ಬೆಂಗಳೂರು(ಡಿ.11) ಪ್ರತಿವರ್ಷ ಟೀಂ ಇಂಡಿಯಾಗೆ ಹಲವು ಯಂಗ್‌ಸ್ಟರ್ಸ್ ಎಂಟ್ರಿ ಕೊಡ್ತಾರೆ. ಆದರೆ, ಹೀಗೆ ಎಂಟ್ರಿ ಕೊಟ್ಟವರಲ್ಲಿ ಕೆಲವರು ಮಾತ್ರ ತಂಡದಲ್ಲಿ ಪರ್ಮನೆಂಟಾಗಿ ಉಳಿತಾರೆ. ಇನ್ನು ಕೆಲವರು ಬಂದಷ್ಟೆ ಬೇಗ ಜಾಗ ಖಾಲಿ ಮಾಡ್ತಾರೆ. ಟೀಂ ಇಂಡಿಯಾಗೆ ಹೀಗೆ ಬಂದು ಹಾಗೇ ಹೋದ ಆಟಗಾರರು ಯಾರು ಗೊತ್ತಾ..? ಈ ಸ್ಟೋರಿ ನೋಡಿ...!
ಸದ್ಯ ಟೀಂ ಇಂಡಿಯಾದಲ್ಲಿ ಯಂಗ್‌ಸ್ಟರ್ಸ್‌ಗಳ ಆರ್ಭಟ ಜೋರಾಗಿದೆ. ಆದ್ರೆ, ಎಲ್ಲಾ ಈ ಯಂಗ್‌ಸ್ಟರ್ಸ್‌ಗಳು ತಂಡದಲ್ಲಿ ಪರ್ಮನೆಂಟ್ ಮೆಂಬರ್ ಆಗಿ ಉಳಿಯೋದಿಲ್ಲ. ಸ್ಥಿರ ಪ್ರದರ್ಶನ ನೀಡಿದವರ ಸ್ಥಾನ ಮಾತ್ರ ತಂಡದಲ್ಲಿರ್ತಾರೆ. ಉಳಿದವರು ತಂಡದಿಂದ ಕಣ್ಮರೆಯಾಗ್ತಾರೆ. ದುರಾದೃಷ್ಟ ಅಂದ್ರೆ, ಇನ್ನು ಕೆಲ ಆಟಗಾರರಿಗೆ ತಮ್ಮ ತಾಕತ್ತು ಪ್ರೂವ್ ಮಾಡಲು ಚಾನ್ಸ್ ಸಿಗದೇ, ಟೀಮಿಂದ ಔಟಾಗಿದ್ದಾರೆ.
26
11 ಪಂದ್ಯಕ್ಕೆ ವೆಂಕಟೇಶ್ ಅಯ್ಯರ್ ಆಟ ಕ್ಲೋಸ್..!
ಹಾರ್ದಿಕ್ ಪಾಂಡ್ಯ ಬದಲಿಗೆ ಟೀಂ ಇಂಡಿಯಾದಲ್ಲಿ ಚಾನ್ಸ್ ಪಡೆದ ವೆಂಕಟೇಶ್ ಅಯ್ಯರ್, ಮೇಲೆ ಸಾಕಷ್ಟು ನಿರೀಕ್ಷೆಗಳಿದ್ವು. ಆದ್ರೆ ಭರವಸೆಗಳೆಲ್ಲಾ ಅಷ್ಟೇ ಬೇಗ ಹುಸಿಯಾದ್ವು. 2021ರಲ್ಲಿ ಟಿ20 ಮೂಲಕ ತಂಡಕ್ಕೆ ಎಂಟ್ರಿ ನೀಡಿದ ವೆಂಕಿ, ಆರಂಭಿಕ ಕೆಲ ಪಂದ್ಯಗಳಲ್ಲಿ ಮಿಂಚಿದ್ರು. ಇದ್ರಿಂದ ಏಕದಿನ ತಂಡದಲ್ಲೂ ಚಾನ್ಸ್ ಸಿಕ್ತು. ಆದ್ರೆ, ನಂತರದ ಅವಕಾಶಗಳಲ್ಲಿ ಈ ಎಡಗೈ ಬ್ಯಾಟರ್ ಫ್ಲಾಪ್ ಶೋ ನೀಡಿದ್ರು. ಟೀಮ್ ಮ್ಯಾನೇಜ್ಮೆಂಟ್ ನಂಬಿಕೆ ಕಳೆದುಕೊಂಡು ವರ್ಷವೊಂದರಲ್ಲೇ ತಂಡದಿಂದ ಹೊರಬಿದ್ರು.
36
ಒಂದೇ ವರ್ಷಕ್ಕೆ ನಟರಾಜನ್ ಮಾಯ..!
ಇನ್ನೂ 2021ರಲ್ಲಿ ಟೆಸ್ಟ್‌ಗೆ ಡೆಬ್ಯು ಮಾಡಿದ ತಮಿಳುನಾಡು ಎಕ್ಸ್ಪ್ರೆಸ್ ಟಿ ನಟರಾಜನ್ ಹೊಸ ಹವಾ ಎಬ್ಬಿಸಿದ್ರು. ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿಗೆ ಕಾರಣರಾಗಿದ್ರು. ಟಿ20ಯಲ್ಲೂ ಅವಕಾಶ ಪಡೆದ್ರು. ಆದ್ರೆ ಫಿಟ್ನೆಸ್ ಸಮಸ್ಯೆಯಿಂದ ಹೊರಬಿದ್ದ ನಟ್ಟು ಮತ್ತೆ ತಂಡಕ್ಕೆ ಮರಳಲಿಲ್ಲ.
46
ಚೇತನ್ ಸಕಾರಿಯಾ ಆಡಿದ್ದು ಒಂದೇ ಸರಣಿ
ಯುವ ವೇಗಿ ಚೇತನ್ ಸಕಾರಿಯಾ ಕಥೆಯು ಸೇಮ್. 2021ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಆಡಿದ ಸಕಾರಿಯಾ, ಡೆಬ್ಯು ಮ್ಯಾಚ್ನಲ್ಲೇ ಎರಡು ವಿಕೆಟ್ ಕಬಳಿಸಿ ಮ್ಯಾಜಿಕ್ ಮಾಡಿದ್ರು. ಆದ್ರೆ, ನಂತರದ ಪಂದ್ಯಗಳಲ್ಲಿ ಮ್ಯಾಜಿಕ್ ಮರೆಯಾಯ್ತು. ಆಮೇಲೆ ತಂಡದಿಂದ ಗೇಟ್ ಪಾಸ್ ಸಿಕ್ತು.
56
ಬಂದಷ್ಟೇ ಬೇಗ ಜಾಗ ಖಾಲಿ ಮಾಡಿದ ರಾಹುಲ್ ಚಹಾರ್
ಲೆಗ್ ಸ್ಪಿನ್ನರ್ 2021ರ ಟಿ20 ವಿಶ್ವಕಪ್‌ನಲ್ಲಿ ಅಚ್ಚರಿ ರೀತಿಯಲ್ಲಿ ಸ್ಥಾನ ಪಡೆದಿದ್ದರು. ಆರು ಟಿ20 ಪಂದ್ಯಗಳಿಂದ 7 ವಿಕೆಟ್ ಕಬಳಿಸಿದ್ರು. ಆದರೂ ಯಾವುದೇ ಪ್ರಯೋಜನಕ್ಕೆ ಬರಲಿಲ್ಲಿ. ಯಾಕಂದ್ರೆ, ಆಮೇಲೆ ರಾಹುಲ್ ಆಯ್ಕೆ ಸಮಿತಿ ಕಣ್ಣಿಗೆ ಬೀಳಲಿಲ್ಲ.
66
ಒಟ್ಟಿನಲ್ಲಿ ಟೀಂ ಇಂಡಿಯಾದಲ್ಲಿ ಚಾನ್ಸ್ ಪಡೆಯೋದು ದೊಡ್ಡ ವಿಷ್ಯವಲ್ಲ. ತಂಡದಲ್ಲಿ ಎಷ್ಟು ದಿನ ಇರ್ತೀವಿ, ಎಷ್ಟು ಪಂದ್ಯವಾಡ್ತೀವಿ ಅನ್ನೋದು ಮುಖ್ಯ.ಸದ್ಯ ತಂಡದಲ್ಲಿ ಅಬ್ಬರಿಸ್ತಿರೋ ಯಂಗ್ಸ್ಟರ್ಸ್ ಆರಂಭ ಶೂರರಾಗದೇ, ಸ್ಥಿರ ಪ್ರದರ್ಶನದ ಮೂಲಕ ತಂಡದಲ್ಲಿ ಖಾಯಂ ಆಗಿ ಉಳಿತಾರಾ ಅನ್ನೋದನ್ನ ಕಾದು ನೋಡಬೇಕಿದೆ.