ಬೆಂಗಳೂರಿನ ಡ್ಯಾನ್ಸರ್ ತುಂಗಭದ್ರಾ ಹೊಳೆಯಲ್ಲಿ ಮುಳುಗಿ ಸಾವು

Published : Aug 20, 2022, 07:46 PM IST

ಬೆಂಗಳೂರಿನ ಡ್ಯಾನ್ಸರ್  ತುಂಗಭದ್ರಾ ಹೊಳೆಯಲ್ಲಿ  ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕಲರ್ ಡ್ಯಾನ್ಸ್ ಟೀಮ್ ಇನ್ ಚಾರ್ಜ್ ಆಗಿದ್ದ ಗಿರೀಶ್ ಎಂಬಾತ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಬೆಂಗಳೂರಿನ ಕಲರ್ಸ್ ಡ್ಯಾನ್ಸ್ ಟೀಮ್ ತಂಡದ ಸದಸ್ಯನಾಗಿದ್ದ ಈತ ತಂಡದೊಂದಿಗೆ ಶುಕ್ರವಾರ ಕಾರ್ಯಕ್ರಮಕ್ಕೆಂದು ಹೊನ್ನಾಳಿಗೆ ಬಂದಿದ್ದ. ಹೊನ್ನಾಳಿಯಲ್ಲಿ ಕಾರ್ಯಕ್ರಮ  ಮುಗಿಸಿಕೊಂಡು ಪ್ರವಾಸಿ ಮಂದಿರದಲ್ಲಿ ಸ್ಟೇ ಆಗಿದ್ದರು. 

PREV
13
ಬೆಂಗಳೂರಿನ ಡ್ಯಾನ್ಸರ್  ತುಂಗಭದ್ರಾ  ಹೊಳೆಯಲ್ಲಿ  ಮುಳುಗಿ ಸಾವು

ಬಿಸಿಲು , ಸೆಕೆ ಇದ್ದುದರಿಂದ  ತುಂಗಭದ್ರಾ  ಹೊಳೆಗೆ ಸ್ನಾನಕ್ಕೆ‌ ಹೋಗಿದ್ದ ಗಿರೀಶ್  ಹಾಗು ಆತನ‌ ಸ್ನೇಹಿತ. ಸ್ನೇಹಿತನನ್ನು ರಕ್ಷಿಸಲು ಹೋಗಿ ಹರಿಯುತ್ತಿದ್ದ  ಹೊಳೆ ನೀರಿನಲ್ಲಿ ಸಿಲುಕಿ ಸಾವು.

23

ತುಂಗ ಭದ್ರಾ ಹೊಳೆಗೆ ಮೊದಲು ಬಿದ್ದ ಸ್ನೇಹಿತ ಬಚಾವ್, ಸ್ನೇಹಿತನನ್ನು ಉಳಿಸಲು ಹೋಗಿ ದುರಂತ ಸಾವು ಕಂಡ  ಡಾನ್ಸರ್ ಗಿರೀಶ್ .

33

 ಪೊಲೀಸರು ಅಗ್ನಿಶಾಮಕದಳದಿಂದ ಮೃತದೇಹ ಹೊರಕ್ಕೆ . ಹಲವಾರು ಸಿನಿಮಾ ರಿಯಾಲಿಟಿ ಶೋ ಗಳಲ್ಲಿ ನಟಿಸಿದ್ದ ಗಿರೀಶ್. ಇಂದು ಫಲವನಹಳ್ಳಿ ಗ್ರಾಮದಲ್ಲಿ ಆರ್ಕೇಸ್ಟ್ರಾ ನಿಗಧಿಯಾಗಿತ್ತು

Read more Photos on
click me!

Recommended Stories