ಚಾಂಪಿಯನ್‌ ಆರ್‌ಸಿಬಿ ತಂಡವನ್ನು ಸೇಲ್‌ ಮಾಡಿದ್ದೇಕೆ ಡಿಯಾಜಿಯೋ? ಇದಕ್ಕೆ ಕೊಹ್ಲಿ ಕಾರಣ?

Published : Mar 26, 2026, 01:10 PM IST

ಬೆಂಗಳೂರು: ಐಪಿಎಲ್ ಟೂರ್ನಿಯಯ ಅತ್ಯಂತ ಜನಪ್ರಿಯ ಹಾಗೂ ಅತ್ಯಂತ ನಂಬಿಗಸ್ಥ ಅಭಿಮಾನಿಗಳನ್ನು ಹೊಂದಿದ್ದ ತಂಡ ಎನ್ನುವ ಖ್ಯಾತಿ ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಫ್ರಾಂಚೈಸಿ ಮಾರಾಟ ಮಾಡಿದ್ದೇಕೆ ಎನ್ನುವುದೇಕೆ ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ 

PREV
16
ದುಬಾರಿ ಮೊತ್ತಕ್ಕೆ ಆರ್‌ಸಿಬಿ ಸೇಲ್

ಕಳೆದ ವರ್ಷ ಐಪಿಎಲ್‌ ಚಾಂಪಿಯನ್‌ ಆಗಿದ್ದ ಆರ್‌ಸಿಬಿ ತಂಡವನ್ನು ಈ ಬಾರಿ ಐಪಿಎಲ್‌ಗೂ ಮುನ್ನ ಬ್ರಿಟನ್‌ನ ಮದ್ಯ ಮಾರಾಟ ಕಂಪೆನಿ ಡಿಯಾಜಿಯೋದ ಅಂಗಸಂಸ್ಥೆಯಾದ ಯುನೈಟೆಡ್‌ ಸ್ಪಿರಿಟ್ಸ್‌ ಲಿಮಿಟೆಡ್‌ (ಯುಎಸ್‌ಎಲ್‌) ಮಾರಾಟ ಮಾಡಿದೆ.

26
ಚಾಂಪಿಯನ್ ತಂಡವನ್ನು ಮಾರಿದ್ದೇಕೆ?

ಆದಿತ್ಯ ಬಿರ್ಲಾ ಸಮೂಹ, ಟೈಮ್ಸ್‌ ಆಫ್‌ ಇಂಡಿಯಾ, ಬೋಲ್ಟ್‌ ವೆಂಚರ್ಸ್‌, ಬ್ಲ್ಯಾಕ್‌ಸ್ಟೋನ್‌ ಸಂಸ್ಥೆಗಳು ಒಟ್ಟಾಗಿ ₹16706 ಕೋಟಿಗೆ ಆರ್‌ಸಿಬಿಯನ್ನು ಖರೀದಿಸಿವೆ. ಆದರೆ ಚಾಂಪಿಯನ್‌ ತಂಡಗಳನ್ನು ಮಾರಾಟ ಮಾಡಿದ್ದು ಏಕೆ ಎಂಬ ಪ್ರಶ್ನೆ ಈಗ ಹಲವರಲ್ಲಿದೆ.

36
ಮೊದಲ ಕಾರಣ

ಆರ್‌ಸಿಬಿ ಮಾರಾಟದ ಹಿಂದೆ ಪ್ರಮುಖ 3 ಕಾರಣಗಳಿವೆ. ಒಂದು, ಮಧ್ಯ ಮಾರಾಟ ಸಂಸ್ಥೆಯಾಗಿರುವ ಯುಎಸ್‌ಎಲ್‌ಗೆ ಕ್ರಿಕೆಟ್‌ ತಂಡವಾಗಿರುವ ಆರ್‌ಸಿಬಿ ಎಂಬುದು ಪ್ರಮುಖ ಉದ್ಯಮವೇನಲ್ಲ. ಅಲ್ಲದೆ, ಜಾಗತಿಕ ಮಟ್ಟದಲ್ಲಿ ಕುಸಿಯುತ್ತಿರುವ ತನ್ನ ಮಧ್ಯ ಮಾರಾಟದತ್ತ ಹೆಚ್ಚಿನ ಗಮನ ಹರಿಸುವ ನಿಟ್ಟಿನಲ್ಲಿ ಆರ್‌ಸಿಬಿಯನ್ನು ಮಾರಾಟ ಮಾಡಿದೆ ಎಂದು ಹೇಳಲಾಗುತ್ತಿದೆ.

46
ಎರಡನೇಯ ಕಾರಣ

ವಿರಾಟ್‌ ಕೊಹ್ಲಿ ಇನ್ನು ಕೆಲ ವರ್ಷಗಳಷ್ಟೇ ಆರ್‌ಸಿಬಿ ಪರ ಆಡಲಿದ್ದಾರೆ. ಅವರಿದ್ದಾಗಲೇ ತಂಡ ಮಾರಾಟ ಮಾಡಿದರೆ ಲಾಭ ಹೆಚ್ಚು ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದೆ.

56
3ನೇಯ ಕಾರಣ

ಪುರುಷರ ತಂಡ 18 ವರ್ಷಗಳಲ್ಲಿ ಮೊದಲ ಬಾರಿ ಚಾಂಪಿಯನ್‌ ಆಗಿದೆ. ಮಹಿಳಾ ತಂಡ ಕೂಡಾ ಈಗ ಹಾಲಿ ಚಾಂಪಿಯನ್‌. ಈ ಬಾರಿ ತಂಡಕ್ಕಿರುವ ಮೌಲ್ಯ ಮುಂದಿನ ಬಾರಿ ಇರುವ ಗ್ಯಾರಂಟಿಯಿಲ್ಲ. ಅದಕ್ಕಾಗಿ ಈ ಆವೃತ್ತಿಗೂ ಮುನ್ನವೇ ತಂಡಗಳನ್ನು ಮಾರಿದೆ. ಇದೇ ವೇಳೆ, ಕಾಲ್ತುಳಿತದಿಂದಾಗಿ ಅಂಟಿಕೊಂಡಿರುವ ಕಪ್ಪು ಚುಕ್ಕೆ ಕೂಡಾ ತಂಡಗಳ ಮಾರಾಟದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎನ್ನಲಾಗುತ್ತಿದೆ.

66
ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ-ಸನ್‌ರೈಸರ್ಸ್ ಫೈಟ್

ಇದೀಗ ಆರ್‌ಸಿಬಿ ತಂಡವು 19ನೇ ಸೀಸನ್ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಈ ಹೈವೋಲ್ಟೇಜ್ ಮ್ಯಾಚ್ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories