ಇಟಲಿ ಹಾಟ್ ಫುಟ್ಬಾಲ್ ಆಟಗಾರ್ತಿ ವಿರಾಟ್ ಕೊಹ್ಲಿ ಅಪ್ಪಟ ಅಭಿಮಾನಿ..! ಇಲ್ಲಿವೆ ಕಿಕ್ಕೇರಿಸೋ ಫೋಟೋಗಳು

First Published | Dec 9, 2023, 2:57 PM IST

ಬೆಂಗಳೂರು: ಟೀಂ ಇಂಡಿಯಾ ಮಾಜಿ ನಾಯಕ, ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿ ಅತ್ಯಂತ ಜನಪ್ರಿಯ ಕ್ರಿಕೆಟಿಗ ಎನ್ನುವುದರಲ್ಲಿ ಎರಡು ಮಾತಿಲ್ಲ. ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಫ್ಯಾನ್‌ ಬೇಸ್ ಹೊಂದಿರುವ ವಿರಾಟ್ ಕೊಹ್ಲಿಗೆ ಇಟಲಿಯ ವೃತ್ತಿಪರ ಫುಟ್ಬಾಲ್ ಆಟಗಾರ್ತಿ ಕೂಡಾ ಅಪ್ಪಟ ಅಭಿಮಾನಿ. ಯಾರು ಆ ಆಟಗಾರ್ತಿ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

ಕ್ರಿಕೆಟ್‌ ದಂತಕಥೆ ವಿರಾಟ್ ಕೊಹ್ಲಿಗೆ ಭಾರತ ಮಾತ್ರವಲ್ಲದೇ ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳಿರುವುದು ಎಲ್ಲರಿಗೂ ಗೊತ್ತೇ ಇದೆ. ಆ ಅಭಿಮಾನಿ ಬಳಗ ಕೇವಲ ಕ್ರಿಕೆಟ್ ವಲಯಕ್ಕೆ ಮಾತ್ರ ಸೀಮಿತವಾಗಿಲ್ಲ 

ಇಂತಹ ಅಭಿಮಾನಿಗಳ ಪೈಕಿ ಇಟಲಿಯ ವೃತ್ತಿಪರ ಫುಟ್ಬಾಲ್ ಆಟಗಾರ್ತಿ ಅಗಾಟ ಇಸಾಬೆಲ್ಲಾ ಸೆಂಟಸ್ಸೋ ಕೂಡಾ ಒಬ್ಬರು. ಸ್ವತಃ ತಾರಾ ಫುಟ್ಬಾಲ್ ಆಟಗಾರ್ತಿಯಾಗಿದ್ದರೂ, ಆಕೆ ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ ಕೂಡಾ ಹೌದು.

Tap to resize

ಅಗಾಟ ಇಸಾಬೆಲ್ಲಾ ಸೆಂಟಸ್ಸೋ ಇಟಲಿಯ ಖ್ಯಾತ ಫುಟ್ಬಾಲ್ ಆಟಗಾರ್ತಿಯಾಗಿದ್ದಾರೆ. ಅಗಾಟ ಇಸಾಬೆಲ್ಲಾ ಸೆಂಟಸ್ಸೋ ಈಗ ವೆನೆಜಿಯಾ ಫುಟ್ಬಾಲ್ ಕ್ಲಬ್ ಅನ್ನು ಪ್ರತಿನಿಧಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಒಮ್ಮೆ ನಿಮ್ಮ ನೆಚ್ಚಿನ ಭಾರತೀಯ ಕ್ರಿಕೆಟಿಗ ಯಾರು ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದ ಅಗಾಟ ಇಸಾಬೆಲ್ಲಾ ಸೆಂಟಸ್ಸೋ, ನನ್ನ ಫೇವರೇಟ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಎಂದಿದ್ದರು.

ಅಗಾಟ ಇಸಾಬೆಲ್ಲಾ ಸೆಂಟಸ್ಸೋ, ಟೀಂ ಇಂಡಿಯಾ ಜೆರ್ಸಿ ತೊಟ್ಟ ವಿರಾಟ್ ಕೊಹ್ಲಿಯ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು, ಅದರ ಕೆಳಗೆ ಗೋಟ್(G.O.A.T) ಎಮೋಜಿಯನ್ನು ಪೋಸ್ಟ್ ಮಾಡಿದ್ದರು.

ಇನ್ನು 2023ರ  ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ವೇಳೆಯಲ್ಲಿ ಅಗಾಟ ಇಸಾಬೆಲ್ಲಾ ಸೆಂಟಸ್ಸೋ ಸ್ವತಃ ಟೀಂ ಇಂಡಿಯಾ ಜೆರ್ಸಿ ತೊಟ್ಟು, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೋ ಹಂಚಿಕೊಳ್ಳುವ ಮೂಲಕ ಭಾರತ ತಂಡಕ್ಕೆ ಬಹಿರಂಗವಾಗಿಯೇ ಬೆಂಬಲ ಸೂಚಿಸಿದ್ದರು.

ಅಗಾಟ ಇಸಾಬೆಲ್ಲಾ ಸೆಂಟಸ್ಸೋ ಜಗತ್ತಿನ ಹಾಟೆಸ್ಟ್‌ ಫುಟ್ಬಾಲ್ ಆಟಗಾರ್ತಿಯರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಈಕೆಯ ಮೈಮಾಟಕ್ಕೆ ಮನಸೋಲದ ವ್ಯಕ್ತಿಯೇ ಇಲ್ಲ ಎಂದರೆ ಅತಿಶಯೋಕ್ತಿಯಾಗಲಾರದು.

Agata Isabella Centasso

ಅಗಾಟ ಇಸಾಬೆಲ್ಲಾ ಸೆಂಟಸ್ಸೋ ಒಂದು ವರ್ಷದೀಚೆಯಿಂದ ಕ್ರಿಕೆಟ್ ನೋಡಲು ಆರಂಭಿಸಿದ್ದಾರಂತೆ. ಭಾರತೀಯ ಮೂಲದ ಸ್ನೇಹಿತನೊಬ್ಬನಿಂದ ತಮಗೆ ಕ್ರಿಕೆಟ್ ಹಾಗೂ ವಿರಾಟ್ ಕೊಹ್ಲಿ ಮೇಲಿನ ಅಭಿಮಾನ ಹೆಚ್ಚಾಗಿದೆ ಎಂದು ಹೇಳಿದ್ದರು.

ಅಗಾಟ ಇಸಾಬೆಲ್ಲಾ ಸೆಂಟಸ್ಸೋ ಅವರಿಗೆ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ 73 ಸಾವಿರಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ಇನ್ನು ಆಗಿನ ಟ್ವಿಟರ್, ಈಗಿನ 'ಎಕ್ಸ್‌'ನಲ್ಲಿ 1.5 ಮಿಲಿಯನ್ ಫಾಲೋವರ್ಸ್ ಇದ್ದಾರೆ.

Latest Videos

click me!