ದಕ್ಷಿಣ ಆಫ್ರಿಕಾ ಏಕದಿನ ಸರಣಿಯಿಂದ ಗಿಲ್ ಔಟ್; ಮತ್ತೆ ಕ್ಯಾಪ್ಟನ್ ಆಗ್ತಾರಾ ರೋಹಿತ್ ಶರ್ಮಾ?

Published : Nov 19, 2025, 09:50 AM IST

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಮತ್ತು ಟಿ20 ತಂಡಗಳ ಆಯ್ಕೆ ಬಗ್ಗೆ ಕುತೂಹಲ ಹೆಚ್ಚಾಗಿದೆ. ಶುಭ್‌ಮನ್ ಗಿಲ್ ಇಲ್ಲದಿದ್ದರೆ, ಕೆ ಎಲ್ ರಾಹುಲ್ ಅಥವಾ ಪಂತ್ ಪೈಕಿ ಯಾರು ನಾಯಕತ್ವ ವಹಿಸುತ್ತಾರೆ ಎಂಬ ಪ್ರಶ್ನೆ ಎದ್ದಿದೆ. ಇದೇ ವೇಳೆ ರೋಹಿತ್ ಶರ್ಮಾ ವಾಪಸಾತಿ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

PREV
15
ಭಾರತ, ದಕ್ಷಿಣ ಆಫ್ರಿಕಾ ಏಕದಿನ, ಟಿ20 ಸರಣಿಗೆ ತಂಡ ಆಯ್ಕೆ ಬಗ್ಗೆ ಕುತೂಹಲ

ಭಾರತ vs ದಕ್ಷಿಣ ಆಫ್ರಿಕಾ ಏಕದಿನ, ಟಿ20 ಸರಣಿಗೆ ಬಿಸಿಸಿಐ ಶೀಘ್ರದಲ್ಲೇ ತಂಡ ಪ್ರಕಟಿಸಲಿದೆ. ತಂಡದಲ್ಲಿ ಯಾರೆಲ್ಲಾ ಇರುತ್ತಾರೆ, ಯಾರು ಹೊರಗುಳಿಯುತ್ತಾರೆ ಎಂಬ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವಿದೆ.

25
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮೇಲೆ ಎಲ್ಲರ ಕಣ್ಣು

ಆಸ್ಟ್ರೇಲಿಯಾ ಪ್ರವಾಸದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಏಕದಿನ ಸರಣಿಯ ಪ್ರಮುಖ ಆಕರ್ಷಣೆಯಾಗಲಿದ್ದಾರೆ. ಈ ಸರಣಿಯು 2027ರ ವಿಶ್ವಕಪ್ ಆಯ್ಕೆಗೆ ನಿರ್ಣಯಕವಾಗಲಿದೆ.

35
ಟಿ20ಗೆ ಸೂರ್ಯಕುಮಾರ್ ಯಾದವ್ ನಾಯಕ, ಗಿಲ್ ಔಟ್?

ಟಿ20ಗೆ ಸೂರ್ಯಕುಮಾರ್ ಯಾದವ್ ನಾಯಕರಾಗಿ ಮುಂದುವರಿಯಲಿದ್ದಾರೆ. ಶುಭಮನ್ ಗಿಲ್ ಪ್ರದರ್ಶನದ ಬಗ್ಗೆ ಪ್ರಶ್ನೆಗಳಿದ್ದು, ಅವರಿಗೆ ಮತ್ತೊಂದು ಅವಕಾಶ ಸಿಗುವುದೇ ಎಂಬುದು ಕುತೂಹಕಾರಿಯಾಗಿದೆ.

45
ಶುಭಮನ್ ಗಿಲ್ ಲಭ್ಯವಿಲ್ಲದಿದ್ದರೆ ನಾಯಕತ್ವ ಯಾರಿಗೆ?

ಶುಭಮನ್ ಗಿಲ್ ಗಾಯದಿಂದಾಗಿ ಏಕದಿನ ಸರಣಿಗೆ ಲಭ್ಯವಿಲ್ಲದಿದ್ದರೆ, ಕೆಎಲ್ ರಾಹುಲ್ ಅಥವಾ ರಿಷಭ್ ಪಂತ್ ನಾಯಕತ್ವ ವಹಿಸುವ ಸಾಧ್ಯತೆಯಿದೆ. ರೋಹಿತ್ ಶರ್ಮಾ ಮತ್ತೆ ನಾಯಕರಾಗುವ ಚರ್ಚೆಯೂ ಇದೆ.

55
ತಂಡಕ್ಕೆ ಯಾರು ಬರಲಿದ್ದಾರೆ?

ಯಶಸ್ವಿ ಜೈಸ್ವಾಲ್‌ಗೆ ಹೆಚ್ಚು ಅವಕಾಶ ಸಿಕ್ಕಿಲ್ಲ. ಸಂಜು ಸ್ಯಾಮ್ಸನ್ ಸ್ಥಾನವೂ ಅನಿಶ್ಚಿತವಾಗಿದೆ. ಹಾರ್ದಿಕ್ ಪಾಂಡ್ಯ ಏಕದಿನ ಸರಣಿಯೊಂದಿಗೆ ತಂಡಕ್ಕೆ ಮರಳಲಿದ್ದು, ತಂಡದ ಸಮತೋಲನ ಹೆಚ್ಚಿಸಲಿದ್ದಾರೆ.

Read more Photos on
click me!

Recommended Stories