ಪರಿಚಯವಾದ ಕೆಲವೇ ದಿನಗಳಲ್ಲಿ ಅವನು ರೂಮ್‌ಗೆ ಕರೆದಿದ್ದ: ಡೆತ್ ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ

Published : Jul 08, 2022, 10:35 PM IST

ಡೆತ್ ನೋಟ್ ಬರೆದಿಟ್ಟು ಪ್ರಿಯಕರನ ಜೊತೆ ವಿಡಿಯೋ ಕಾಲ್ ಮಾಡಿಕೊಂಡು ಪ್ರಿಯತಮೆ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ‌ಚಿಂತಾಮಣಿ ತಾಲೂಕಿನ ‌ಕುರಬೂರು ಕೃಷಿ ವಿಶ್ವವಿದ್ಯಾಲಯ ದಲ್ಲಿ ನಡೆದಿದೆ. ಅಂತಿಮ ವರ್ಷದ  ಬಿಎಸ್ಸಿ ವ್ಯಾಸಂಗ ಮಾಡುತಿದ್ದ ವಿದ್ಯಾರ್ಥಿನಿ ಪವಿತ್ರ ಎಸ್ (20 )ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಡೆತ್ ನೋಟ್ ನಲ್ಲಿ ಏನಿತ್ತು? ಈ ಕೆಳಗಿದೆ ನೋಡಿ

PREV
16
ಪರಿಚಯವಾದ ಕೆಲವೇ ದಿನಗಳಲ್ಲಿ ಅವನು ರೂಮ್‌ಗೆ ಕರೆದಿದ್ದ: ಡೆತ್ ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ

ಚಿಕ್ಕಬಳ್ಳಾಪುರ ಜಿಲ್ಲೆಯ ‌ಚಿಂತಾಮಣಿ ತಾಲೂಕಿನ ‌ಕುರಬೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಅಂತಿಮ ವರ್ಷದ  ಬಿಎಸ್ಸಿ ವ್ಯಾಸಂಗ ಮಾಡುತಿದ್ದ ವಿದ್ಯಾರ್ಥಿನಿ ಪವಿತ್ರ ಎಸ್ (20 )ಆತ್ಮಹತ್ಯೆಗೆ ಶರಣಾಗಿದ್ದಾಳೆ.

26

ವಿಶ್ವ ವಿದ್ಯಾಲಯದ ಹಾಸ್ಟೆಲ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ಪವಿತ್ರ ಗುರುವಾರ ರಾತ್ರಿ ತನ್ನ ಸ್ನೇಹಿತನೊಂದಿಗೆ ವೀಡಿಯೋ ಕಾಲ್ ಮಾಡಿ, ಬಳಿಕ ತನ್ನ ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇನ್ನು ಈ ವಿದ್ಯಾರ್ಥಿನಿಯ‌ಸಾವಿನ ಸುತ್ತ ಅನುಮಾನಗಳು ವ್ಯಕ್ತವಾಗುತ್ತಿವೆ.

36

ತೆಲಂಗಾಣದ ಯುವಕನ ಜೊತೆಗೆ ಪವಿತ್ರಾಗೆ ಲವ್ ಇತ್ತು ಎನ್ನಲಾಗಿದೆ.. ಫೇಸ್ ಬುಕ್, ಇನ್ಸ್‌ಟಾಗ್ರಾಮ್ ಮೂಲಕ ತೆಲಂಗಾಣದ ಯುವಕನ ಜೊತೆ ಲವ್ ಆಗಿತ್ತು ಎನ್ನಲಾಗಿದೆ.. ನಿನ್ನೆ(ಗುರುವಾರ) ರಾತ್ರಿಯು ಕೂಡ ಇಬ್ಬರು ವಿಡಿಯೋ ಕಾಲ್ ಮೂಲಕ ಮಾತನಾಡಿದ್ದಾರೆ.. ಆದ್ರೆ ಇದಕ್ಕಿದ್ದಂತೆ ಪವಿತ್ರಾ ಹಾಸ್ಟೆಲ್ ನ ರೂಂ ನಲ್ಲಿಯೇ ನೇಣಿಗೆ ಶರಣಾಗಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ. 

46

ಇನ್ನೂ ಆತ್ಮಹತ್ಯೆ ಮಾಡಿಕೊಂಡ ಅದೇ ದಿನ ತಡರಾತ್ರಿ ಯುವಕ ಪವಿತ್ರಾಗೆ ಕರೆ ಮಾಡಿ ಮಾತನಾಡಿದ್ದಾನೆ. ಈ ವೇಳೆ ಇಬ್ಬರ ನಡುವೆ ಜಗಳ ನಡೆದಿರುವ ಶಂಕೆ ವ್ಯಕ್ತವಾಗಿದೆ. ವಿ ರೂಂನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ವಿಡಿಯೋ ಕಾಲ್ ಮಾಡುತ್ತಿದ್ದಂಗೆ ಪ್ರಿಯಕರ ಕೂಡಲೇ ಹಾಸ್ಟೆಲ್ ನಲ್ಲಿದ್ದ ಪವಿತ್ರಾ ಸ್ನೇಹಿತರಿಗೆ ಕಾಲ್ ಮಾಡಿದ್ದಾನೆ. ಆದ್ರೆ ರಾತ್ರಿ ಸಮಯದಲ್ಇ ಯಾರು ರಿಸಿವ್ ಮಾಡಿಲ್ಲ. ಬಳಿಕ ಮೆಸೇಜ್ ಮಾಡಿ ಮಾಹಿತಿ ನೀಡಿದ್ದಾನೆ... ಆದ್ರೆ ಬಳಿಕ ಸ್ನೇಹಿತರು ನೋಡುವಷ್ಟರಲ್ಲೇ ಪವಿತ್ರಾ ಸಾವನ್ನಪ್ಪಿದ್ದಳು.

56

ಡೆತ್ ನೋಟ್ ಬರೆದಿಟ್ಟು ಪವಿತ್ರಾ ಸೂಸೈಡ್ !
ಈಚೆಗಷ್ಟೇ ನನಗೆ ಅಪರಿಚಿತ ಯುವಕನ ಮೊಬೈಲ್ ನಂಬರ್ ಸಿಕ್ಕಿ ಆತನೊಂದಿಗೆ ಪರಿಚಯವಾಗಿ ಪ್ರೇಮವಾಗಿತ್ತು. ಆತ ಒಳ್ಳೆಯವನೆಂದು ಭಾವಿಸಿದ್ದೆ, ಆದ್ರೆ ಅವನು ಒಳ್ಳೆಯವನಲ್ಲ ಪರಿಚಯವಾದ ಕೆಲವೇ ದಿನಗಳಲ್ಲಿ ರೂಮ್‌ಗೆ ಕರೆದಿದ್ದ. ನಂತರ ನಾನು ಆತನೊಂದಿಗೆ ಮಾತನಾಡುವುದನ್ನೇ ಬಿಟ್ಟಿದ್ದೆ. ಅದರೂ ಅವನು ಮತ್ತೆ ಮತ್ತೆ ಫೋನ್‌ಕಾಲ್, ಮೆಸೇಜ್ ಮಾಡುತ್ತಿದ್ದ. ಮತ್ತೆ ಪ್ರೇಮ ಶುರುವಾಗಿ ಆತನೇ ಪ್ರಪಂಚ ಎಂಬಂತಾಗಿತ್ತು. ಈ ವಿಚಾರ ಯುವಕನ ಮನೆಯಲ್ಲಿ ಗೊತ್ತಾಗಿ ಅವನ ಅಕ್ಕ ನನಗೆ ಕರೆ ಮಾಡಿ, ಬೈದಿದ್ದರು. ಇದರಿಂದ ನಾವಿಬ್ಬರೂ ಬೇರೆಯಾಗೋಣ ಅಂತಾನೂ ತೀರ್ಮಾನ ಮಾಡಿದ್ದೀವಿ..’ ಎಂದು ಯುವತಿ ಬರೆದಿದ್ದಾಳೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ಏನೆಂದು ಬರೆದಿಲ್ಲ.

66

ಇನ್ನೂ ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆದ್ದು, ಈ ಸಂಬಂಧ ಐಪಿಸಿ ಸೆಕ್ಷನ್ 306 ರ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಪವಿತ್ರಾ ಮೊಬೈಲ್ ಲಾಕ್ ಆಗಿದ್ದು, ಪವಿತ್ರಾ ಪ್ರೇಮದ ಬಗ್ಗೆ ಬರೆದಿರೋ ಲೇಟರ್ ಕೂಡ ಸಿಕ್ಕಿದ್ದು, ಪೊಲೀಸರು ಈ ಸಂಬಂಧ ತನಿಖೆ ಮಾಡುತ್ತಿದ್ದಾರೆ. ಇನ್ನು ಘಟನೆಯ ಬಳಿಕ ಮಾತನಾಡಿದ ಪವಿತ್ರಾ ಪೊಷಕರು ಹಾಸ್ಟೆಲ್‌ನಲ್ಲಿ Ragging ನಡೆಯುತ್ತಿರುವುದಾಗಿ ಮಗಳು ತಿಳಿಸಿದ್ದು ಹಾಸ್ಟೆಲ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಚಿಂತಾಮಣಿ ಗ್ರಾಮಾಂತರ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ.

Read more Photos on
click me!

Recommended Stories