ಬಿಸಿಸಿಐ ವಾರ್ನಿಂಗ್ ಬಳಿಕ ಪಂದ್ಯದ ನಡುವೆ ಲಖನೌ ಸ್ಟಾಫ್ ಫೋನ್ ಬಳಕೆ, ಫಿಕ್ಸಿಂಗ್ ಅನುಮಾನ

Published : May 10, 2026, 06:55 PM IST

ಬಿಸಿಸಿಐ ಸತತ ವಾರ್ನಿಂಗ್ ನೀಡುತ್ತಿದ್ದರೂ ಯಾವ ತಂಡಗಳು ಕ್ಯಾರೇ ಅನ್ನುತ್ತಿಲ್ಲ. ಇದೀಗ ಸಿಎಸ್‌ಕೆ ವಿರುದ್ಧದ ಪಂದ್ಯದ ನಡುವೆ ಲಖನೌ ಸೂಪರ್‌ಜೈಂಟ್ಸ್ ತಂಡದ ಸ್ಟಾಫ್ ಫೋನ್ ಬಳಕೆ ಮಾಡುತ್ತಿರುವ ದೃಶ್ಯ ಭಾರಿ ವಿವಾದ ಸೃಷ್ಟಿಸಿದೆ.

PREV
15
ಐಪಿಎಲ್ ಟೂರ್ನಿಯಲ್ಲಿ ಏನಾಗುತ್ತಿದೆ

ಐಪಿಎಲ್ ಟೂರ್ನಿಯಲ್ಲಿ ಹಲವು ನಿಯಮಗಳು ಉಲ್ಲಂಘನೆಯಾಗುತ್ತಿದೆ. ಪ್ರಮುಖವಾಗಿ ಪಂದ್ಯದ ನಡುವೆ ಫೋನ್ ಬಳಕೆ, ಕ್ರಿಕೆಟಿಗರಹೊಟೆಲ್ ರೂಂಗಳಿಗೆ ಅಪರಿಚಿತರ ಭೇಟಿ, ಹನಿ ಟ್ರಾಪ್ ಸೇರಿದಂತೆ ಹಲವು ರೀತಿಯ ನಿಯಮ ಉಲ್ಲಂಘನೆ ಕುರಿತು ಬಿಸಿಸಿಐ ಗರಂ ಆಗಿದೆ. ಈಗಾಗಲೇ ಖಡಕ್ ವಾರ್ನಿಂಗ್ ನೀಡಿದೆ. ಆದರೆ ಇದೀಗ ಲಖನೌ ಸೂಪರ್‌ಜೈಂಟ್ಸ್ ತಂಡದ ಸಿಬ್ಬಂದಿ ಫೋನ್ ಬಳಕೆ ಮಾಡಿರುವುದು ಬಹಿರಂಗವಾಗಿದೆ.

25
ಸಿಎಸ್‌ಕೆ ವಿರುದ್ದದ ಪಂದ್ಯದ ನಡುವೆ ಫೋನ್ ಬಳಕೆ

ಚೆನ್ನೈ ವಿರುದ್ಧದ ಪಂದ್ಯದ ನಡುವೆ ಲಖನೌ ತಂಡದ ಸ್ಟಾಫ್ ಫೋನ್ ಬಳಕೆ ಮಾಡುತ್ತಿರುವುದು ಪತ್ತೆಯಾಗಿದೆ. ಜೋಶ್ ಇಂಗ್ಲಿಸ್ ಬ್ಯಾಟಿಂಗ್ ಮಾಡುತ್ತಿದ್ದಂತೆ ಕ್ಯಾಮೆರಾ ಲಖನೌ ತಂಡದ ಡಗೌಟ್ ಬಳಿ ತಿರುಗಿತ್ತು. ಈ ವೇಳೆ ಸ್ಟಾಫ್ ಫೋನ್‌ನಲ್ಲಿ ಮಾತನಾಡುತ್ತಿರುವುದು ಪತ್ತೆಯಾಗಿದೆ.

35
ವಾರ್ನಿಂಗ್ ಬಳಿಕವೂ ಫೋನ್ ಬಳಕೆ

ಐಪಿಎಲ್ 2026ರಲ್ಲಿ ಕೆಲ ತಂಡಗಳು ಪಂದ್ಯದ ನಡುವೆ ಫೋನ್ ಬಳಕೆ ಮಾಡಿದೆ. ರಾಜಸ್ಥಾನ ರಾಯಲ್ಸ್ ಸ್ಟಾಫ್ ಫೋನ್ ಬಳಕೆ ಮಾಡಿದ ಪ್ರಕರಣದಲ್ಲಿ ಈಗಾಗಲೇ ದಂಡ ವಿಧಿಸಲಾಗಿದೆ. ಇಷ್ಟೇ ಅಲ್ಲ ಖಡಕ್ ವಾರ್ನಿಂಗ್ ನೀಡಿದೆ. ಇಷ್ಟಾದರೂ ಲಖನೌ ತಂಡದ ಸ್ಟಾಫ್ ಮತ್ತೆ ಫೋನ್ ಬಳಕೆ ಮಾಡಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

45
ಲಖನೌ ತಂಡಕ್ಕ ನೋಟಿಸ್ ಸಾಧ್ಯತೆ

ಲಖನೌ ತಂಡ ಸ್ಪಷ್ಟ ನಿಯಮ ಉಲ್ಲಂಘನೆ ಮಾಡಿದೆ. ಸತತ ವಾರ್ನಿಂಗ್ ಬಳಿಕವೂ ಲಖನೌ ತಂಡದ ಫೋನ್ ಬಳಕೆ ಮಾಡಿರುವುದೇ ವಿವಾದಕ್ಕೆ ಕಾರಣಾಗಿದೆ. ಹೀಗಾಗಿ ಲಖನೌ ತಂಡಕ್ಕೆ ಬಿಸಿಸಿಐ ನೋಟಿಸ್ ನೀಡುವ ಸಾಧ್ಯತೆ ಇದೆ. ಈ ಬಾರಿ ದಂಡದ ಜೊತೆ ಕಠಿಣ ಕ್ರಮದ ಸಾಧ್ಯತೆ ಹೆಚ್ಚಿದೆ.

55
ಹನಿಟ್ರಾಪ್ ಆತಂಕ

ಬಿಸಿಸಿಐ ಈಗಾಗಲೇ ಐಪಿಎಲ್ ಸ್ಟಾರ್ ಪ್ಲೇಯರ್‌ಗೆ ಎಚ್ಚರಿಕೆ ನೀಡಿದೆ. ಹೊಟೆಲ್ ರೂಂಗಳಲ್ಲಿ ಅಪರಿಚಿತರು, ಸೋಶಿಯಲ್ ಮೀಡಿಯಾ ಮೂಲಕ ಪರಿಚಯಸ್ಥರನ್ನು ಆಹ್ವಾನಿಸುತ್ತಿರುವುದು, ತಡ ರಾತ್ರಿವರೆಗೆ ಅಪರಿಚಿತರ ಜೊತೆಗೆ ತಂಗುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಈಗಾಗಲೇ ಬಿಸಿಸಿಐ ವಾರ್ನಿಂಗ್ ನೀಡಿದೆ.

ಹನಿಟ್ರಾಪ್ ಆತಂಕ

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories