ಯುಎಸ್‌ಎ ಎದುರಿನ ಪಂದ್ಯಕ್ಕೆ ಭಾರತ ಕ್ರಿಕೆಟ್ ತಂಡ ಪ್ರಕಟ; ಕೊನೆಗೂ ಒಂದು ಬದಲಾವಣೆಗೆ ಮುಂದಾದ ರೋಹಿತ್ ಪಡೆ

First Published | Jun 12, 2024, 12:20 PM IST

ನ್ಯೂಯಾರ್ಕ್‌: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿಂದು ಭಾರತ ಹಾಗೂ ಯುಎಸ್‌ಎ ತಂಡಗಳು ಮುಖಾಮುಖಿಯಾಗಲಿಗೆ. ಈಗಾಗಲೇ ತಲಾ ಎರಡು ಪಂದ್ಯ ಗೆದ್ದಿರುವ ಉಭಯ ತಂಡಗಳು ಇದೀಗ ಹ್ಯಾಟ್ರಿಕ್ ಗೆಲುವು ಸಾಧಿಸಿ ಸೂಪರ್ 8 ಹಂತಕ್ಕೆ ಲಗ್ಗೆಯಿಡಲು ಎದುರು ನೋಡುತ್ತಿದೆ. ಈ ಪಂದ್ಯಕ್ಕೆ ಟೀಂ ಇಂಡಿಯಾ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

1. ವಿರಾಟ್ ಕೊಹ್ಲಿ:

ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ ಕಳೆದೆರಡು ಪಂದ್ಯಗಳಲ್ಲೂ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದು, ಇಂದು ಆತಿಥೇಯ ಯುಎಸ್‌ಎ ಎದುರಿನ ಪಂದ್ಯದಲ್ಲಿ ಉತ್ತಮ ರನ್ ಗಳಿಸಿ ಫಾರ್ಮ್‌ಗೆ ಮರಳಲು ಎದುರು ನೋಡುತ್ತಿದ್ದಾರೆ.

2. ರೋಹಿತ್ ಶರ್ಮಾ:

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಕಳೆದ ಪಂದ್ಯದಲ್ಲಿ ಬೇಗನೇ ವಿಕೆಟ್ ಒಪ್ಪಿಸಿದ್ದರು. ಆದರೆ ಹಿಟ್‌ಮ್ಯಾನ್ ಅಬ್ಬರಿಸಿದರೆ ಯುಎಸ್ಎ ತಂಡಕ್ಕೆ ಉಳಿಗಾಲವಿಲ್ಲ.

Tap to resize

3. ರಿಷಭ್ ಪಂತ್:

ಟೀಂ ಇಂಡಿಯಾ ಪರ ಕಳೆದೆರಡು ಪಂದ್ಯಗಳಲ್ಲೂ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿರುವ ರಿಷಭ್ ಪಂತ್, ತಮ್ಮ ಲಯವನ್ನು ಮುಂದುವರೆಸಿಕೊಂಡು ಹೋಗುವ ವಿಶ್ವಾಸದಲ್ಲಿದ್ದಾರೆ.

4. ಸೂರ್ಯಕುಮಾರ್ ಯಾದವ್:

ಭಾರತದ ನಂ.1 ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರಿಂದ ಮೊದಲೆರಡು ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿಲ್ಲ. ಸೂಪರ್ 8 ಹಂತಕ್ಕೂ ಮುನ್ನ ಸೂರ್ಯ ದೊಡ್ಡ ಮೊತ್ತ ಗಳಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕಿದೆ.

5. ಸಂಜು ಸ್ಯಾಮ್ಸನ್:

ಕೇರಳ ಮೂಲದ ಪ್ರತಿಭಾನ್ವಿತ ಕ್ರಿಕೆಟಿಗ ಸಂಜು ಸ್ಯಾಮ್ಸನ್‌ಗೆ ಇಂದು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುವ ಸಾಧ್ಯತೆಯಿದೆ. ಶಿವಂ ದುಬೆ ಬದಲಿಗೆ ಇಂದು ಸಂಜುಗೆ ತಂಡದಲ್ಲಿ ಸ್ಥಾನ ಸಿಗುವುದು ಬಹುತೇಕ ಖಚಿತ ಎನಿಸಿದೆ.

6. ಹಾರ್ದಿಕ್ ಪಾಂಡ್ಯ:

ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್‌ನಲ್ಲಿ ಮಿಂಚದಿದ್ದರೂ ಬೌಲಿಂಗ್‌ನಲ್ಲಿ ಮಾರಕ ದಾಳಿ ನಡೆಸಿ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಪಾಂಡ್ಯ ಬ್ಯಾಟಿಂಗ್‌ನಲ್ಲೂ ಮಿಂಚಬೇಕಿದೆ.

7. ರವೀಂದ್ರ ಜಡೇಜಾ:

ಟೀಂ ಇಂಡಿಯಾದ ಮತ್ತೋರ್ವ ಆಲ್ರೌಂಡರ್ ರವೀಂದ್ರ ಜಡೇಜಾ ಅವರಿಂದ ಇನ್ನೂ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿಲ್ಲ. ಹೀಗಿದ್ದೂ ಅನುಭವಿ ಆಲ್ರೌಂಡರ್‌ಗೆ ತಂಡದಲ್ಲಿ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.

8. ಅಕ್ಷರ್ ಪಟೇಲ್:

ಭಾರತದ ಬೌಲಿಂಗ್ ಆಲ್ರೌಂಡರ್ ಅಕ್ಷರ್ ಪಟೇಲ್ ಶಿಸ್ತುಬದ್ದ ದಾಳಿ ನಡೆಸಿ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಇದಷ್ಟೇ ಅಲ್ಲದೇ ಉಪಯುಕ್ತ ಸಂದರ್ಭದಲ್ಲಿ ಬ್ಯಾಟಿಂಗ್ ಮೂಲಕವೂ ಅಕ್ಷರ್ ನೆರವಾಗುತ್ತಿದ್ದಾರೆ.

9. ಆರ್ಶದೀಪ್ ಸಿಂಗ್:

ಟೀಂ ಇಂಡಿಯಾ ಎಡಗೈ ವೇಗಿ ಆರ್ಶದೀಪ್ ಸಿಂಗ್ ಕೊಂಚ ದುಬಾರಿಯಾಗುತ್ತಿದ್ದರೂ, ಮಹತ್ವದ ಘಟ್ಟದಲ್ಲಿ ವಿಕೆಟ್ ಕಬಳಿಸುತ್ತಿರುವುದು ಬೌಲಿಂಗ್ ವಿಭಾಗಕ್ಕೆ ಬಲ ಬರುವಂತೆ ಮಾಡಿದೆ.

10. ಮೊಹಮ್ಮದ್ ಸಿರಾಜ್:

ಹೈದರಾಬಾದ್ ಮೂಲದ ವೇಗಿ ಸಿರಾಜ್, ಅತ್ಯಂತ ಸಿಸ್ತುಬದ್ದ ದಾಳಿ ನಡೆಸುವ ಮೂಲಕ ಎದುರಾಳಿ ಬ್ಯಾಟರ್‌ಗಳು ಒಂದೊಂದು ರನ್ ಗಳಿಸಲು ಪರದಾಡುವಂತೆ ಮಾಡುತ್ತಿದ್ದಾರೆ.

11. ಜಸ್ಪ್ರೀತ್ ಬುಮ್ರಾ:

ಕಳೆದೆರಡು ಪಂದ್ಯಗಳಲ್ಲೂ ಮಾರಕ ದಾಳಿ ನಡೆಸುವ ಮೂಲಕ ಎರಡು ಪಂದ್ಯಶ್ರೇಷ್ಠ ಪ್ರಶಸ್ತಿ ಜಯಿಸಿರುವ ಜಸ್ಪ್ರೀತ್ ಬುಮ್ರಾ, ತಂಡದ ವೇಗದ ಬೌಲಿಂಗ್ ಪಡೆಯ ನೇತೃತ್ವ ವಹಿಸಿದ್ದಾರೆ. ಬುಮ್ರಾ ಬೆಂಕಿ ದಾಳಿ ಯುಎಸ್‌ಎ ಬ್ಯಾಟರ್‌ಗಳು ಕಂಗಾಲಾಗೋದು ಗ್ಯಾರಂಟಿ.

Latest Videos

click me!