬೆಟರ್? ಪುರುಷರೋ,ಮಹಿಳೆಯರೋ? ಸಮೀಕ್ಷಾ ವರದಿ ಇದೀಗ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಡ್ರೈವಿಂಗ್ ಕುರಿತ ಹಲವು ಅಂಕಿ ಅಂಶಗಳನ್ನು ಈ ವರದಿ ನೀಡಿದೆ. ರಿಪೋರ್ಟ್‌ನಲ್ಲಿ ಏನಿದೆ?
ಸುರಕ್ಷತಾ ಡ್ರೈವಿಂಗ್ ವಿಚಾರದಲ್ಲಿ ಪುರುಷರಿಗಿಂತ ಮಹಿಳೆಯರು ಬೆಟರ್
ಕಾರು ಸೇರಿದಂತೆ ವಾಹನ ಡ್ರೈವಿಂಗ್ ವಿಚಾರದಲ್ಲಿ ಪುರುಷರು ಹಾಗೂ ಮಹಿಳೆಯರ ಪತ್ಯೇಕ ಮೀಮ್ಸ್‌ಗಳಿವೆ. ಈ ಪೈಕಿ ಹೆಣ್ಣು ಮಗು ಹೆಣ್ಣು ಮಗು ಭಾರಿ ವೈರಲ್ ಆಗಿದೆ. ಡ್ರೈವಿಂಗ್ ವಿಚಾರದಲ್ಲಿ ಯಾವತ್ತೂ ಮಹಿಳೆಯರನ್ನು ಟ್ರೋಲ್ ಮಾಡಲಾಗುತ್ತದೆ. ಆದರೆ ಸುರಕ್ಷತಾ ಡ್ರೈವಿಂಗ್ ವಿಚಾರಕ್ಕೆ ಬಂದರೆ ಪುರುಷರಿಗಿಂತ ಮಹಿಳೆಯರು ಕೊಂಚ ಬೆಟರ್ ಅನ್ನೋದು ಅಧ್ಯಯನ ವರದಿ ಹೇಳುತ್ತಿದೆ.
26
ಸಮೀಕ್ಷಾ ವರದಿಯಲ್ಲಿದೆ ತಡ ರಾತ್ರಿ ಡ್ರೈವಿಂಗ್ ಮಾಹಿತಿ
ಝುನೋ ಜನರಲ್ ಇನ್ಶೂರೆನ್ಸ್ ಕಂಪನಿ ಭಾರತದ ರಸ್ತೆ ಸುರಕ್ಷತೆ ಕುರಿತು ಸಮೀಕ್ಷಾ ವರದಿ ತಯಾರಿಸಿದೆ. ಈ ವರದಿ ಭಾರತದ ರಸ್ತೆ ಸುರಕ್ಷತೆ ಹಾಗೂ ಡ್ರೈವಿಂಗ್ ಕುರಿತು ಹಲವು ಅಂಕಿ ಅಂಶ ತೆರೆದಿಟ್ಟಿದೆ. ಈ ವರದಿ ಪ್ರಕಾರ ಭಾರತದಲ್ಲಿ ಪುರುಷರು ಹಾಗೂ ಮಹಿಳೆಯರ ಡ್ರೈವಿಂಗ್, ಡೇಂಜರ್ ಸಮಯ, ತಡ ರಾತ್ರಿ ಡ್ರೈವಿಂಗ್ ಸೇರಿದಂತೆ ಹಲವು ಮಾಹಿತಿಗಳನ್ನು ತೆರೆದಿಟ್ಟಿದೆ.
36
ಭಾರತದ ಶೇಕಡಾ 80ರಷ್ಟು ಅಪಘಾತದ ಕಾರಣ
ಭಾರತದಲ್ಲಿ ಶೇಕಡಾ 80ರಷ್ಟು ಅಪಘಾತಗಳು ಚಾಲಕರ ವರ್ತನೆ, ಡ್ರೈವಿಂಗ್ ಮೇಲೆ ಅವಲಂಬಿತವಾಗಿದೆ. ಇನ್ನುಳಿದ ಶೇಕಡಾ 20ರಷ್ಟು ಕೆಟ್ಟ ರಸ್ತೆ ಸೇರಿದಂತೆ ಭೌಗೋಳಿಕ ಕಾರಣಗಳಿಂದಾಗಿದೆ. ರಾತ್ರಿ 9 ರಿಂದ 10 ಗಂಟೆ ಸಮಯದ ಡ್ರೈವಿಂಗ್ ಡೇಂಜರಸ್ ಎಂದು ಅಂಕಿ ಅಂಶ ಹೇಳುತ್ತಿದೆ. ಇನ್ನು ತಡ ರಾತ್ರಿ ಡ್ರೈವಿಂಗ್ ಅತ್ಯಂತ ಅಪಾಯಕಾರಿ ಅನ್ನೋದು ಅಂಕಿ ಅಂಶಗಳು ಹೇಳುತ್ತಿದೆ.
ಸುರಕ್ಷತಾ ರೀತಿಯಲ್ಲಿ ಡ್ರೈವಿಂಗ್ ವಿಚಾರದಲ್ಲಿ ಮಹಳೆಯರು ಸರಾಸರಿ ಸ್ಕೋರ್ 92.86. ಇನ್ನು ಪುರುಷರ ಸ್ಕೋರ್ 92.43. ಈ ಮೂಲಕ ಪುರುಷರಿಗಿಂತ ಮಹಿಳೆಯರು ಸುರಕ್ಷತಾ ಡ್ರೈವಿಂಗ್ ವಿಚಾರದಲ್ಲಿ ಮುಂದಿದ್ದಾರೆ ಎಂದು ಸಮೀಕ್ಷಾ ವರದಿ ಹೇಳಿದೆ. ವಿಶೇಷವಾಗಿ ರ್ಯಾಶ್ ಡ್ರೈವಿಂಗ್ ಸೇರಿದಂತೆ ಅತೀ ವೇಗದ ಚಾಲನೆಯಲ್ಲಿ ಮಹಿಳೆಯರು ಹೆಚ್ಚು ಜವಾಬ್ದಾರಿಯುತರಾಗಿದ್ದಾರೆ ಎಂದು ಅಂಕಿ ಅಂಶ ಹೇಳುತ್ತಿದೆ.
56
ಸಡನ್ ಬ್ರೇಕ್, ಲೆಫ್ಟ್ ರೈಟ್ ಡ್ರೈವಿಂಗ್
ವೇಗವಾಗಿ ಹೋಗುತ್ತಿದ್ದಂತೆ ದಿಢೀರ್ ಬ್ರೇಕ್ ಹಾಕಿ ಲೆಫ್ಟ್ ಅಥವಾ ರೈಟ್‌ಗೆ ಟರ್ನ್ ಮಾಡುವುದು, ಲೇನ್ ಬದಲಾಯಿಸುವುದು, ಅಜಾಗರೂಕತೆ ಚಾಲನೆಗಳು ಭಾರತದ ಡ್ರೈವಿಂಗ್ ಸರಾಸರಿಯಲ್ಲಿ ಗರಿಷ್ಠ ಸ್ಕೋರ್ ಪಡೆದಿದೆ. ಹೀಗೆ ಅಡ್ಡಾದಿಡ್ಡಿ ಚಾಲನೆಯಲ್ಲಿ ಭಾರತ 87 ರಿಂದ 91 ಸ್ಕೋರ್ ಪಡೆದಿದೆ. ಈ ಮೂಲಕ ಪ್ರತಿ ರಸ್ತೆಯಲ್ಲಿ 10 ವಾಹನಗಳಿದ್ದರೆ 5 ಕ್ಕಿಂಚ ಹೆಚ್ಚು ವಾಹನ ಇದರಲ್ಲಿ ಯಾವುದಾದರು ಒಂದು ತಪ್ಪು ಮಾಡುತ್ತಾರೆ ಅನ್ನೋದು ಸಮೀಕ್ಷಾ ವರದಿಯಲ್ಲಿ ಉಲ್ಲೇಖಿಸಿದೆ.
66
ದ್ವಿಚಕ್ರ ವಾಹನ ಅಪಘಾತ
ರಸ್ತೆ ಅಪತಾದಲ್ಲಿ ಮೃತಪಡುತ್ತಿರುವವ ಪೈಕಿ ಶೇಕಡಾ 50ರಷ್ಟು ದ್ವಿಚಕ್ರ ವಾಹನಗಳಿಂದ ಎಂದು ಅಂಕಿ ಅಂಶ ಹೇಳುತ್ತಿದೆ. ವಾಹನ ಡಿಕ್ಕಿಯಾಗಿ ಮೃತಪಡುತ್ತಿರುವ ಪಾದಾಚಾರಿಗಳ ಸಂಖ್ಯೆ ಶೇಕಡಾ 19 . ಇನ್ನು ಮಳೆಗಾಲ ಆಗಲಿ, ಚಳಿಗಾಲ ಇರಲಿ ಭಾರತದ ವಾಹನ ಚಾಲಕರ ಡ್ರೈವಿಂಗ್‌ನಲ್ಲಿ ಹೆಚ್ಚಿನ ಬದಲಾವಣೆ ಎಲ್ಲ ಎಂದು ಅಂಕಿ ಅಂಶ ಹೇಳುತ್ತಿದೆ.