ಭಾರತ ಪರ ಎರಡನೇ ಗರಿಷ್ಠ ರನ್ ಸಿಡಿಸಿದರೂ ಪ್ರತೀಕಾಗೆ ಸಿಗಲಿಲ್ಲ ಮೆಡಲ್! ಈಕೆಯ ಜರ್ನಿ ಹಲವರಿಗೆ ಸ್ಪೂರ್ತಿ

Published : Nov 04, 2025, 06:09 PM IST

ಭಾರತೀಯ ಮಹಿಳಾ ಕ್ರಿಕೆಟ್ ತಂಡ 2025ರ ಏಕದಿನ ವಿಶ್ವಕಪ್ ಟ್ರೋಫಿ ಗೆಲ್ಲುವಲ್ಲಿ ದೆಹಲಿಯ ಯುವ ಕ್ರಿಕೆಟರ್ ಪ್ರತೀಕಾ ರಾವಲ್ ಪ್ರಮುಖ ಪಾತ್ರ ವಹಿಸಿದ್ದರು. ಹೀಗಿದ್ದರೂ ಆಕೆಗೆ ಚಾಂಪಿಯನ್ ತಂಡದ ಮೆಡಲ್ ಸಿಗಲಿಲ್ಲ. ಈಕೆಯ ಕ್ರಿಕೆಟ್ ಜರ್ನಿ ಹಲವರಿಗೆ ಸ್ಪೂರ್ತಿ. 

PREV
15
ಕ್ರಿಕೆಟ್ ಕುಟುಂಬದಿಂದ ಬಂದ ಭಾರತದ ಹೆಮ್ಮೆಯ ಆಟಗಾರ್ತಿ ಪ್ರತೀಕಾ ರಾವಲ್

2025ರ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಗೆಲುವಿಗೆ ಪ್ರತೀಕಾ ರಾವಲ್ ಪ್ರಮುಖ ಶಕ್ತಿಯಾಗಿದ್ದರು. ಪ್ರತೀಕಾ ರಾವಲ್ 7 ಪಂದ್ಯಗಳಿಂದ ಆರು ಇನ್ನಿಂಗ್ಸ್ ಆಡಿ 308 ರನ್ ಸಿಡಿಸಿದ್ದರು.

25
ಕ್ರಿಕೆಟರ್ ಆಗಲು ಪ್ರತೀಕಾ ರಾವಲ್ ಎದುರಿಸಿದ ಸವಾಲುಗಳೇನು?

ಪ್ರತೀಕಾ ಸೇರಿದ ಕ್ರಿಕೆಟ್ ಅಕಾಡೆಮಿಯಲ್ಲಿ ಆಕೆಯೇ ಏಕೈಕ ಹುಡುಗಿ. ಇದರಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಆರಂಭದಲ್ಲಿ ಕಷ್ಟಪಟ್ಟರು. ಆದರೆ, ಟೀಕೆಗಳನ್ನು ಮೆಟ್ಟಿ ನಿಂತು ಮುಂದೆ ಸಾಗಿದರು.

35
ಭಾರತ ತಂಡದಲ್ಲಿ ಪ್ರತೀಕಾ ದಾಖಲೆಗಳು

ಕೇವಲ 8 ಇನ್ನಿಂಗ್ಸ್‌ಗಳಲ್ಲಿ 500 ಏಕದಿನ ರನ್ ಪೂರೈಸಿ, ವೇಗವಾಗಿ ಈ ಸಾಧನೆ ಮಾಡಿದ ಷಾರ್ಲೆಟ್ ಎಡ್ವರ್ಡ್ಸ್ ದಾಖಲೆಯನ್ನು ಮುರಿದರು. ಐರ್ಲೆಂಡ್ ವಿರುದ್ಧ 154 ರನ್ ಗಳಿಸಿ ಮಿಂಚಿದರು.

45
ಪ್ರತಿಕಾಗೆ ಸಿಗಲಿಲ್ಲ ಚಾಂಪಿಯನ್!

2025ರ ವಿಶ್ವಕಪ್‌ನ ಲೀಗ್ ಹಂತದಲ್ಲಿ ಪ್ರತೀಕಾ ರಾವಲ್ ಅದ್ಭುತ ಪ್ರದರ್ಶನದ ಮೂಲಕ ಭಾರತ ಪರ ಎರಡನೇ ಗರಿಷ್ಠ ರನ್ ಬಾರಿಸಿ ಮಿಂಚಿದ್ದರು. ಆದರೆ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಗಾಯಗೊಂಡು ಟೂರ್ನಿಯಿಂದಲೇ ಹೊರಬಿದ್ದರು. ಹೀಗಾಗಿ ಪ್ರತೀಕಾಗೆ ಚಾಂಪಿಯನ್ ತಂಡದ ಮೆಡಲ್ ಕೂಡಾ ಸಿಗಲಿಲ್ಲ. ಆದರೂ ಪ್ರತೀಕಾ ವೀಲ್ ಚೇರ್‌ನಲ್ಲಿ ಭಾರತ ತಂಡದ ಜತೆ ಸಂಭ್ರಮಿಸಿದರು.

55
ಪ್ರತೀಕಾಗೆ ಸಿಗಬೇಕಾದ ಮೆಡಲ್ ಶಫಾಲಿ ಪಾಲು!

ಇನ್ನು ಪ್ರತೀಕಾ ರಾವಲ್ ಬದಲಿಗೆ ಕೊನೆಯ ಎರಡು ಪಂದ್ಯಗಳಿಗೆ ಭಾರತ ತಂಡ ಕೂಡಿಕೊಂಡ ಶಫಾಲಿ ವರ್ಮಾ ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆಲ್ಲುವುದರ ಜತೆಗೆ ಚಾಂಪಿಯನ್ ತಂಡದ ಮೆಡಲ್ ಕೂಡಾ ತಮ್ಮದಾಗಿಸಿಕೊಂಡರು.

Read more Photos on
click me!

Recommended Stories