ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನವೆಂಬರ್ 22 ರಿಂದ ಆರಂಭವಾಗಲಿರುವ ಎರಡನೇ ಟೆಸ್ಟ್‌ಗೆ ಶುಭಮನ್ ಗಿಲ್ ಲಭ್ಯತೆ ಬಗ್ಗೆ ಅನುಮಾನ ಮೂಡಿದೆ. ಮೊದಲ ಟೆಸ್ಟ್‌ನಲ್ಲಿ ಕುತ್ತಿಗೆ ನೋವಿನಿಂದ ಹೊರಗುಳಿದಿದ್ದ ಗಿಲ್, ಗುವಾಹಟಿ ಟೆಸ್ಟ್‌ನಲ್ಲಿ ಆಡುತ್ತಾರೋ ಇಲ್ಲವೋ ಎಂಬ ಕುತೂಹಲ ಹೆಚ್ಚಾಗಿದೆ.
ಭಾರತ-ದಕ್ಷಿಣ ಆಫ್ರಿಕಾ ನಡುವಿನ 2ನೇ ಟೆಸ್ಟ್ ನ. 22ರಿಂದ ಗುವಾಹಟಿಯ ಬರ್ಸಾಪರಾ ಸ್ಟೇಡಿಯಂನಲ್ಲಿ ಶುರುವಾಗಲಿದೆ. ಮೊದಲ ಪಂದ್ಯ ಸೋತ ಟೀಂ ಇಂಡಿಯಾಗೆ ಈ ಟೆಸ್ಟ್ ಬಹಳ ಮುಖ್ಯ. ಆದರೆ, ನಾಯಕ ಗಿಲ್ ಲಭ್ಯತೆ ಬಗ್ಗೆ ಇರುವ ಗೊಂದಲ ತಂಡವನ್ನು ಕಾಡುತ್ತಿದೆ.
25
ಕುತ್ತಿಗೆ ನೋವಿನಿಂದ ಬಳಲುತ್ತಿರುವ ಗಿಲ್
ಮೊದಲ ಟೆಸ್ಟ್‌ನಲ್ಲಿ ಕುತ್ತಿಗೆ ನೋವಿನಿಂದಾಗಿ ಶುಭಮನ್ ಗಿಲ್ ಪಂದ್ಯದ ಮಧ್ಯದಲ್ಲೇ ಮೈದಾನ ತೊರೆದಿದ್ದರು. ಹೀಗಾಗಿ ಎರಡನೇ ಟೆಸ್ಟ್ ಆಡುತ್ತಾರಾ ಎಂಬ ಪ್ರಶ್ನೆ ಎದ್ದಿದೆ. ಗಿಲ್ ಗುವಾಹಟಿಗೆ ಪ್ರಯಾಣ ಬೆಳೆಸಿದ್ದಾರೆ, ಆದರೆ ಪಂದ್ಯದಲ್ಲಿ ಭಾಗವಹಿಸುವುದು ಇನ್ನೂ ಖಚಿತವಾಗಿಲ್ಲ.
35
ಋತುರಾಜ್ ಗಾಯಕ್ವಾಡ್‌ಗೆ ಚಾನ್ಸ್ ನೀಡಲು ಸಲಹೆ
ಒಂದು ವೇಳೆ ಗಿಲ್ 2ನೇ ಟೆಸ್ಟ್‌ಗೆ ಅಲಭ್ಯರಾದರೆ, ಅವರ ಜಾಗಕ್ಕೆ ಬದಲಿ ಆಟಗಾರನ ಆಯ್ಕೆಗೆ ಸೆಲೆಕ್ಟರ್ಸ್ ಕಸರತ್ತು ನಡೆಸುತ್ತಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ ಋತುರಾಜ್ ಗಾಯಕ್ವಾಡ್ ಅವರನ್ನು ತೆಗೆದುಕೊಳ್ಳುವಂತೆ ಮಾಜಿ ಆಟಗಾರರು ಸಲಹೆ ನೀಡುತ್ತಿದ್ದಾರೆ.
ಆದರೆ ಬಿಸಿಸಿಐ ಗಾಯಕ್ವಾಡ್ ಅವರನ್ನು ಪರಿಗಣಿಸುತ್ತಿಲ್ಲ. ಗಿಲ್ ಬದಲಿಗೆ ಸಾಯಿ ಸುದರ್ಶನ್ ಅಥವಾ ಕನ್ನಡಿಗ ದೇವದತ್ ಪಡಿಕ್ಕಲ್ ಅವರನ್ನು ಆಡಿಸಲು ಚಿಂತನೆ ನಡೆದಿದೆ. ಇವರಿಬ್ಬರಲ್ಲಿ ಒಬ್ಬರು ಆಡಿದರೆ, ತಂಡದಲ್ಲಿ ಎಡಗೈ ಬ್ಯಾಟರ್‌ಗಳ ಸಂಖ್ಯೆ ಏಳಕ್ಕೇರಲಿದ್ದು, ಇದು ತಂಡಕ್ಕೆ ಸಮಸ್ಯೆಯಾಗಬಹುದು.
55
ಭಾರತದ ಪಾಲಿಗೆ ಮಹತ್ವದ ಟೆಸ್ಟ್
ಮೊದಲ ಟೆಸ್ಟ್ ಸೋಲಿನ ನಂತರ, ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ಪ್ರಮುಖ ಬದಲಾವಣೆಗಳಾಗುವ ಸಾಧ್ಯತೆ ಇದೆ. ಡಬ್ಲ್ಯುಟಿಸಿ ಪಾಯಿಂಟ್‌ಗಳು ಮುಖ್ಯವಾಗಿರುವುದರಿಂದ, ಈ ಪಂದ್ಯವನ್ನು ಭಾರತ ಯಾವುದೇ ಬೆಲೆ ತೆತ್ತಾದರೂ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ.