IPL Code of Conduct: ಆಟಗಾರರಿಗೆ ಬಿಸಿಸಿಐನಿಂದ ಹೊಸ ರೂಲ್ಸ್! ಡ್ರೆಸ್ ಕೋಡ್, ಟ್ರೈನಿಂಗ್‌ಗೂ ಬಂತು ಕಠಿಣ ನಿಯಮ

Published : Mar 26, 2026, 11:59 AM IST

ಐಪಿಎಲ್ ಸೀಸನ್‌ ಆರಂಭಕ್ಕೂ ಮುನ್ನ, ಬಿಸಿಸಿಐ ಆಟಗಾರರಿಗಾಗಿ ಹೊಸ ನೀತಿ ಸಂಹಿತೆಯನ್ನು ಜಾರಿಗೆ ತಂದಿದೆ. ತರಬೇತಿ, ಪೋಸ್ಟ್-ಮ್ಯಾಚ್ ಪ್ರೆಸೆಂಟೇಷನ್ ಡ್ರೆಸ್ ಕೋಡ್ ಮತ್ತು ಕುಟುಂಬ ಸದಸ್ಯರ ಪ್ರವೇಶದ ಮೇಲೆ ಹಲವು ನಿರ್ಬಂಧಗಳನ್ನು ಹೇರಲಾಗಿದೆ.

PREV
17
ಕಠಿಣ ನಿಯಂತ್ರಣ

ಐಪಿಎಲ್ ಸೀಸನ್‌ಗೂ ಮುನ್ನ, ಬಿಸಿಸಿಐ ತಂಡಗಳು ಮತ್ತು ಆಟಗಾರರಿಗೆ ಕಠಿಣ ನೀತಿ ಸಂಹಿತೆ ಜಾರಿಗೊಳಿಸಿದೆ. ಮೈದಾನದಲ್ಲಿ ಶಿಸ್ತು ಮತ್ತು ವೃತ್ತಿಪರತೆಯನ್ನು ಹೆಚ್ಚಿಸಲು ತರಬೇತಿ ಮತ್ತು ಡ್ರೆಸ್ ಕೋಡ್‌ಗೆ ಹೊಸ ಮಾರ್ಗಸೂಚಿಗಳನ್ನು ನೀಡಿದೆ.ಬಿಸಿಸಿಐ ಮುಖ್ಯವಾಗಿ ಪೋಸ್ಟ್-ಮ್ಯಾಚ್ ಪ್ರೆಸೆಂಟೇಷನ್ ಸಮಯದ ಡ್ರೆಸ್ ಕೋಡ್ ಮತ್ತು ತರಬೇತಿಯ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಿದೆ.

27
ಪಂದ್ಯದ ದಿನ ತರಬೇತಿ ಇಲ್ಲ

ಐಪಿಎಲ್ ಪಂದ್ಯಗಳು ನಡೆಯುವ ದಿನಗಳಲ್ಲಿ ತಂಡಗಳು ಮೈದಾನದಲ್ಲಿ ತರಬೇತಿ ನಡೆಸಲು ಅನುಮತಿ ಇಲ್ಲ. ಪಿಚ್ ರಕ್ಷಿಸಲು ಮತ್ತು ಆಟಗಾರರಿಗೆ ಸಾಕಷ್ಟು ವಿಶ್ರಾಂತಿ ಖಚಿತಪಡಿಸಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

37
ಫ್ಲಾಪಿ ಮತ್ತು ಸ್ಲೀವ್‌ಲೆಸ್ ಜರ್ಸಿಗಳಿಗೆ ನಿಷೇಧ

ಪಂದ್ಯದ ನಂತರದ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಆಟಗಾರರು ಸ್ಲಿಪ್ಪರ್, ಚಪ್ಪಲಿ ಅಥವಾ ಸ್ಲೀವ್‌ಲೆಸ್ ಜರ್ಸಿಗಳನ್ನು ಧರಿಸುವಂತಿಲ್ಲ. ತಂಡದ ಅಧಿಕೃತ ಜರ್ಸಿ ಮತ್ತು ಶೂಗಳನ್ನು ಧರಿಸಿಯೇ ಭಾಗವಹಿಸಬೇಕು.

47
ಮೊದಲು ಎಚ್ಚರಿಕೆ, ಆಮೇಲೆ ದಂಡ!

ಪೋಸ್ಟ್-ಮ್ಯಾಚ್ ಪ್ರೆಸೆಂಟೇಷನ್‌ನಲ್ಲಿ ಡ್ರೆಸ್ ಕೋಡ್ ನಿಯಮ ಉಲ್ಲಂಘಿಸಿದರೆ, ಮೊದಲ ಬಾರಿಗೆ ಆಟಗಾರನಿಗೆ ಎಚ್ಚರಿಕೆ ನೀಡಲಾಗುತ್ತದೆ. ಎರಡನೇ ಬಾರಿಯೂ ಅದೇ ತಪ್ಪು ಪುನರಾವರ್ತನೆಯಾದರೆ, ಆಟಗಾರನಿಗೆ ದೊಡ್ಡ ಮೊತ್ತದ ದಂಡವನ್ನು ವಿಧಿಸಲಾಗುತ್ತದೆ.

57
ತರಬೇತಿ ವೇಳೆ ಕುಟುಂಬಕ್ಕೆ 'ನೋ ಎಂಟ್ರಿ'

ತರಬೇತಿ ಸಮಯದಲ್ಲಿ ಆಟಗಾರರ ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಗೆ ಡ್ರೆಸ್ಸಿಂಗ್ ರೂಮ್ ಅಥವಾ ಮೈದಾನಕ್ಕೆ ಪ್ರವೇಶವಿರುವುದಿಲ್ಲ. ಅವರು ನಿಗದಿತ ಹಾಸ್ಪಿಟಾಲಿಟಿ ಏರಿಯಾದಲ್ಲಿ ಕುಳಿತು ಮಾತ್ರ ತರಬೇತಿ ವೀಕ್ಷಿಸಬಹುದು.

67
ಆಟಗಾರರೆಲ್ಲರೂ ಟೀಮ್ ಬಸ್‌ನಲ್ಲಿ ಮಾತ್ರ

ಆಟಗಾರರು ತರಬೇತಿಗಾಗಿ ಸ್ಟೇಡಿಯಂಗೆ ಬರಲು ಮತ್ತು ಹಿಂತಿರುಗಲು ತಂಡದ ಬಸ್ ಅನ್ನು ಮಾತ್ರ ಬಳಸಬೇಕು. ಬೇರೆ ವಾಹನಗಳಿಗೆ ಅನುಮತಿ ಇಲ್ಲ.

77
ಆರೆಂಜ್ ಕ್ಯಾಪ್-ಪರ್ಪಲ್ ಕ್ಯಾಪ್

ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ವಿಜೇತರು, ಪಂದ್ಯದ ಮೊದಲ ಎರಡು ಓವರ್‌ಗಳಲ್ಲಾದರೂ ಕ್ಯಾಪ್ ಧರಿಸಬೇಕು. ಇದು ಬ್ರಾಡ್‌ಕಾಸ್ಟ್ ಕ್ಯಾಮೆರಾಗಳಲ್ಲಿ ಕಾಣುವಂತೆ ಇರಬೇಕು ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories