ಸೂರ್ಯಕುಮಾರ್ ಯಾದವ್ ಹೊರಬಿದ್ರೆ ಭಾರತದ ಮುಂದಿನ ಟಿ20 ನಾಯಕ ಯಾರು? ಇಲ್ಲಿವೆ 5 ಬೆಸ್ಟ್ ಆಯ್ಕೆಗಳು

Published : Apr 15, 2026, 01:39 PM IST

ಬೆಂಗಳೂರು: ಭಾರತಕ್ಕೆ ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ಸೂರ್ಯಕುಮಾರ್ ಯಾದವ್ ಸದ್ಯ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದಾರೆ. ವಯಸ್ಸು ಹಾಗೂ ಫಾರ್ಮ್ ಗಮನದಲ್ಲಿಟ್ಟುಕೊಂಡು ಬಿಸಿಸಿಐ, ಟಿ20 ಕ್ರಿಕೆಟ್‌ಗೆ ಹೊಸ ನಾಯಕನ ಹುಡುಕಾಟದಲ್ಲಿದೆ. ಸೂರ್ಯ ಬದಲಿಗೆ ಯಾರಾಗಬಹುದು ಭಾರತದ ಟಿ20 ಕ್ಯಾಪ್ಟನ್? 

PREV
16
ಸೂರ್ಯಕುಮಾರ್ ಯಾದವ್ ಸ್ಥಾನಕ್ಕೆ ಮತ್ತೆ ಯಾರು?

2026ರ ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ಕಪ್ ಗೆದ್ದುಕೊಟ್ಟ ನಾಯಕ ಸೂರ್ಯಕುಮಾರ್ ಯಾದವ್ ಫಾರ್ಮ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಭಾರತ ಸದ್ಯ 2028ರ ಟಿ20 ವಿಶ್ವಕಪ್‌ಗೆ ಈಗಿನಿಂದಲೇ ತಯಾರಿ ಅರಂಭಿಸಿದ್ದು, ಸೂರ್ಯ ವಿಚಾರದಲ್ಲಿ ಕಠಿಣ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದೆ. ಹೀಗಾದಲ್ಲಿ ಸೂರ್ಯ ಸ್ಥಾನ ತುಂಬಬಲ್ಲ ಭಾರತದ ಭವಿಷ್ಯದ ಟಿ20 ಕ್ಯಾಪ್ಟನ್ ಆಯ್ಕೆ ರೇಸ್‌ನಲ್ಲಿರುವ ಐದು ಆಟಗಾರರ ಬಗ್ಗೆ ನಾವಿಂದು ತಿಳಿಯೋಣ ಬನ್ನಿ.

26
1. ಶ್ರೇಯಸ್ ಅಯ್ಯರ್:

2023ರಲ್ಲಿ ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದರೂ ಶ್ರೇಯಸ್ ಅಯ್ಯರ್ ಐಪಿಎಲ್‌ನಲ್ಲಿ ತಮ್ಮ ಅದ್ಭುತ ನಾಯಕತ್ವದ ಮೂಲಕವೇ ಎಲ್ಲರ ಗಮನ ಸೆಳೆಯುತ್ತಾ ಬಂದಿದ್ದಾರೆ. ಮೂರು ತಂಡಗಳನ್ನು ಐಪಿಎಲ್‌ ಫೈನಲ್‌ಗೇರಿಸಿದ ಏಕೈಕ ನಾಯಕ ಎನ್ನುವ ಹೆಗ್ಗಳಿಕೆ ಶ್ರೇಯಸ್ ಅಯ್ಯರ್ ಹೆಸರಿನಲ್ಲಿದೆ. ಈ ಪೈಕಿ ಒಮ್ಮೆ ನಾಯಕನಾಗಿ ಅಯ್ಯರ್ ಐಪಿಎಲ್ ಟ್ರೋಫಿ ಕೂಡಾ ಜಯಿಸಿದ್ದಾರೆ. ಈ ಬಾರಿ ಐಪಿಎಲ್‌ನಲ್ಲಿ ಮಿಂಚಿ ಶ್ರೇಯಸ್ ಅಯ್ಯರ್ ಭಾರತ ಟಿ20 ತಂಡಕ್ಕೆ ನಾಯಕನಾಗಿ ಎಂಟ್ರಿಕೊಟ್ಟರೂ ಅಚ್ಚರಿಯೇನಿಲ್ಲ

36
2. ಸಂಜು ಸ್ಯಾಮ್ಸನ್:

2026ರ ಟಿ20 ವಿಶ್ವಕಪ್ ಗೆಲುವಿನ ರೂವಾರಿ ಸಂಜು ಸ್ಯಾಮ್ಸನ್, ಐಪಿಎಲ್‌ನಲ್ಲಿ ಈಗಾಗಲೇ ರಾಜಸ್ಥಾನ ರಾಯಲ್ಸ್ ತಂಡವನ್ನು ಕೆಲವು ವರ್ಷಗಳ ಕಾಲ ನಾಯಕನಾಗಿ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಸಂಜು ಸ್ಯಾಮ್ಸನ್ ಈ ಬಾರಿಯ ಐಪಿಎಲ್ ಫಾರ್ಮ್, ಅವರ ಭಾರತ ಟಿ20 ನಾಯಕತ್ವದ ಸ್ಥಾನವನ್ನು ನಿರ್ಧರಿಸುವ ಸಾಧ್ಯತೆಯಿದೆ.

46
3. ಹಾರ್ದಿಕ್ ಪಾಂಡ್ಯ:

ಭಾರತ ತಂಡದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, 2024ರ ಭಾರತ ಟಿ20 ವಿಶ್ವಕಪ್ ಚಾಂಪಿಯನ್ ತಂಡದ ಉಪನಾಯಕರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಸದ್ಯ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿರುವ ಹಾರ್ದಿಕ್ ಪಾಂಡ್ಯ, ಭಾರತ ಟಿ20 ನಾಯಕನ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.

56
4. ಅಕ್ಷರ್ ಪಟೇಲ್:

ಭಾರತದ ಸ್ಟಾರ್ ಆಲ್ರೌಂಡರ್ ಹಾಗೂ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಉಪನಾಯಕರಾಗಿದ್ದ ಅಕ್ಷರ್ ಪಟೇಲ್, ಸದ್ಯ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಆಸರೆಯಾಗುವ ಸಾಮರ್ಥ್ಯ ಇರುವ ಅನುಭವಿ ಆಲ್ರೌಂಡರ್ ಅಕ್ಷರ್‌ಗೆ ಭಾರತ ಟಿ20 ತಂಡದ ನಾಯಕರಾಗುವ ಅದೃಷ್ಟ ಒಲಿದು ಬಂದರೂ ಅಚ್ಚರಿಯೇನಿಲ್ಲ.

66
5. ಶುಭ್‌ಮನ್ ಗಿಲ್:

ಭಾರತ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕರಾಗಿರುವ ಶುಭ್‌ಮನ್ ಗಿಲ್, ಮುಂಬರುವ ದಿನಗಳಲ್ಲಿ ಭಾರತ ಟಿ20 ತಂಡದ ನಾಯಕರಾದರೂ ಅಚ್ಚರಿಯೇನಿಲ್ಲ. ಸದ್ಯ ಗಿಲ್ ಭಾರತ ಟಿ20 ತಂಡದ ಭಾಗವಾಗಿರದಿದ್ದರೂ, ಐಪಿಎಲ್‌ನಲ್ಲಿ ಈ ಬಾರಿ ಅದ್ಭುತ ಪ್ರದರ್ಶನ ತೋರಿದರೆ, ಭಾರತ ಟಿ20 ನಾಯಕ್ವದ ಜವಾಬ್ದಾರಿಯೂ ಗಿಲ್ ಹೆಗಲೇರಬಹುದು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories