ವೈಭವ್ ಸೂರ್ಯವಂಶಿ ಎಂಬ ಬಿರುಗಾಳಿಗೆ ಬ್ರೇಕ್ ಹಾಕಿದ Praful Hinge ಯಾರು?; SRH ಹುಡುಕಿದ ರಿಯಲ್ ಡೈಮಂಡ್ ಹಿನ್ನಲೆ ಏನು?

Published : Apr 14, 2026, 01:45 PM IST

Who is Praful Hinge: ಇತ್ತೀಚೆಗೆ ಮ್ಯಾನಿಫೆಸ್ಟೇಶನ್‌ ಬಗ್ಗೆ ಸಿಕ್ಕಾಪಟ್ಟೆ ಮಾತು ಕೇಳಿ ಬರುತ್ತಿದೆ. ಐಪಿಎಲ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ ಟೀಂನ ವೈಭವ್‌ ಸೂರ್ಯವಂಶಿಯನ್ನು ಮೊದಲ ಬಾಲ್‌ನಲ್ಲೇ ಔಟ್‌ ಮಾಡ್ತೀನಿ ಎಂದು ಹೇಳಿದ್ದ ಪ್ರಫುಲ್‌ ಹಿಂಗೆ ಅವರು ಅದೇ ಥರ ನಡೆದುಕೊಂಡರು.  

PREV
13
ವೈಭವ್‌ ಸೂರ್ಯವಂಶಿ ವಿಕೆಟ್‌ ಪಡೆದ ಪ್ರಫುಲ್

ಐಪಿಎಲ್ ಪಂದ್ಯ ಆರಂಭವಾಗುವ ಮುನ್ನ ಪ್ರಫುಲ್ ಹಿಂಗೆ ಅವರು ತಮ್ಮ ಸಹ ಆಟಗಾರ ಅಥರ್ವ ತೈಡೆ ಅವರ ಮುಂದೆ, "ನಾನು ವೈಭವ್ ಸೂರ್ಯವಂಶಿಗೆ ಹಾಕೋ ಫಸ್ಟ್‌ ಬಾಲ್‌ನಲ್ಲಿ ಔಟ್‌ ಮಾಡ್ತೀನಿ” ಎಂದು ಹೇಳಿದ್ದರು. ಈ ಮಾತನ್ನು ನಿಜ ಮಾಡಿದ್ದಾರೆ. 

ಐಪಿಎಲ್‌ನಲ್ಲಿ ಸಿಕ್ಸರ್‌, ಫೋರ್‌ ಬಾರಿಸಿದ್ದ ಯು ಆಟಗಾರ ವೈಭವ್‌ಗೆ ಇದು ದೊಡ್ಡ ಪಾಠವಾದರೆ, ಪ್ರಫುಲ್ ಅವರಿಗೆ ಇದು ಮರೆಯಲಾಗದ ಕ್ಷಣವಾಗಿದೆ.

23
ಪ್ರಫುಲ್‌ ಹಿಂಗೆ ಎಲ್ಲಿಯವ್ರು?

ಪ್ರಫುಲ್‌ ಹಿಂಗೆ ಅವರು ಮಹಾರಾಷ್ಟ್ರದ ನಾಗಪುರದವರು. ಕಳೆದ ಹನ್ನೊಂದು ವರ್ಷದಿಂದ ಅವರು ಕ್ರಿಕೆಟ್‌ ಆಡುತ್ತಿದ್ದಾರೆ. ಐಪಿಎಲ್‌ನಲ್ಲಿ ಇದು ಅವರ ಮೊದಲ ಆಟವಾಗಿತ್ತು. ಸನ್‌ರೈಸರ್ಸ್‌ ಹೈದರಾಬಾದ್‌ ಟೀಂ ಇವರನ್ನು 30 ಲಕ್ಷ ರೂಪಾಯಿಗೆ ಖರೀದಿ ಮಾಡಿದೆ.

33
ಕುಟುಂಬಸ್ಥರು ಯಾರು?

ಪ್ರಫುಲ್‌ ಅವರ ತಂದೆ-ತಾಯಿಗೆ ಕ್ರಿಕೆಟ್‌ ಜರ್ನಿಗೆ ಬೆಂಬಲ ನೀಡಿದ್ದಾರೆ. ಅಷ್ಟೇ ಅಲ್ಲದೆ ಅಕ್ಕ ಸಿಎ ಮಾಡಿದ್ದು, ಶಾಲೆಯಲ್ಲಿ ರ್ಯಾಂಕ್‌ ಪಡೆದಿದ್ದಾರೆ. ಆದರೆ ಪ್ರಫುಲ್‌ ಮಾತ್ರ ಓದಿನಲ್ಲಿ ಹಿಂದೆ ಆಗಿದ್ದರು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories