ಶಾಸಕಿಯ ದೂರಿನ ಆಧಾರಲ್ಲಿ ಎಫ್ ಐ ಆರ್ (FIR)ದಾಖಲಿಸಿಕೊಳ್ಳಲಾಗಿದೆ. ಪಂಜಾಬ್ ಪ್ರಾಂತ್ಯದ ತಕ್ಷಿಲಾ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುವ ಸಾನಿಯಾ ಆಶಿಖ್ ಹೋಲಿಕೆಯಿರುವ ವಿಡಿಯೋ ವೈರಲ್ ಆಗುತ್ತಿದೆ.
ಪಾಕಿಸ್ತಾನದ ಮುಸ್ಲಿಮ್ ಲೀಗ್ ನವಾಜ್ (PML) ನಾಯಕಿ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ನಡೆಸಿರುವ ಪೊಲೀಸರು ಆರೋಪಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿ ಬಗ್ಗೆ ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ. ಕಳೆದ ಒಂದು ತಿಂಗಳಿನಿಂದಲೇ ವಿಡಿಯೋ ವೈರಲ್ ಆಗುತ್ತಿತ್ತು. ಈ ವಿಚಾರ ಶಾಸಕಿಯ ಗಮನಕ್ಕೂ ಬಂದಿದ್ದು ಅಂತಿಮವಾಗಿ ಪೊಲೀಸರ ಮೊರೆ ಹೋಗಿದ್ದಾರೆ.
ಕಾಮಪ್ರಚೋದಕ ವಿಡಿಯೋದಲ್ಲಿ ಇಬ್ಬರು ವ್ಯಕ್ತಿಗಳು ಇದ್ದಾರೆ. ದುರುದ್ದೇಶದಿಂದ ತಿರುಚಿದ ವಿಡಿಯೋ ಬಿಡುಗಡೆ ಮಾಡಲಾಗಿದೆ ಎಂದು ಶಾಸಕಿ ಆರೋಪಿಸಿದ್ದಾಳೆ.
ಅಕ್ಟೋಬರ್ ನಲ್ಲಿಯೇ ಈ ವಿಡಿಯೋ ಬಹಿರಂಗವಾಗಿತ್ತು. ಆದರೆ ನವೆಂಬರ್ ತಿಂಗಳಿನಲ್ಲಿ ವೈರಲ್ ಆಗುತ್ತಿದ್ದು ಅಲ್ಲಿನ ನಾಯಕರೇ ಪ್ರಶ್ನೆ ಮಾಡಿದ್ದಾರೆ.
ಇಮ್ರಾನ್ ಖಾನ್ ಸರ್ಕಾರದ ಮೇಲೆ ನಾನು ವಾಗ್ದಾಳಿ ಮಾಡುತ್ತಿರುವ ಕಾರಣ ಇದರಲ್ಲಿ ಆಡಳಿತ ಪಕ್ಷದ ಕೈವಾಡ ಇದೆ ಎನ್ನುವುದು ಶಾಸಕಿಯ ಆರೋಪ.
ಈ ವಿಡಿಯೋ ವೈರಲ್ ಆದ ಮೇಲೆ ಶಾಸಕಿಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ. ಕೆಲವರು ಕರೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಸಮಗ್ರ ತಿನಿಖೆ ಆಗಬೇಕು ಎಂದು ಶಾಸಕರು ಫೆಡರಲ್ ಇನ್ವೆಸ್ಟಿಗೇಶನ್ ಸಂಸ್ಥೆಗೂ ದೂರು ನೀಡಿದ್ದಾರೆ. ತನಿಖೆ ನಡೆಯುತ್ತಲೇ ಇದೆ.
ಸಾನಿಯಾ ತಮಗೂ ಈ ವಿಡಿಯೋಕ್ಕೂ ಸಂಬಂಧ ಇಲ್ಲ. ನನ್ನ ತೇಜೋವಧೆ ಮಾಡಲು ದುಷ್ಕರ್ಮಿಗಳು ಇಂಥ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಲಾಹೋರ್ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದ್ದು ಹೆಸರು ಬಹಿರಂಗ ಮಾಡಿಲ್ಲ. ಪೊಲೀಸರು ಸಹ ವಿಡಿಯೋದಲ್ಲಿ ಇರುವುದು ಸಾನಿಯಾ ಹೌದೋ ಅಲ್ಲವೋ ಎಂಬುದನ್ನು ಸ್ಷಷ್ಟ ಮಾಡಿಲ್ಲ.