ಸಿಡ್ನಿ: ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಹಾಗೂ ಸ್ಪೋಟಕ ಎಡಗೈ ಬ್ಯಾಟರ್ ಟ್ರ್ಯಾವಿಸ್ ಹೆಡ್ ಅವರಿಗೆ ಐಪಿಎಲ್ ಫ್ರಾಂಚೈಸಿಯೊಂದು ಬಿಗ್ ಆಫರ್ ನೀಡಿತ್ತು ಎಂದು ವರದಿಯಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ಆಸ್ಟ್ರೇಲಿಯಾ ಪರ ಆಡುವುದನ್ನು ನಿಲ್ಲಿಸಿ ಫ್ರಾಂಚೈಸಿ ಕ್ರಿಕೆಟ್ ಮೇಲೆ ಮಾತ್ರ ಗಮನ ಹರಿಸಲು ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್, ಓಪನರ್ ಟ್ರಾವಿಸ್ ಹೆಡ್ ಮತ್ತು ದಕ್ಷಿಣ ಆಫ್ರಿಕಾದ ಹೆನ್ರಿಕ್ ಕ್ಲಾಸೆನ್‌ಗೆ ಐಪಿಎಲ್ ತಂಡವೊಂದು ಭಾರಿ ಮೊತ್ತದ ಆಫರ್ ನೀಡಿತ್ತು ಎಂದು ಆಸ್ಟ್ರೇಲಿಯಾದ ಮಾಧ್ಯಮ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿದೆ.
27
ಸನ್‌ರೈಸರ್ಸ್ ಹೈದರಾಬಾದ್ ಆಟಗಾರರಿಗೆ ಬಿಗ್ ಆಫರ್
ಅಂತರಾಷ್ಟ್ರೀಯ ಕ್ರಿಕೆಟ್ ತೊರೆದು ವಿಶ್ವಾದ್ಯಂತ ವಿವಿಧ ಫ್ರಾಂಚೈಸಿ ಲೀಗ್‌ಗಳಲ್ಲಿ ಸಕ್ರಿಯರಾಗಲು ಸನ್‌ರೈಸರ್ಸ್ ಹೈದರಾಬಾದ್‌ನ ಈ ಮೂವರು ಆಟಗಾರರಿಗೆ ಒಟ್ಟಾಗಿ 58.2 ಕೋಟಿ ರೂಪಾಯಿ ಆಫರ್ ಮಾಡಲಾಗಿತ್ತು ಎಂದು ವರದಿಯಾಗಿದೆ.
37
ಫ್ರಾಂಚೈಸಿ ಆಫರ್ ತಿರಸ್ಕರಿಸಿದ ಕಮಿನ್ಸ್ & ಹೆಡ್
ಆದರೆ, ಪ್ಯಾಟ್ ಕಮಿನ್ಸ್ ಮತ್ತು ಟ್ರ್ಯಾವಿಸ್ ಹೆಡ್ ಈ ಆಫರ್ ಅನ್ನು ತಿರಸ್ಕರಿಸಿ ಆಸ್ಟ್ರೇಲಿಯಾ ಪರ ಆಟ ಮುಂದುವರಿಸಲು ನಿರ್ಧರಿಸಿದ್ದಾರೆ ಎಂದು ವರದಿ ಹೇಳಿದೆ. ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಕಮಿನ್ಸ್‌ಗೆ 18 ಕೋಟಿ ಮತ್ತು ಟ್ರಾವಿಸ್ ಹೆಡ್‌ಗೆ 14 ಕೋಟಿ ರೂಪಾಯಿ ಸಂಭಾವನೆ ನೀಡುತ್ತಿದೆ.
ಇದಲ್ಲದೆ, ಆಸ್ಟ್ರೇಲಿಯನ್ ಕ್ರಿಕೆಟ್ ಮಂಡಳಿಯ ವಾರ್ಷಿಕ ಒಪ್ಪಂದದಿಂದ ಇಬ್ಬರಿಗೂ ಸುಮಾರು 8.74 ಕೋಟಿ ರೂಪಾಯಿ ಸಿಗುತ್ತದೆ. ಕಮಿನ್ಸ್ ಅವರ ನಾಯಕತ್ವದ ಸ್ಟೈಫಂಡ್ ಸೇರಿಸಿದರೆ, ಕ್ರಿಕೆಟ್ ಮಂಡಳಿಯಿಂದ ವಾರ್ಷಿಕವಾಗಿ ಮೂರು ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ (17.48 ಕೋಟಿ ರೂ.) ಸಂಭಾವನೆ ಪಡೆಯುತ್ತಾರೆ.
57
ಬಿಗ್ ಬ್ಯಾಷ್ ಲೀಗ್ ಖಾಸಗೀಕರಣಕ್ಕೆ ಪ್ರಯತ್ನ
ಆಸ್ಟ್ರೇಲಿಯಾದ ಟಿ20 ಲೀಗ್ ಆದ ಬಿಗ್ ಬ್ಯಾಷ್ ಲೀಗ್ ಅನ್ನು ಖಾಸಗೀಕರಣಗೊಳಿಸುವ ಬಗ್ಗೆ ಕ್ರಿಕೆಟ್ ಮಂಡಳಿ ಮತ್ತು ಆಟಗಾರರ ನಡುವೆ ನಡೆದ ಚರ್ಚೆಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಲಾಗಿದೆ ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಹೇಳಿದೆ.
67
ಆಸೀಸ್ ಆಟಗಾರರಿಗೆ ಬರುವ ಆಫರ್ ಬಹಿರಂಗ
ಫ್ರಾಂಚೈಸಿ ಕ್ರಿಕೆಟ್‌ನ ಜನಪ್ರಿಯತೆ ಹೆಚ್ಚುತ್ತಿರುವಾಗ, ಆಸ್ಟ್ರೇಲಿಯಾದ ಆಟಗಾರರನ್ನು ರಾಷ್ಟ್ರೀಯ ತಂಡಕ್ಕಾಗಿ ಉಳಿಸಿಕೊಳ್ಳುವುದು ಎಷ್ಟು ಕಷ್ಟ ಎಂಬುದನ್ನು ತೋರಿಸಲು ಈ ಆಫರ್‌ನ ವಿಷಯವನ್ನು ಬಹಿರಂಗಪಡಿಸಲಾಗಿದೆ.
77
ಕ್ಲಾಸೆನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ
ಕಮಿನ್ಸ್ ಮತ್ತು ಹೆಡ್ ಆಸ್ಟ್ರೇಲಿಯಾ ಪರ ಆಡುತ್ತಿರುವಾಗ, ಸನ್‌ರೈಸರ್ಸ್‌ನ ಮತ್ತೊಬ್ಬ ಆಟಗಾರ ಹೆನ್ರಿಕ್ ಕ್ಲಾಸೆನ್ ಕಳೆದ ಜೂನ್‌ನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.