ಬೆಂಗಳೂರು: 19ನೇ ಆವೃತ್ತಿಯ ಐಪಿಎಲ್ ಮಿನಿ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. ಪ್ರತಿ ಹರಾಜಿಗೂ ಮುನ್ನ ಡೆಲ್ಲಿ ಮೂಲದ ಕೊಹ್ಲಿ ಆರ್‌ಸಿಬಿ ಪಾಲಾಗಿದ್ದು ಹೇಗೆ ಎನ್ನುವುದು ಚರ್ಚೆಯಾಗುತ್ತಲೇ ಇರುತ್ತದೆ. ಇದಕ್ಕೆ ಸೆಹ್ವಾಗ್ ಉತ್ತರಿಸಿದ್ದಾರೆ.
ಐಪಿಎಲ್ ಇತಿಹಾಸದಲ್ಲೇ ಅತಿಹೆಚ್ಚು ರನ್ ಬಾರಿಸಿದ ಬ್ಯಾಟರ್ ಎಂದರೇ ಅದು ಆರ್‌ಸಿಬಿ ತಂಡದ ರನ್ ಮಷೀನ್ ವಿರಾಟ್ ಕೊಹ್ಲಿ. ಡೆಲ್ಲಿ ಮೂಲದ ವಿರಾಟ್ ಕೊಹ್ಲಿ, ಆರ್‌ಸಿಬಿ ತಂಡಕ್ಕೆ ಬಂದಿದ್ದೇ ಒಂದು ಇಂಟ್ರೆಸ್ಟಿಂಗ್ ಸಂಗತಿ.
29
18 ಸೀಸನ್‌ನಲ್ಲೂ ಒಂದೇ ತಂಡದ ಪರ ಆಡಿರುವ ಕೊಹ್ಲಿ
ಸತತ 18 ಸೀಸನ್‌ನಿಂದಲೂ ಒಂದೇ ತಂಡದ ಪರ ಐಪಿಎಲ್ ಆಡಿದ ಏಕೈಕ ಕ್ರಿಕೆಟಿಗನೆಂದರೆ ಅದು ವಿರಾಟ್ ಕೊಹ್ಲಿ. ವಿರಾಟ್ ಕೊಹ್ಲಿ ಈಗ ಬಹುಬೇಡಿಕೆಯ ಹಾಗೂ ದಿಗ್ಗಜ ಆಟಗಾರನಾಗಿ ಬೆಳೆದು ನಿಂತಿದ್ದಾರೆ.
39
ಆರ್‌ಸಿಬಿ ತಂಡದ ಬ್ಯಾಟಿಂಗ್ ಬೆನ್ನೆಲುಬು ಕೊಹ್ಲಿ
ವಿರಾಟ್ ಕೊಹ್ಲಿ ಆರ್‌ಸಿಬಿ ಪರವಾಗಿ ಹಲವು ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಇದಷ್ಟೇ ಅಲ್ಲದೇ ಹಲವು ಪಂದ್ಯಗಳಲ್ಲಿ ಏಕಾಂಗಿಯಾಗಿ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ. ಇನ್ನು ಕಳೆದ ಆವೃತ್ತಿಯಲ್ಲಿ ಕೊಹ್ಲಿ ಐಪಿಎಲ್ ಟ್ರೋಫಿ ಬರ ನೀಗಿಸಿಕೊಳ್ಳುವಲ್ಲಿಯೂ ಯಶಸ್ವಿಯಾಗಿದ್ದಾರೆ.
2008ರಲ್ಲಿ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡವು ಅಂಡರ್-19 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಹೀಗಿದ್ದೂ ಡೆಲ್ಲಿ ತಂಡವು ಕೊಹ್ಲಿ ಬಿಟ್ಟು ಎಡಗೈ ವೇಗಿ ಪ್ರದೀಪ್ ಸಾಂಗ್ವಾನ್ ಅವರನ್ನು ಖರೀದಿಸಿತ್ತು.
59
ಡೆಲ್ಲಿ ಡೇರ್‌ಡೆವಿಲ್ಸ್ ಮಾಡಿದ ದೊಡ್ಡ ಯಡವಟ್ಟು
ಇದು ಐಪಿಎಲ್ ಇತಿಹಾಸದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮಾಡಿದ ಅತಿದೊಡ್ಡ ಯಡವಟ್ಟು ಎಂದು ತಿಳಿಯಲು ಹೆಚ್ಚು ಸಮಯ ಹಿಡಿಯಲಿಲ್ಲ. ಇಂದು ಕೊಹ್ಲಿ ದಿಗ್ಗಜ ಆಟಗಾರನಾಗಿ ಬೆಳೆದು ನಿಂತಿದ್ದಾರೆ. ಆದರೆ ಸಾಂಗ್ವಾನ್ ಹೆಸರು ಬಹುತೇಕ ಮಂದಿಗೆ ನೆನಪಿಲ್ಲ.
69
ಡೆಲ್ಲಿ ಮೂಲದ ಕೊಹ್ಲಿ ಈಗ ಬೆಂಗಳೂರು ದತ್ತುಪುತ್ರ
ಇನ್ನು ಡೆಲ್ಲಿ ಮೂಲದ ಕ್ರಿಕೆಟಿಗ ತನ್ನ ತವರು ರಾಜ್ಯ ಬಿಟ್ಟು ಬೆಂಗಳೂರು ಮೂಲದ ಆರ್‌ಸಿಬಿ ತಂಡ ಕೂಡಿಕೊಂಡಿದ್ದೇ ನಿಜಕ್ಕೂ ಇಂಟ್ರೆಸ್ಟಿಂಗ್ ಸಂಗತಿ. ಕೊಹ್ಲಿಯನ್ನು ಯಾಕಾಗಿ ಡೆಲ್ಲಿ ತಂಡ ಖರೀದಿಸಲಿಲ್ಲ ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆಗೆ ಆಗಿನ ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ನಾಯಕರಾಗಿ ವಿರೇಂದ್ರ ಸೆಹ್ವಾಗ್ ಉತ್ತರಿಸಿದ್ದಾರೆ.
79
ಡೆಲ್ಲಿ ತಂಡದಲ್ಲಿ ಆಗ ಸಾಕಷ್ಟು ಬ್ಯಾಟರ್‌ಗಳಿದ್ದರು
ಈ ಕುರಿತಂತೆ ಮಾತನಾಡಿರುವ ಸೆಹ್ವಾಗ್, ನಮ್ಮ ತಂಡದಲ್ಲಿ ಆಗ ನಾನು, ಗೌತಮ್ ಗಂಭೀರ್, ಶಿಖರ್ ಧವನ್, ತಿಲಕರತ್ನೆ ದಿಲ್ಷ್ಯಾನ್ ಅವರಂತಹ ಆರಂಭಿಕರಿದ್ದರು. ಇನ್ನು ಅಗ್ರಕ್ರಮಾಂಕದಲ್ಲಿ ಎಬಿ ಡಿವಿಲಿಯರ್ಸ್ ಕೂಡಾ ಇದ್ದರು.
89
ಕೊಹ್ಲಿ ಕೈಬಿಡಲು ಇದೇ ಕಾರಣ
ಹೀಗಾಗಿ ನಮ್ಮ ತಂಡದಲ್ಲಿ ಆಗ ಸಾಕಷ್ಟು ಒಳ್ಳೆಯ ಬ್ಯಾಟರ್‌ಗಳು ಇದ್ದರು. ಆದರೆ ನಮಗೆ ಒಳ್ಳೆಯ ಬೌಲರ್ ಅಗತ್ಯವಿತ್ತು. ಹೀಗಾಗಿ ಅದೊಂದೇ ಕಾರಣಕ್ಕೆ ಕೊಹ್ಲಿ ಬಿಟ್ಟು ಎಡಗೈ ವೇಗಿ ಪ್ರದೀಪ್ ಸಾಂಗ್ವಾನ್ ಖರೀದಿಸಿದೆವು ಎಂದು ಸೆಹ್ವಾಗ್ ಹೇಳಿದ್ದಾರೆ.
99
ಆರ್‌ಸಿಬಿ ಮೇಲೆ ಕೊಹ್ಲಿಗಿದೆ ಬೆಟ್ಟದಷ್ಟು ಅಭಿಮಾನ
ಆರ್‌ಸಿಬಿ ಹಾಗೂ ಬೆಂಗಳೂರಿನ ಬಗ್ಗೆ ಸಮಯ ಸಿಕ್ಕಾಗಲೆಲ್ಲಾ ಕೊಹ್ಲಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಲೇ ಬಂದಿದ್ದು, ಈ ತಂಡದ ಪರವೇ ಕೊನೆಯವರೆಗೂ ಐಪಿಎಲ್ ಆಡುವುದಾಗಿ ಕೊಹ್ಲಿ ಘೋಷಿಸಿದ್ದಾರೆ.