ಬಾಂಗ್ಲಾದೇಶ ವೇಗಿ ಮುಸ್ತಾಫಿಝುರ್‌ ಕೊಟ್ಟ 9.2 ಕೋಟಿ ರೂಪಾಯಿ ಕೆಕೆಆರ್‌ಗೆ ಮರಳಿ ಸಿಗುತ್ತಾ?

Published : Jan 03, 2026, 08:30 PM IST

ಬಾಂಗ್ಲಾದೇಶ ವೇಗಿ ಮುಸ್ತಾಫಿಝುರ್‌ ಕೊಟ್ಟ 9.2 ಕೋಟಿ ರೂಪಾಯಿ ಕೆಕೆಆರ್‌ಗೆ ಮರಳಿ ಸಿಗುತ್ತಾ?, ಐಪಿಎಲ್ ಟೂರ್ನಿಯ ನಿಮಯವೇನು? ಬಾಂಗ್ಲಾದೇಶ ಆಟಗಾರರನ್ನು ಐಪಿಎಲ್ ಟೂರ್ನಿಯಿಂದ ಹೊರಗಿಡುವಾಗ ಪಾಲಿಸಬೇಕಾದ ನಿಯವೇನು? 

PREV
16
ವಿವಾದ ಸೃಷ್ಟಿಸಿದ ಮುಸ್ತಾಫಿಝುರ್ ರಹಮಾನ್ ಖರೀದಿ

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದಾಳಿಗೆ ಭಾರತದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಹಿಂದೂಗಳ ಮೇಲಿನ ದಾಳಿ ನಡುವೆ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಬಾಂಗ್ಲಾದೇಶ ವೇಗಿ ಮುಸ್ತಾಫಿಝುರ್ ರೆಹಮಾನ್‌ಗೆ 9.2 ಕೋಟಿ ರೂಪಾಯಿ ನೀಡಿ ಖರೀದಿಸಿ ವಿವಾದ ಸೃಷ್ಟಿಸಿತ್ತು. ಬಿಸಿಸಿಐ ಸೂಚನೆ ಬೆನ್ನಲ್ಲೇ ಮುಸ್ತಾಫಿಝುರ್‌ಗೆ ಕೊಕ್ ನೀಡಿತ್ತು.

26
ತಂಡದಿಂದ ಕೈಬಿಟ್ಟರೂ ಮುಸ್ತಾಫಿಝುರ್‌ಗೆ ನೀಡಬೇಕಾ 9.2 ಕೋಟಿ ರೂ

ಕೋಲ್ಕತಾ ನೈಟ್ ರೈಡರ್ಸ್ ತಂಡ ಬಾಂಗ್ಲಾದೇಶಿ ಕ್ರಿಕೆಟಿಗ ಮುಸ್ತಾಫಿಝುರ್ ರೆಹಮಾನ್‌ನನ್ನು ತಂಡದಿಂದ ಕೈಬಿಟ್ಟರೂ ಖರೀದಿ ವೇಳೆ ನೀಡಿದ 9.2 ಕೋಟಿ ರೂಪಾಯಿ ಮೊತ್ತವನ್ನು ಆಟಗಾರನಿಗೆ ನೀಡಬೇಕಾ? ಈ ಮೊತ್ತ ಕೆಕೆಆರ್‌ಗೆ ಮರಳಿ ಬರುವುದಿಲ್ಲವೇ ಎಂದು ಹಲವರು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರ ಇಲ್ಲಿದೆ.

36
ಐಪಿಎಲ್ ಹರಾಜು ನಿಯಮವೇನು?

ಐಪಿಎಲ್ ಹರಾಜಿನ ನಿಯಮದ ಪ್ರಕಾರ ಒಮ್ಮೆ ಆಟಗಾರನ ಖರೀದಿಸಿದರೆ ಫ್ರಾಂಚೈಸಿಗಳ ಪರ್ಸ್ ಲಾಕ್ ಆಗಲಿದೆ. ಬಳಿಕ ಮೊತ್ತವನ್ನು ಆಟಗಾರರಿಗೆ ಪಾವತಿಸಬೇಕು. ಇನ್ನು ಇಂಜುರಿ ಕಾರಣದಿಂದ, ವೈಯುಕ್ತಿಕ ಕಾರಣದಿಂದ ಸೇರಿದಂತೆ ಹಲವು ಕಾರಣಕ್ಕೆ ಖರೀದಿಯ ಒಟ್ಟು ಮೊತ್ತದಲ್ಲಿ ಇಂತಿಷ್ಟು ಮೊತ್ತ ಪಾವತಿಸಬೇಕು ಎಂದಿದೆ.

