ಮುಂಬೈ: ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು ಚೊಚ್ಚಲ ಐಸಿಸಿ ಏಕದಿನ ಟ್ರೋಫಿ ಗೆದ್ದು ಬೀಗಿದೆ.ಇದರ ಬೆನ್ನಲ್ಲೇ ಹರ್ಮನ್ ನಾಯಕತ್ವದಿಂದ ಕೆಳಗಿಳಿಯಲಿ ಎಂದು ಕನ್ನಡತಿ ಹಾಗೂ ಭಾರತದ ಮೊದಲ ಮಹಿಳಾ ಕ್ಯಾಪ್ಟನ್ ಶಾಂತಾ ರಂಗಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ ಕಿರೀಟ ಗೆದ್ದ ಬೆನ್ನಲ್ಲೇ, ಹರ್ಮನ್‌ಪ್ರೀತ್ ಕೌರ್ ನಾಯಕತ್ವ ತ್ಯಜಿಸಬೇಕೆಂದು ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಸಲಹೆ ನೀಡಿದ್ದಾರೆ.
29
ಸ್ಮೃತಿ ಮಂಧನಾಗೆ ನಾಯಕತ್ವ ಪಟ್ಟ ಕಟ್ಟಲಿ
ಭಾರತೀಯ ಕ್ರಿಕೆಟ್‌ನ ಭವಿಷ್ಯದ ದೃಷ್ಟಿಯಿಂದ 36 ವರ್ಷದ ಹರ್ಮನ್‌ಪ್ರೀತ್ ಸ್ಥಾನದಿಂದ ಕೆಳಗಿಳಿದು, 29 ವರ್ಷದ ಉಪನಾಯಕಿ ಸ್ಮೃತಿ ಮಂಧಾನ ಅವರನ್ನು ನಾಯಕಿಯನ್ನಾಗಿ ಮಾಡಬೇಕೆಂದು ಶಾಂತಾ ರಂಗಸ್ವಾಮಿ ಪಿಟಿಐಗೆ ತಿಳಿಸಿದ್ದಾರೆ.
39
ನಾಯಕತ್ವ ತ್ಯಜಿಸಲು ಇದಕ್ಕಿಂತ ಉತ್ತಮ ಸಮಯ ಇನ್ನೊಂದಿಲ್ಲ
ನಾಯಕತ್ವ ತ್ಯಜಿಸಿದರೂ, ಹರ್ಮನ್ ಬ್ಯಾಟರ್ ಮತ್ತು ಫೀಲ್ಡರ್ ಆಗಿ ತಂಡದಲ್ಲಿ ಮುಂದುವರಿಯಬಹುದು. ನಾಯಕತ್ವದ ಹೊರೆ ಇಳಿದರೆ, ಅವರು ಹೆಚ್ಚು ಸ್ವತಂತ್ರವಾಗಿ ಆಡಲು ಮತ್ತು ತಂಡಕ್ಕೆ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗುತ್ತದೆ. ನಾಯಕತ್ವ ತ್ಯಜಿಸಲು ಇದಕ್ಕಿಂತ ಉತ್ತಮ ಸಮಯ ಇನ್ನೊಂದಿಲ್ಲ.
ವಿಶ್ವಕಪ್ ಗೆದ್ದ ನಂತರ ನಾಯಕತ್ವ ತ್ಯಜಿಸಿದರೆ ಹಲವರು ಅಸಮಾಧಾನ ವ್ಯಕ್ತಪಡಿಸಬಹುದು. ಆದರೆ ಭಾರತೀಯ ಕ್ರಿಕೆಟ್‌ನ ಭವಿಷ್ಯದ ದೃಷ್ಟಿಯಿಂದ ಇದು ಉತ್ತಮ ನಿರ್ಧಾರವಾಗಲಿದೆ. ಬ್ಯಾಟರ್ ಆಗಿ ಹರ್ಮನ್ ತಂಡಕ್ಕೆ ಇನ್ನಷ್ಟು ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದು ಶಾಂತಾ ರಂಗಸ್ವಾಮಿ ಸ್ಪಷ್ಟಪಡಿಸಿದ್ದಾರೆ.
59
ನಾಯಕತ್ವದ ಹೊರೆ ಇಳಿಸಿಕೊಳ್ಳಬೇಕು
ನಾಯಕತ್ವದ ಹೊರೆ ಇಳಿದರೆ, ಹರ್ಮನ್‌ಗೆ ಇನ್ನೂ ಮೂರ್ನಾಲ್ಕು ವರ್ಷಗಳ ಕಾಲ ಆಟ ಮುಂದುವರಿಸಲು ಸಾಧ್ಯವಾಗುತ್ತದೆ ಎಂದು ಶಾಂತಾ ರಂಗಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.
69
ಭವಿಷ್ಯದ ದೃಷ್ಟಿಯಿಂದ ಈ ತೀರ್ಮಾನ ಅನಿವಾರ್ಯ
ಪುರುಷರ ತಂಡದ ನಾಯಕ ರೋಹಿತ್ ಶರ್ಮಾ ಈ ವರ್ಷ ಚಾಂಪಿಯನ್ಸ್ ಟ್ರೋಫಿ ಗೆದ್ದರೂ, ಭವಿಷ್ಯದ ದೃಷ್ಟಿಯಿಂದ ಶುಭಮನ್ ಗಿಲ್‌ಗೆ ನಾಯಕತ್ವವನ್ನು ಹಸ್ತಾಂತರಿಸಿದಂತೆ, ಹರ್ಮನ್‌ರಿಂದಲೂ ಇದೇ ರೀತಿಯ ನಿರ್ಧಾರವನ್ನು ನಿರೀಕ್ಷಿಸಲಾಗಿದೆ.
79
ಭಾರತದ ಬೌಲಿಂಗ್ ಅನ್ನು ಇನ್ನಷ್ಟು ಸುಧಾರಿಸಬೇಕು
ಆಸ್ಟ್ರೇಲಿಯಾದಂತೆ ಮಹಿಳಾ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಮುಂದುವರಿಸಬೇಕಾದರೆ, ಭಾರತವು ಬೌಲಿಂಗ್ ಅನ್ನು ಇನ್ನಷ್ಟು ಸುಧಾರಿಸಬೇಕು ಎಂದು ಶಾಂತಾ ರಂಗಸ್ವಾಮಿ ಸ್ಪಷ್ಟಪಡಿಸಿದ್ದಾರೆ.
89
ಮುಂದಿನ ವರ್ಷ ಹರ್ಮನ್ ನಾಯಕತ್ವ ತ್ಯಜಿಸುವ ನಿರೀಕ್ಷೆ
ಮುಂದಿನ ವರ್ಷ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೂ ಮುನ್ನ ಹರ್ಮನ್‌ಪ್ರೀತ್ ನಾಯಕತ್ವ ತ್ಯಜಿಸುವ ನಿರೀಕ್ಷೆಯಿದೆ ಎಂದು ಭಾರತದ ಮೊದಲ ಮಹಿಳಾ ಕ್ರಿಕೆಟ್ ಕ್ಯಾಪ್ಟನ್ ಶಾಂತಾ ರಂಗಸ್ವಾಮಿ ಹೇಳಿದ್ದಾರೆ.
99
ಮುಂದಿನ ವಿಶ್ವಕಪ್ 2029ಕ್ಕೆ ನಡೆಯಲಿದೆ
ಮುಂದಿನ ಏಕದಿನ ವಿಶ್ವಕಪ್ 2029 ರಲ್ಲಿ ನಡೆಯಲಿದೆ. ವಿಶ್ವಕಪ್‌ನ ಸ್ಥಳವನ್ನು ಐಸಿಸಿ ಇನ್ನೂ ನಿರ್ಧರಿಸಿಲ್ಲ. ಮುಂದಿನ ಏಕದಿನ ವಿಶ್ವಕಪ್‌ನಲ್ಲಿ ಆಡಲು ಹರ್ಮನ್‌ಗೆ ವಯಸ್ಸು ಒಂದು ಸವಾಲಾಗಬಹುದು ಎಂದು ಭಾವಿಸಲಾಗಿದೆ.