ಸ್ನೇಹಿತನೊಂದಿಗೆ ಲಾಡ್ಜ್‌ಗೆ ಹೋಗಿದ್ದ ಮೈಸೂರಿನ ಬಿಸಿಎ ವಿದ್ಯಾರ್ಥಿನಿ ದುರಂತ ಅಂತ್ಯ

First Published | Sep 2, 2022, 5:42 PM IST

ವರದಿ: ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು

ಆಕೆ ಬಿಸಿಎ ವಿದ್ಯಾರ್ಥಿನಿ. 15 ದಿನ ಕಳೆದಿದ್ರೆ ಪದವೀ ಮುಗಿಸಿ ತಂದೆ ತಾಯಿಗೆ ಆಶ್ರಯ ಆಗಬೇಕಿದ್ದವಳು. ಆದ್ರೆ ವಿಧಿಯ ಆಟವೇ ಬೇರೆಯಾಗಿತ್ತು. ಸ್ನೇಹಿತನ ಜೊತೆ ಹೋಟೆಲ್ ಗೆ ಬಂದ ವಿದ್ಯಾರ್ಥಿನಿ ಹೆಣವಾಗಿದ್ದಾಳೆ. ಆಕೆಯ ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟುಕೊಂಡಿದೆ. ಈ ಕುರಿತ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ. 

ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ತನ್ನ  ಸ್ನೇಹಿತನ ಜತೆ ಹೋಟೆಲ್‌ಗೆ  ಬಂದ ವಿದ್ಯಾರ್ಥಿನಿ ಹೆಣವಾಗಿದ್ದಾಳೆ. ಇದೀಗ ಆಕೆಯ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ.

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಹರಳಹಳ್ಳಿ ಗ್ರಾಮದ ನಿವಾಸಿ ರವಿ ಎಂಬುವವರ ಪುತ್ರಿ. ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಸಿಎ ವ್ಯಾಸಾಂಗ ಮಾಡುತ್ತಿದ್ದಳು. ಇನ್ನೂ 15 ದಿನ ಕಳೆದಿದ್ರೆ ಈಕೆ ಪದವಿ ಮುಗಿಸಿ ತನ್ನ ಊರಿಗೆ ಹೋಗುತ್ತಿದ್ದಳು. ಆದ್ರೆ ವಿಧಿಯ ಆಟವೇ ಬೇರೆ ಇತ್ತು. ಐಷಾರಾಮಿ ಹೋಟೆಲ್‌ನಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾಳೆ.

Tap to resize

ಅಪೂರ್ವ ಶೆಟ್ಟಿ ಕಳೆದ ಹಲವು ವರ್ಷಗಳಿಂದ ಆಶಿಕ್ ಎಂಬ ಯುವಕನ ಜೊತೆ ಓಡಾಡುತ್ತಿದ್ದಳು. ಕಳೆದ ಎರೆಡು ದಿನಗಳ ಹಿಂದೆ ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಆಶಿಕ್ ಜೊತೆಗೆ ಬಂದು ರೂಂ ಬಾಡಿಗೆ ಪಡೆದು ವಾಸ್ತಾವ್ಯ ಹೂಡಿದ್ದಾರೆ. ಆಶಿಕ್ ಆಗಾಗ ಹೊರಗಡೆ ಹೋಗಿ ಮತ್ತೆ ಹೋಟೆಲ್ ಗೆ ವಾಪಸ್ ಬರುತ್ತಿದ್ದ

ನಿನ್ನೆ (ಗುರುವಾರ) ಬೆಳಗ್ಗೆ ಹೋಟೆಲ್ ನಿಂದ ಹೊರಟ ಆಶಿಕ್ ಮತ್ತೆ ವಾಪಸ್ ಹೋಟೆಲ್ ಗೆ ಬಂದಿರುವುದಿಲ್ಲ. ಆಕೆಯೂ ಸಹ ಬೆಳಗ್ಗೆಯಿಂದ ಸಂಜೆಯವರೆಗೂ ಹೋಟೆಲ್ ನಿಂದ ಹೊರ ಬರದ ಕಾರಣ ಅನುಮಾನಗೊಂಡು ಹೋಟೆಲ್ ಸಿಬ್ಬಂದಿ  ರೂಂನಲ್ಲಿದ್ದ ಇಂಟರ್ ಕಾಂಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ್ದಾಗ ಅನುಮಾನಗೊಂಡ ಸಿಬ್ಬಂದಿ ದೇವರಾಜ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೇವರಾಜ ಪೊಲೀಸರು ಬಂದು ರೂಂ ತೆರೆದು ನೋಡಿದಾಗ ಅಪೂರ್ವ ಶೆಟ್ಟಿ ರೂಂನಲ್ಲಿ ಹೆಣವಾಗಿ ಬಿದಿದ್ದಾಳೆ.

ಇನ್ನೂ ಅಪೂರ್ವ ಶೆಟ್ಟಿ ಸ್ನೇಹಿತರ ಮಾಹಿತಿ ಪ್ರಕಾರ ಆಶಿಕ್ ಮತ್ತು ಅಪೂರ್ವಶೆಟ್ಟಿ ಕಳೆದ ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಕಳೆದ ಒಂದುವರೆ ವರ್ಷದ ಹಿಂದೆ ಮನೆಯವರಿಗೆ ವಿಚಾರ ತಿಳಿದು ಜಗಳ ಸಹ ಆಗಿದೆ. ಇಬ್ಬರಿಗೂ ಬುದ್ಧಿ ಮಾತು ಹೇಳಿ ದೂರ ಆಗುವಂತೆ ಹೇಳಿದ್ದಾರೆ. ಇದಾದ ಬಳಿಕವೂ ಆಕೆ ಆ ಹುಡುಗನ ಜೊತೆ ಸ್ನೇಹವನ್ನ ಮುಂದುವರೆಸಿದ್ದಾಳೆ. ಆಗಾಗ ಆತನ ಜೊತೆ ಸುತ್ತಾಡುತ್ತಿದ್ದಳು. 

ಹೋಟೆಲ್ ನಲ್ಲಿ ಒಟ್ಟಿಗೆ ಇದ್ದ ವೇಳೆ ಜಗಳ ನಡೆದು ಮಗಳು ಕೊಲೆಯಾಗಿರಬಹುದೆಂದು ಅಪೂರ್ವ ಶೆಟ್ಟಿ ತಂದೆ ದೇವರಾಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಸ್ನೇಹಿತ ಆಶಿಕ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆತ ಸಹ ಘಟನೆ ನಡೆದ ನಂತರ ಆತ್ಮಹತ್ಯೆಗೆ ಯತ್ನಸಿದ್ದ ಎಂಬ ಮಾಹಿತಿಗಳು ಲಭ್ಯವಾಗಿದೆ.

ಒಟ್ಟಾರೆ ಪೊಲೀಸರ ತನಿಖೆಯ ನಂತವಷ್ಟೇ ಅಪೂರ್ವಶೆಟ್ಟಿಯ ಸಾವಿನ ರಹಸ್ಯ ಗೊತ್ತಾಗಲಿದೆ. ಇದೆಲ್ಲಾ ಏನೇ ಇರಲಿ ತಂದೆ ತಾಯಿ ಓದು ಅಂತ ಕಳಿಸಿದ್ರೆ ಈ ರೀತಿ ಪ್ರೀತಿ ಪ್ರೇಮ ಅನ್ನೂ ಹುಚ್ಚಿಗೆ ಬಿದ್ದು ಈ ರೀತಿ ಬಲಿಯಾಗಿದ್ದು ಮಾತ್ರ ದುರಂತ. 

Latest Videos

click me!