ಭೀಕರ ರಸ್ತೆ ಅಪಘಾತ: ಮಾಜಿ ಮಿಸ್ ಕೇರಳ ಅನ್ಸಿ ಕಬೀರ್, ರನ್ನರ್ ಅಪ್ ಅಂಜನಾ ಬಲಿ!

First Published | Nov 1, 2021, 12:34 PM IST

2019ರ ಮಿಸ್ ಕೇರಳ(Miss Kerala-2019) ವಿಜೇತೆ ಅನ್ಸಿ ಕಬೀರ್(Ansi Kabeer) ಹಾಗೂ ರನ್ನರ್-ಅಪ್ ಅಂಜನಾ ಶಾಜನ್ (Anjana Shajan) ಕೊಚ್ಚಿ ಸಮೀಪದ ವಿಟಿಲ್ಲಾದಲ್ಲಿ ಸೋಮವಾರ ನಡೆದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆಂದು ವರದಿಯಾಗಿದೆ.

ಎರ್ನಾಕುಲಂನ ವೈಟ್ಟಿಲಾದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಾಜಿ ಮಿಸ್ ಕೇರಳ ಆನ್ಸಿ ಕಬೀರ್ (Ansi Kabeer) ಮತ್ತು ರನ್ನರ್ ಅಪ್ ಅಂಜನಾ ಶಾಜನ್ (Anjana Shajan) ಮೃತಪಟ್ಟಿದ್ದಾರೆ. ಎರ್ನಾಕುಲಂನ ವೈಟ್ಟಿಲಾದಲ್ಲಿ ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ಸಂದರ್ಭದಲ್ಲಿ ಕಾರು ಪಲ್ಟಿಯಾಗಿದೆ. 

 2019 ರ ಸೌಂದರ್ಯ ಸ್ಪರ್ಧೆಯಲ್ಲಿ ಅನ್ಸಿ ಮತ್ತು ಅಂಜನಾ ವಿಜೇತರು ಮತ್ತು ರನ್ನರ್ ಅಪ್ ಆಗಿದ್ದರು. 25 ವರ್ಷದ ಅನ್ಸಿ ತಿರುವನಂತಪುರಂನ ಅಲಂಕೋಡ್‌ ಹಾಗೂ 26 ವರ್ಷದ ಅಂಜನಾ ತ್ರಿಶೂರ್‌ ಮೂಲದವರು. ಬೆಳಗಿನ ಜಾವ ಒಂದು ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ.

Tap to resize

ಕೇರಳದ ವೈಟ್ಟಿಲ ಹಾಲಿಡೇ ಇನ್ ಮುಂದೆ ಈ ಅಪಘಾತ ಸಂಭವಿಸಿದೆ. ಬೈಕ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ವೆಳೆ ಈ ದುರ್ಘಟನೆ ಸಂಭವಿಸಿರುವುದುಸ್ಪಷ್ಟವಾಗಿದೆ. 

ಚಿತ್ರ: ಭೀಕರ ಅಪಘಾತಕ್ಕೆ ನುಜ್ಜು ಗುಜ್ಜಾದ ಕಾರು

 ಕಾರಿನಲ್ಲಿ ಒಟ್ಟು ನಾಲ್ಕು ಜನರಿದ್ದರು. ಇವರಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಇವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಇಬ್ಬರಿಗೂ ಎರ್ನಾಕುಲಂ ವೈದ್ಯಕೀಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

Latest Videos

click me!