46
ಬಿಸಿಸಿಐ ಮಧ್ಯಪ್ರವೇಶದಿಂದ ನಿಯಮ ಅನ್ವಯವಾಗುತ್ತಾ?

ಆದರೆ ಈ ಪ್ರಕರಣದಲ್ಲಿ ಬಾಂಗ್ಲಾದೇಶ ಕ್ರಿಕೆಟಿಗರನ್ನು ಐಪಿಎಲ್‌ನಿಂದ ದೂರವಿಡಬೇಕು ಎಂಬು ಬಿಸಿಸಿಐ ಮೊದಲೇ ಹೇಳಿರಲಿಲ್ಲ. ಖರೀದಿ ಬಳಿಕ ಬಿಸಿಸಿಐ ಮಧ್ಯಪ್ರವೇಶಿಸಿ ಸೂಚನೆ ನೀಡಿತ್ತು. ಇದರಂತೆ ಕೆಕೆಆರ್ ಆಟಗಾರನ ಕೈಬಿಟ್ಟಿತ್ತು. ಹೀಗಾಗಿ ಈ ಮೊತ್ತ ಕೆಕೆಆರ್‌ಗೆ ಮರಳಲಿದೆ. ಮುಸ್ತಾಫಿಝುರ್ ರಹಮಾನ್ ಬದಲು ಬೇರೆ ಆಟಗಾರರನ್ನು ಖರೀದಿಸುವ ಅವಕಾಶ ಕೆಕೆಆರ್ ತಂಡಕ್ಕಿದೆ.

56
ಮುಸ್ತಾಫಿಝುರ್‌ಗೆ ಬದಲಿ ಸಮಸ್ಯೆ

ಮುಸ್ತಾಫಿಝುರ್ ರಹಮಾನ್‌ಗೆ ಬದಲಿಯಾಗಿ ಮತ್ತೊಬ್ಬ ವೇಗಿಯನ್ನು ಕೆಕೆಆರ್ ಆಯ್ಕೆ ಮಾಡಬೇಕಿದೆ. ಆದರೆ ಇದೇ 9.2 ಕೋಟಿ ರೂಪಾಯಿ ಮೊತ್ತಕ್ಕೆ ಮತ್ತೊಬ್ಬ ವೇಗಿ ಹುಡುಕುವುದು ಕಷ್ಟ. ಉತ್ತಮ ವೇಗಿಗಳನ್ನು ಖರೀದಿಸಲು ದುಬಾರಿ ಮೊತ್ತ ಖರ್ಚು ಮಾಡಬೇಕಿದೆ. ಆದರೆ ಕೆಕೆಆರ್ ಬಳಿ ಇದೀಗ ಉಳಿದುಕೊಂಡಿರುವುದು ಈ 9.2 ಕೋಟಿ ರೂಪಾಯಿ ಮಾತ್ರ.

ಮುಸ್ತಾಫಿಝುರ್‌ಗೆ ಬದಲಿ ಸಮಸ್ಯೆ

66
ಬಾಂಗ್ಲಾದೇಶ ಬೆಳವಣಿಗೆಯಿಂದ ಮಹತ್ವದ ನಿರ್ಧಾರ

ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರ, ಹಿಂದೂಗಳ ಮೇಲಿನ ದಾಳಿಯಿಂದ ಭಾರತೀಯರು ಕೆರಳಿದ್ದಾರೆ. ಇದರ ನಡುವೆ ಕೆಕೆಆರ್ ಖರೀದಿ ಭಾರತೀಯರನ್ನು ಮತ್ತಷ್ಟು ಕೆರಳಿಸಿತ್ತು. ಕೆಕೆಆರ್ ವಿರುದ್ದ ಆಕ್ರೋಶ ಹೊರಹಾಕಿದ್ದರು. ಹೀಗಾಗಿ ಬಿಸಿಸಿಐ ಮಧ್ಯಪ್ರವೇಶಿಸಿತ್ತು.

ಬಾಂಗ್ಲಾದೇಶ ಬೆಳವಣಿಗೆಯಿಂದ ಮಹತ್ವದ ನಿರ್ಧಾರ

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories