ಆರೋಪಿಗಳ ಹಿನ್ನೆಲೆ ತನಿಖೆ: 10 ವರ್ಷದ ಕ್ರೈಂ ಹಿಸ್ಟರಿ ಕೈಗೆತ್ತಿಕೊಂಡ ಪೊಲೀಸರು
ಹೆಣ್ಣೂರು, ಇಂದಿರಾನಗರ ಹಾಗೂ ಭಾರತಿನಗರ ಠಾಣೆಗಳಲ್ಲಿ ದೌರ್ಜನ್ಯ, ಅಪಹರಣ, ಮಾರಾಮಾರಿ, ಆಸ್ತಿ ಸೆಟಲ್‌ಮೆಂಟ್ ಸೇರಿದಂತೆ ಹಲವು ಕೇಸ್‌ಗಳಲ್ಲಿ ಹೆಸರಿರುವ ಜಗ್ಗ, ಈ ಪ್ರಕರಣಕ್ಕೂ ಹಿಂದಿನ ಪ್ಲಾನಿಂಗ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ್ದನೆಂಬುದು ಬೆಳಕಿಗೆ ಬಂದಿದೆ. ಜಗ್ಗನ ಮುಖಾಂತರ ಮಾಜಿ ಸಚಿವನು ಜಮೀನು ವ್ಯವಹಾರಗಳಲ್ಲಿ ನೇರವಾಗಿ ತೊಡಗಿಸಿಕೊಂಡಿದ್ದರು ಎಂಬ ಆರೋಪ ಕೇಳಿಬರುತ್ತಿದೆ. ಹಲವು 'ಸಿವಿಲ್ ಸೆಟಲ್ಮೆಂಟ್' ಪ್ರಕರಣಗಳಲ್ಲಿ ಜಗ್ಗ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದನೆಂಬ ಮಾಹಿತಿಯೂ ಲಭ್ಯವಾಗಿದೆ. ಈಗಾಗಲೇ ಎಸ್ಕೇಪ್ ಆಗಿರುವ ಜಗ್ಗನಿಗಾಗಿ ಪೊಲೀಸರ ಶೋಧ ತೀವ್ರಗೊಂಡಿದೆ.