ದಕ್ಷಿಣ ಆಫ್ರಿಕಾ ಬೌಲರ್ ಚೆಂಡಾಡಿದ ರಿಚಾ ಘೋಷ್ ಯಾರು? ಈಕೆ ಹಿನ್ನಲೆ ಏನು?

Published : Oct 10, 2025, 10:50 AM IST

ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ಎದುರು ಸ್ಪೋಟಕ 94 ರನ್ ಚಚ್ಚಿದ ರಿಚಾ ಘೋಷ್ ಯಾರು? ಆಕೆಯ ಹಿನ್ನೆಲೆ ಏನು ಎನ್ನುವುದನ್ನು ನೋಡೋಣ ಬನ್ನಿ.

PREV
16
ಟೀಂ ಇಂಡಿಯಾದ 'ಗೇಮ್ ಚೇಂಜರ್' ರಿಚಾ ಘೋಷ್

ರಿಚಾ ಘೋಷ್ ಭಾರತ ತಂಡದ ಆಕ್ರಮಣಕಾರಿ ಬ್ಯಾಟರ್. ಸೆಪ್ಟೆಂಬರ್ 28, 2003 ರಂದು ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಜನಿಸಿದ ರಿಚಾಗೆ ಈಗ ಕೇವಲ 22 ವರ್ಷ.

26
16ನೇ ವಯಸ್ಸಿನಲ್ಲಿ ತಂಡಕ್ಕೆ ಬಂದ ರಿಚಾ ಘೋಷ್

ರಿಚಾ ಘೋಷ್ ಅವರನ್ನು ಜನವರಿ 2020 ರಲ್ಲಿ ಕೇವಲ 16 ನೇ ವಯಸ್ಸಿನಲ್ಲಿ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ಗೆ ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿತ್ತು.

36
ರಿಚಾ ಘೋಷ್ ಟಿ20ಗೆ ಯಾವಾಗ ಪಾದಾರ್ಪಣೆ?

ರಿಚಾ ಘೋಷ್ ಫೆಬ್ರವರಿ 12, 2020 ರಂದು ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ20 ಪಂದ್ಯಗಳಿಗೆ ಪಾದಾರ್ಪಣೆ ಮಾಡಿದರು. ಈ ಪಂದ್ಯದಲ್ಲಿ ಅವರು 17 ರನ್ ಗಳಿಸಿದ್ದರು.

46
ರಿಚಾ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದು ಯಾವಾಗ?

ರಿಚಾ ಘೋಷ್ ತಮ್ಮ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನು ಸೆಪ್ಟೆಂಬರ್ 21, 2021 ರಂದು ಆಸ್ಟ್ರೇಲಿಯಾ ವಿರುದ್ಧ ಆಡಿದರು. ಈ ಪಂದ್ಯದಲ್ಲಿ ಅವರು ಅಜೇಯ 32 ರನ್ ಗಳಿಸಿದ್ದರು.

56
ಏಕದಿನದಲ್ಲಿ 947 ರನ್ ಗಳಿಸಿರುವ ರಿಚಾ ಘೋಷ್

ರಿಚಾ ಘೋಷ್ ಪ್ರಸ್ತುತ ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್. ಅವರು 46 ಏಕದಿನ ಪಂದ್ಯಗಳಲ್ಲಿ 99.47 ಸ್ಟ್ರೈಕ್ ರೇಟ್‌ನಲ್ಲಿ 1041 ರನ್ ಗಳಿಸಿದ್ದಾರೆ.

66
ಟಿ20ಯಲ್ಲಿ ರಿಚಾ ಘೋಷ್ ಹೆಸರಲ್ಲಿ 1067 ರನ್

ಟಿ20ಯಲ್ಲಿ ರಿಚಾ ಘೋಷ್ 67 ಪಂದ್ಯಗಳಲ್ಲಿ 142.45 ಸ್ಟ್ರೈಕ್ ರೇಟ್‌ನಲ್ಲಿ 1067 ರನ್ ಗಳಿಸಿದ್ದಾರೆ. ಅವರು 2 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 151 ರನ್ ಗಳಿಸಿದ್ದಾರೆ.

Read more Photos on
click me!

Recommended Stories