ಬೆಂಗಳೂರಿನಲ್ಲಿ ಯುವತಿಯೊಬ್ಬಳಿಗೆ ಪ್ರೀತಿಯ ನಾಟಕವಾಡಿ, ಲಿವ್-ಇನ್ ಸಂಬಂಧದಲ್ಲಿದ್ದು, 37 ಲಕ್ಷ ರೂ. ಹಾಗೂ 559 ಗ್ರಾಂ ಚಿನ್ನಾಭರಣ ಪಡೆದು ವಂಚಿಸಿದ್ದಾನೆ. ಆರೋಪಿ ಶುಭಾಂಶು ಶುಕ್ಲಾ ಈಗಾಗಲೇ ವಿವಾಹಿತನಾಗಿದ್ದು, ದೈಹಿಕ ಹಲ್ಲೆ ನಡೆಸುತ್ತಿದ್ದನು, ಇದೀಗ ಬಾಗಲಗುಂಟೆ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ.
ಪ್ರೀತಿಯ ಹೆಸರಿನಲ್ಲಿ ಮೋಸ ಮಾಡಿದ 27 ವರ್ಷದ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಸಂತ್ರಸ್ತೆ ಟಿ.ದಾಸರಹಳ್ಳಿಯ ನಿವಾಸಿಯಾಗಿದ್ದಾರೆ.
26
ಲಿವ್ ಇನ್ ರಿಲೇಶನ್‌ಶಿಪ್
ಟಿ.ದಾಸರಹಳ್ಳಿಯ ಯುವತಿಯೋರ್ವಳನ್ನು ಪರಿಚಯ ಮಾಡಿಕೊಂಡ ಶುಭಾಂಶು ಶುಕ್ಲಾ, ತನ್ನ ಮೋಸದ ಪ್ರೀತಿ ಬಲೆಯಲ್ಲಿ ಬೀಳಿಸಿಕೊಂಡಿದ್ದಾನೆ. ಪೋಷಕರಿಗೆ ಕೆಲಸದ ನಿಮಿತ್ ಮುಂಬೈಗೆ ತೆರಳುತ್ತಿರೋದಾಗಿ ಹೇಳಿಸಿ ಯುವತಿಯನ್ನು ಕರೆದುಕೊಂಡು ಬಂದು ಬೆಂಗಳೂರಿನ ಫ್ಲ್ಯಾಟ್‌ನಲ್ಲಿರಿಸಿದ್ದನು. ಇಲ್ಲಿಯೇ ಯುವತಿಯೊಂದಿಗೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದನು.
36
37 ಲಕ್ಷ ರೂಪಾಯಿ, 559 ಗ್ರಾಂ ಚಿನ್ನಾಭರಣ
ಶುಭಾಂಶು ಶುಕ್ಲಾ ಯುವತಿ ಬಳಿಯಲ್ಲಿ 37 ಲಕ್ಷ ರೂಪಾಯಿ ಪಡೆದುಕೊಂಡಿರುವ ಆರೋಪ ಕೇಳಿ ಬಂದಿದೆ. ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿರುವಾಗ ಶುಭಾಂಶು ಶುಕ್ಲಾ ಮದುವೆಯಾಗಿರುವ ವಿಷಯ ಸಂತ್ರಸ್ತೆಗೆ ಗೊತ್ತಾಗಿದೆ. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಡಿವೋರ್ಸ್ ನೀಡುವೆ ಅಂತ ಹೇಳಿದ್ದಾನೆ. ಯುವತಿ ಕುಟುಂಬಸ್ಥರ ಜೊತೆಯಲ್ಲಿಯೂ ಸಲುಗೆಯಿಂದು ಶುಭಾಂಶು ಅವರಿಂದ 559 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿವೆ.
ಶುಭಾಂಶು ಶುಕ್ಲಾ ವಿಷಯ ತಿಳಿಯುತ್ತಿದ್ದಂತೆ ಯುವತಿ ಮತ್ತೆ ಲಿವ್ ಇನ್ ರಿಲೇಶನ್‌ಶಿಪ್ ತೊರೆದು ಕುಟುಂಬ ಸೇರಿಕೊಂಡಿದ್ದಾಳೆ. ಇದೀಗ ಪೊಲೀಸರು ಆರೋಪಿ ಶುಭಾಂಶು ಶುಕ್ಲಾನನ್ನು ಬಂಧಿಸಿದ್ದಾರೆ.
ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಸಂತ್ರಸ್ತೆ, ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ. ಪೊಲೀಸರಿಗೆ ದೂರು ನೀಡ್ತೀನಿ ಅಂದ್ರೆ ಸೂ*ಸೈಡ್ ಮಾಡಿಕೊಳ್ಳುತ್ತೀನಿ ಎಂದು ಬೆದರಿಕೆ ಹಾಕಿ ಕೈಯೆಲ್ಲಾ ಕುಯ್ದುಕೊಳ್ಳುತ್ತಿದ್ದನು. ಅವನಿಂದ ತಪ್ಪಿಸಿಕೊಳ್ಳಲು ಮುಂದಾದ್ರೆ ನಾನು ಸಾಯ್ತೀನಿ. ನಾನು ಸತ್ರೆ ನಿನಗೆ ಮುಂದೆ ಕಷ್ಟವಾಗುತ್ತೆ ಎಂದು ಹೇಳುತ್ತಿದ್ದನು. ಒಮ್ಮೆ ಕೈ ಸಹ ಕುಯ್ದುಕೊಂಡಿದ್ದರಿಂದ ನಾನೇ ಆತನನ್ನು ಸಪ್ತಗಿರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ ಎಂದು ಹೇಳಿದ್ದಾರೆ.
ಮುಂದುವರಿದು ಮಾತನಾಡಿದ ಸಂತ್ರಸ್ತೆ, ನನ್ನ ಬಳಿಯಲ್ಲಿ ಹಣ ಪಡೆದುಕೊಂಡು ಮೋಸ ಮಾಡಿದ್ದಾನೆ. ಒಂದು ರಾತ್ರಿ ಶುಭಾಂಶು ಮೊಬೈಲ್ ಚೆಕ್ ಮಾಡಿದಾಗ ಹಲವು ಯುವತಿಯರಿಗೆ ಮೋಸ ಮಾಡಿರೋದು ಗೊತ್ತಾಯ್ತು. 17 ವರ್ಷದ ಅಪ್ರಾಪ್ತೆ ಜೊತೆಯಲ್ಲಿಯೂ ಈತ ಸಂಪರ್ಕದಲ್ಲಿದ್ದನು. ನಾನು ಆಕೆ ನಂಬರ್ ಪಡೆದುಕೊಂಡು ಕಾಲ್ ಮಾಡಿ ಎಲ್ಲಾ ವಿಷಯವನ್ನು ಹೇಳಿದೆ. ಇದರಿಂದ ಕೋಪಗೊಂಡ ಶುಭಾಂಶು, ನನಗೆ ಆಕೆಯಿಂದ 50 ಲಕ್ಷ ಹಣ ಬರುತ್ತಿತ್ತು ಎಂದು ಹೇಳಿದ.
66
ನನ್ನ ಮೇಲೆ ಹಲ್ಲೆ
ಎಲ್ಲಾ ಪ್ಲಾನ್ ಫೇಲ್ ಮಾಡಿದೆ ಅಂತೇಳಿ ನಡುರಸ್ತೆಯಲ್ಲಿಯೇ ನನ್ನ ಮೇಲೆ ಹಲ್ಲೆ ನಡೆಸಿದ. ಆ ಸಂದರ್ಭದಲ್ಲಿ ನಾಲ್ಕೈದು ಜನರು ನನ್ನನ್ನು ಶುಭಾಂಶುನಿಂದ ರಕ್ಷಣೆ ಮಾಡಿದರು. ಆ ರಾತ್ರಿಯೇ ನಾನು ಚಿಕ್ಕಮ್ಮನ ಮನೆಗೆ ಹೋದೆ. ಮೊದಲು ಬಾಗಲಗುಂಟೆ ಠಾಣೆಯ ಪೊಲೀಸರು ದೂರು ಪಡೆದುಕೊಳ್ಳಲಿಲ್ಲ. ನಂತರ ವಕೀಲರ ಮೂಲಕ ಬಂದಾಗ ದೂರು ತೆಗೆದುಕೊಂಡರು. ಇದೀಗ ಶುಭಾಂಶು ಶುಕ್ಲಾನನ್ನು ಬಂಧಿಸಲಾಗಿದೆ ಎಂದು ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