CSK ಬಿಟ್ಟು ಬದ್ದ ಎದುರಾಳಿ ತಂಡ ಸೇರ್ತಾರಾ ಧೋನಿ? ಈ ಜೆರ್ಸಿ ತೊಟ್ಟು ಅಚ್ಚರಿ ಸಂದೇಶ ಕೊಟ್ರಾ ಕೂಲ್ ಕ್ಯಾಪ್ಟನ್?

Published : Oct 08, 2025, 04:18 PM IST

ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದರೂ ಆಗಾಗ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಧೋನಿ ತೊಟ್ಟ ಜೆರ್ಸಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. 

PREV
16
ಬಿಡುವಿನ ಸಮಯ ಎಂಜಾಯ್ ಮಾಡುತ್ತಿರುವ ಧೋನಿ

ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ, ಐಪಿಎಲ್ ಮುಗಿದ ಬಳಿಕ ತಾನಾಯಿತು ತನ್ನ ಪಾಡಾಯಿತು ಎನ್ನುವಂತೆ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದೇ ರಾಂಚಿಯಲ್ಲಿ ತಮ್ಮದೇ ಆದ ರೀತಿಯಲ್ಲಿ ಬಿಡುವಿನ ಸಮಯವನ್ನು ಎಂಜಾಯ್ ಮಾಡುತ್ತಾ ಇದ್ದಾರೆ.

26
2026ರ ಐಪಿಎಲ್ ಆಡ್ತಾರಾ ಧೋನಿ?

2026ರ ಐಪಿಎಲ್ ಟೂರ್ನಿಯಲ್ಲಿ ಮತ್ತೊಮ್ಮೆ ಧೋನಿ ಆಟಗಾರನಾಗಿ ಕಣಕ್ಕಿಳಿಯುತ್ತಾರಾ ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಆದರೆ ಫಿಟ್ನೆಸ್ ವಿಚಾರದಲ್ಲಿ ಧೋನಿ ರಾಜಿ ಮಾಡಿಕೊಂಡಿಲ್ಲ. ಇದೀಗ ಧೋನಿ ದೊಟ್ಟ ಜೆರ್ಸಿ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿದೆ.

36
ಚರ್ಚೆಗೆ ಗ್ರಾಸವಾದ ಧೋನಿ ನಡೆ

ಮಹೇಂದ್ರ ಸಿಂಗ್ ಧೋನಿ ಐಪಿಎಲ್‌ನಲ್ಲಿ ತನ್ನ ವೃತ್ತಿಜೀವನದ ಬಹುಪಾಲು ಕ್ಷಣಗಳನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲೇ ಕಳೆದಿದ್ದಾರೆ. ಆದರೆ ಇದೀಗ ಧೋನಿ ಸಿಎಸ್‌ಕೆ ತಂಡದ ಬದ್ದ ಎದುರಾಳಿ ಮುಂಬೈ ಇಂಡಿಯನ್ಸ್ ಜೆರ್ಸಿಯಲ್ಲಿ ಕಾಣಿಸಿಕೊಂಡಿರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.

46
ಮುಂಬೈ ಇಂಡಿಯನ್ಸ್ ಜೆರ್ಸಿಯಲ್ಲಿ ಧೋನಿ?

ಹೌದು, ಅಚ್ಚರಿ ಎನಿಸಿದ್ರೂ ಇದು ಸತ್ಯ. ಧೋನಿ ಫುಟ್ಬಾಲ್ ಪಂದ್ಯ ಆಡುವ ವೇಳೆ ಮುಂಬೈ ಇಂಡಿಯನ್ಸ್ ಜೆರ್ಸಿ ತೊಟ್ಟು ಕಾಣಿಸಿಕೊಂಡಿದ್ದಾರೆ. ಧೋನಿ ಸ್ಲೀವ್‌ಲೆಸ್ ಟಾಪ್ ಜೆರ್ಸಿಯಲ್ಲಿ ಕಾಣಿಸಿಕೊಂಡಿರುವುದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

56
ಕ್ಯಾಪ್ಟನ್ ಕೂಲ್‌ ಮುಂಬೈ ಕಡೆ ಮುಖ ಮಾಡಿದ್ರಾ?

ಕಳೆದ ಒಂದೂವರೆ ದಶಕದಿಂದ ಹಳದಿ ಜೆರ್ಸಿಯಲ್ಲಿ ಧೋನಿ ಕಾಣಿಸಿಕೊಂಡಿದ್ದಾರೆ, ವೃತ್ತಿಜೀವನದ ಸಂಧ್ಯಾಕಾಲದಲ್ಲಿರುವ ಧೋನಿ, ಮುಂಬೈ ಇಂಡಿಯನ್ಸ್ ಬ್ಲ್ಯೂ ಜೆರ್ಸಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದೆಲ್ಲ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

66
ಧೋನಿ ಮುಂದಿನ ನಡೆ ಏನಾಗಬಹುದು?

ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕೆ ಐದು ಐಪಿಎಲ್ ಟ್ರೋಫಿ ಗೆದ್ದುಕೊಟ್ಟ ನಾಯಕ ಧೋನಿ, ಅಚ್ಚರಿಯ ಬೆಳವಣಿಗೆಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಕೂಡಿಕೊಳ್ತಾರಾ ಎನ್ನುವುದನ್ನು ಕಮೆಂಟ್ ಮಾಡಿ.

Read more Photos on
click me!

Recommended Stories