ಹುಡುಗರ ಗಮನಕ್ಕೆ: ಸೋಶಿಯಲ್ ಮೀಡಿಯಾದಲ್ಲಿ ಗೆಳೆಯನ ಪ್ರೇಯಸಿಯನ್ನು ಫಾಲೋ ಮುನ್ನ ಈ ಸುದ್ದಿ ಓದಿ

Published : Jul 24, 2025, 06:35 PM IST

Social Media Following: ಇದು ಸೋಶಿಯಲ್ ಮೀಡಿಯಾ ಜಗತ್ತು. ನೇರವಾಗಿ ಭೇಟಿಯಾಗದೇ ಸೋಶಿಯಲ್ ಮೀಡಿಯಾ ಮೂಲಕ ಪರಿಚಯವಾಗಿ ಸ್ನೇಹಿತರಾಗುವ ಕಾಲವಿದು. ಸೋಶಿಯಲ್ ಮೀಡಿಯಾದಲ್ಲಿ ಗೆಳೆಯನ ಪ್ರೇಯಸಿಯುನ್ನು ಫಾಲೋ ಮಾಡುವ ಮುನ್ನ ಈ ಸ್ಟೋರಿ ನೋಡಿ

PREV
15

ಗಾಜಿಯಾಬಾದ್: ಅಪ್ರಾಪ್ತ ಬಾಲಕ ಕೊ*ಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಗೆಳೆಯನಿಂದಲೇ ಬಾಲಕನ ಕೊಲೆಯಾಗಿತ್ತು. ಮೃತ ಬಾಲಕ ಸೋಶಿಯಲ್ ಮೀಡಿಯಾದಲ್ಲಿ ಗೆಳೆಯನ ಪ್ರೇಯಸಿಯನ್ನು ಫಾಲೋ ಮಾಡಿದ್ದನು. ಇದರಿಂದ ಕೋಪಗೊಂಡ ಪ್ರಿಯಕರ ಅಪ್ರಾಪ್ತ ಗೆಳೆಯನನ್ನು ಕೊಲೆ ಮಾಡಿದ್ದಾನೆ.

25

ಇದೀಗ ಪೊಲೀಸರು ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಿಯಕರ ಗೆಳೆಯನ ಪ್ರಾಣ ತೆಗೆಯಲು ಇಬ್ಬರ ಸಹಾಯ ಪಡೆದುಕೊಂಡಿದ್ದನು. ವಸೀಂ, ಸಾಹಿಲ್ ಮತ್ತು ರಾಹಿಲ್ ಬಂಧಿತ ಆರೋಪಿಗಳು. ಇದೀಗ ಮೂವರು ಜೈಲುಪಾಲಾಗಿದ್ದಾರೆ.

35

ಜುಲೈ 22ರ ರಾತ್ರಿ ಟ್ರೋನಿಕಾ ಸಿಟಿ ವ್ಯಾಪ್ತಿಗೆ ಬರುವ ಇಲಾಯಿಚೀಪುರ ಗ್ರಾಮದಲ್ಲಿ ಅಪ್ರಾಪ್ತ ಬಾಲಕನ ಶವ ಪತ್ತೆಯಾಗಿತ್ತು. ತನಿಖೆ ಆರಂಭಿಸಿದಾಗ ಶವ ದೆಹಲಿಯ ಖಜುರಿ ನಿವಾಸಿ ರಿಹಾನ್ (17) ಎಂಬಾತನದ್ದು ಎಂದು ಗೊತ್ತಾಯ್ತು. ಈ ಸಂಬಂಧ ಮರುದಿನ ಜುಲೈ 23ರಂದು ಪ್ರಕರಣ ದಾಖಲಾಯ್ತು ಎಂದು ಎಸಿಪಿ ಲೋನಿ ಸಿದ್ಧಾರ್ಥ್ ಗೌತಮ್ ಹೇಳಿದ್ದಾರೆ.

45

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಸೀಂ (19), ಸಾಹಿಲ್ (18) ಮತ್ತು ರಿಹಾನ್ (18) ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ವಸೀಂನ ಗೆಳತಿಯನ್ನು ಮೃತ ರಿಹಾನ್ ಸೋಶಿಯಲ್ ಮೀಡಿಯಾದಲ್ಲಿ ಫಾಲೋ ಮಾಡುತ್ತಿದ್ದನು. ಈ ಸಂಬಂಧ ಸೋಶಿಯಲ್ ಮೀಡಯಾದಲ್ಲಿ ವಸೀಂ ಮತ್ತು ರಿಹಾನ್ ನಡುವೆ ಜಗಳವುಂಟಾಗಿತ್ತು.

55

ಇದರಿಂದ ಕೋಪಗೊಂಡ ವಸೀಂ ಇಬ್ಬರು ಗೆಳೆಯರೊಂದಿಗೆ ಸೇರಿಕೊಂಡು ರಿಹಾನ್ ಪ್ರಾಣ ತೆಗೆಯಲು ಪ್ಲಾನ್ ಮಾಡಿದ್ದನು. ಪ್ಲಾನ್ ಪ್ರಕಾರ ರಿಹಾನ್‌ನನ್ನು ಉಪಾಯವಾಗಿ ಕೃಷಿ ಜಮೀನಿಗೆ ಕರೆಸಿಕೊಂಡಿದ್ದಾರೆ. ನಂತರ ಮೂವರು ಚಾಕು ಇರಿದು ರಿಹಾನ್ ಪ್ರಾಣ ತೆಗೆದಿದ್ದಾರೆ. ಘಟನೆ ಬಳಿಕ ಮೂವರು ಸ್ಥಳದಿಂದ ಪರಾರಿಯಾಗಿದ್ದರು. ಇದೀಗ ಪೊಲೀಸರು ಮೂವರು ಆರೋಪಿಗಳು ಬಂಧಿಸಿ, ಕೊಲೆಗೆ ಬಳಸಲಾದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories