ಸಿಎಸ್‌ಕೆ ಪರ ಅಬ್ಬರಿಸಿದ ಉರ್ವಿಲ್ ಪಟೇಲ್ ಕೇವಲ 13 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿ ಅಬ್ಬರಿಸಿದ್ದಾರೆ. ಯುವಿ ದಾಖಲೆ ಜಸ್ಟ್ ಮಿಸ್ ಆಗಿದೆ. ತಂದೆಗೆ ವಿಶೇಷ ಸಂದೇಶ ನೀಡಿ ಸಂಭ್ರಮಿಸಿದ ಈ ಉರ್ವಿಲ್ ಪಟೇಲ್ ಯಾರು?
ಐಪಿಎಲ್ 2026ರ ಭಾನುವಾರದ ಮೊದಲ ಪಂದ್ಯದಲ್ಲಿ ಎಲ್ಲೆಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ಸ್‌ಮನ್ ಉರ್ವಿಲ್ ಪಟೇಲ್ ಅಬ್ಬರಿಸಿದ್ದಾರೆ. ತಮ್ಮ ಸ್ಪೋಟಕ ಬ್ಯಾಟಿಂಗ್‌ನಿಂದ ಉರ್ವಿಲ್ ಎಲ್ಲರ ಗಮನ ಸೆಳೆದಿದ್ದಾರೆ. ಕೇವಲ 13 ಎಸೆತಗಳಲ್ಲಿ 50 ರನ್ ಸಿಡಿಸಿ ಅತೀ ವೇಗದ ಹಾಫ್ ಸೆಂಚುರಿ ಸಿಡಿಸಿದ್ದಾರೆ. ಈ ಮೂಲಕ ಯುವರಾಜ್ ಸಿಂಗ್ ಅವರ 12 ಎಸೆತಗಳ ಫಿಫ್ಟಿ ದಾಖಲೆ ಹಾಗೇ ಉಳಿದುಕೊಂಡಿದೆ.
25
ಲಕ್ನೋ ಬೌಲರ್‌ಗಳ ಮೇಲೆ ಸವಾರಿ
ಉರ್ವಿಲ್ ಪಟೇಲ್ ಲಕ್ನೋ ತಂಡದ ಪ್ರತಿಯೊಬ್ಬ ಬೌಲರ್‌ಗೂ ಬೆವರಿಳಿಸಿದರು. ಮೊದಲು ಆವೇಶ್ ಖಾನ್ ಓವರ್‌ನಲ್ಲಿ ಸಿಕ್ಸರ್‌ಗಳ ಮಳೆ ಸುರಿಸಿದರು. ನಂತರ ಸ್ಪಿನ್ನರ್ ದಿಗೇಶ್ ರಾಠಿ ಅವರನ್ನೂ ಬಿಡದೆ ಮನಬಂದಂತೆ ದಂಡಿಸಿದರು. ಲಕ್ನೋದ ಅನುಭವಿ ಬೌಲರ್ ಮೊಹಮ್ಮದ್ ಶಮಿ ಕೂಡ ಇವರ ಹೊಡೆತದಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಉರ್ವಿಲ್ ಪಟೇಲ್ ಕೇವಲ 23 ಎಸೆತಗಳಲ್ಲಿ 2 ಬೌಂಡರಿ ಮತ್ತು 8 ಭರ್ಜರಿ ಸಿಕ್ಸರ್‌ಗಳೊಂದಿಗೆ 65 ರನ್ ಗಳಿಸಿದರು.
35
ತಂದೆಗೆ ವಿಶೇಷ ಸಂದೇಶ ರವಾನಿಸಿದ ಉರ್ವಿಲ್
27 ವರ್ಷದ ಉರ್ವಿಲ್ ಪಟೇಲ್, ಅರ್ಧಶತಕ ಗಳಿಸಿದ ನಂತರ ತಮ್ಮ ಜೇಬಿನಿಂದ ಒಂದು ಚೀಟಿ ತೆಗೆದು ವಿಶಿಷ್ಟವಾಗಿ ಸಂಭ್ರಮಿಸಿದರು. ಆ ಚೀಟಿಯಲ್ಲಿ ತಮ್ಮ ತಂದೆಗಾಗಿ ಒಂದು ಸಂದೇಶ ಬರೆದು ತಂದಿದ್ದರು. "ಅಪ್ಪ, ಇದು ನಿಮಗಾಗಿ. ನೀವು ಏನಾಗಬೇಕೆಂದು ಬಯಸಿದ್ದಿರೋ, ಅದನ್ನು ನಾನು ಮಾಡಿ ತೋರಿಸಿದ್ದೇನೆ" ಎಂದು ಅದರಲ್ಲಿ ಬರೆಯಲಾಗಿತ್ತು.
ಉರ್ವಿಲ್ ಪಟೇಲ್ ಐಪಿಎಲ್‌ನಲ್ಲಿ 13 ಎಸೆತಗಳಲ್ಲಿ 50 ರನ್ ಗಳಿಸಿ ಯಶಸ್ವಿ ಜೈಸ್ವಾಲ್ ದಾಖಲೆಯನ್ನು ಸರಿಗಟ್ಟಿದರು. ಇದರೊಂದಿಗೆ, ಐಪಿಎಲ್‌ನ ಅತಿ ವೇಗದ ಅರ್ಧಶತಕವನ್ನು ಜಂಟಿಯಾಗಿ ತಮ್ಮದಾಗಿಸಿಕೊಂಡರು. ಕ್ರೀಸ್‌ಗೆ ಬಂದ ಕೂಡಲೇ ಉರ್ವಿಲ್, ಆವೇಶ್ ಖಾನ್ ಅವರ ಮೂರು ಎಸೆತಗಳಲ್ಲಿ ಸತತ ಮೂರು ಸಿಕ್ಸರ್‌ಗಳನ್ನು ಬಾರಿಸಿದರು. ನಂತರವೂ ತಮ್ಮ ಅಬ್ಬರ ನಿಲ್ಲಿಸದೆ, ಸಿಕ್ಸರ್-ಬೌಂಡರಿಗಳ ಸುರಿಮಳೆಗೈದರು. ತಮ್ಮ ಅರ್ಧಶತಕದ ಇನ್ನಿಂಗ್ಸ್‌ನಲ್ಲಿ ಅವರು 7 ಸಿಕ್ಸರ್ ಮತ್ತು 1 ಬೌಂಡರಿ ಬಾರಿಸಿದರು.
55
ಉರ್ವಿಲ್ ಪಟೇಲ್ ಕ್ರಿಕೆಟ್ ಕರಿಯರ್
ಉರ್ವಿಲ್ ಪಟೇಲ್ ಗುಜರಾತ್‌ನಲ್ಲಿ ಜನಿಸಿದರು. ಚಿಕ್ಕಂದಿನಿಂದಲೇ ಅವರಿಗೆ ಕ್ರಿಕೆಟ್‌ನಲ್ಲಿ ಬಹಳ ಆಸಕ್ತಿ ಇತ್ತು. ಹೀಗಾಗಿ, ಚಿಕ್ಕ ವಯಸ್ಸಿನಲ್ಲೇ ವೃತ್ತಿಪರ ಕ್ರಿಕೆಟ್ ತರಬೇತಿ ಆರಂಭಿಸಿದರು. ವಿಕೆಟ್‌ಕೀಪಿಂಗ್ ಮತ್ತು ಆಕ್ರಮಣಕಾರಿ ಬ್ಯಾಟಿಂಗ್ ಅವರ ದೊಡ್ಡ ಶಕ್ತಿಯಾಗಿದೆ. ದೇಶೀಯ ಕ್ರಿಕೆಟ್‌ನಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುವ ಮೂಲಕ ಅವರು ಕ್ರಿಕೆಟ್ ಜಗತ್ತಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು. ದೇಶೀಯ ಟಿ20 ಪಂದ್ಯಗಳಲ್ಲಿ ಹಲವು ವೇಗದ ಇನ್ನಿಂಗ್ಸ್‌ಗಳನ್ನು ಆಡಿ ಉರ್ವಿಲ್ ಪಟೇಲ್ ಎಲ್ಲರ ಗಮನ ಸೆಳೆದಿದ್ದರು. ಪವರ್‌ಪ್ಲೇನಲ್ಲಿ ವೇಗವಾಗಿ ರನ್ ಗಳಿಸುವುದರಲ್ಲಿ ಅವರು ಹೆಸರುವಾಸಿ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ಇತರ ದೇಶೀಯ ಟೂರ್ನಿಗಳಲ್ಲಿನ ಅವರ ಬ್ಯಾಟಿಂಗ್, ಆಯ್ಕೆಗಾರರು ಮತ್ತು ಐಪಿಎಲ್ ಫ್ರಾಂಚೈಸಿಗಳನ್ನು ಆಕರ್ಷಿಸಿತು. ಅವರ ಸ್ಪೋಟಕ ಸ್ಟ್ರೈಕ್ ರೇಟ್ ಅವರನ್ನು ಇತರ ಯುವ ಆಟಗಾರರಿಗಿಂತ ಭಿನ್ನವಾಗಿಸಿದೆ.
ಉರ್ವಿಲ್ ಪಟೇಲ್ ಕ್ರಿಕೆಟ್ ಕರಿಯರ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.