ಬೆಂಗಳೂರು: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಭರದ ಸಿದ್ದತೆಗಳು ಶುರುವಾಗಿವೆ. ಹೀಗಿರುವಾಗಲೇ ವಿರಾಟ್ ಕೊಹ್ಲಿ ಐಪಿಎಲ್‌ಗೂ ಗುಡ್ ಬೈ ಹೇಳ್ತಾರಾ ಎನ್ನುವ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಈ ಕುರಿತಾದ ಸತ್ಯಾಸತ್ಯತೆ ಏನು ನೋಡೋಣ ಬನ್ನಿ.
18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಮೂಲಕ ಐಪಿಎಲ್ ಟ್ರೋಫಿ ಬರ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
28
ಆರ್‌ಸಿಬಿ ತಂಡದಲ್ಲಿ ಮಹತ್ವದ ಬೆಳವಣಿಗೆ
ಇದಾದ ಬಳಿಕ ಹಲವು ಮಹತ್ವದ ಬೆಳವಣಿಗೆಗಳು ನಡೆದವು. ಆರ್‌ಸಿಬಿ ವಿಜಯೋತ್ಸವದಲ್ಲಿ ನಡೆದ ಕಾಲ್ತುಳಿತ, ಆರ್‌ಸಿಬಿ ತಂಡವೇ ಮಾರಾಟವಾಗಲಿದೆ ಎನ್ನುವಂತಹ ಸುದ್ದಿಗಳು ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಸಿವೆ.
38
ಐಪಿಎಲ್‌ಗೆ ದಿಢೀರ್ ಗುಡ್ ಬೈ ಹೇಳ್ತಾರಾ ಕೊಹ್ಲಿ?
ಇನ್ನು ಇದೆಲ್ಲದರ ನಡುವೆ ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್‌ಗೆ ದಿಢೀರ್ ವಿದಾಯ ಘೋಷಿಸಿದಂತೆ ವಿರಾಟ್ ಕೊಹ್ಲಿ, ಐಪಿಎಲ್‌ಗೂ ವಿದಾಯ ಹೇಳುತ್ತಾರಾ ಎನ್ನುವ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಇದಕ್ಕೆ ಕಾರಣವಾಗಿದ್ದು, ಓರ್ವ ರಾಷ್ಟ್ರೀಯ ಕ್ರೀಡಾಪತ್ರಕರ್ತರ ಮಾತು.
ರೇವ್ ಸ್ಪೋರ್ಟ್ಸ್ ಕ್ರೀಡಾ ಪತ್ರಕರ್ತ ರೋಹಿತ್ ಜುಗಲನ್, ವಿರಾಟ್ ಕೊಹ್ಲಿ, '2026ರ ಐಪಿಎಲ್ ಟೂರ್ನಿಗೂ ಮುನ್ನ ಆರ್‌ಸಿಬಿಯ ಪ್ರಮುಖ ಬ್ರ್ಯಾಂಡ್ ಜತೆಗಿನ ಕಾಂಟ್ರ್ಯಾಕ್ಟ್ ರಿನ್ಯೂ ಮಾಡಿಲ್ಲ' ಎಂದಿರುವುದು ಸಂಚಲನ ಮೂಡಿಸಿದೆ.
58
ಕೊಹ್ಲಿ ಐಪಿಎಲ್‌ಗೆ ಗುಡ್ ಬೈ ಹೇಳುವುದು ಗಾಳಿಸುದ್ದಿಯಷ್ಟೇ
ಹೀಗಂದ ಮಾತ್ರಕ್ಕೆ ವಿರಾಟ್ ಕೊಹ್ಲಿ ಐಪಿಎಲ್‌ಗೆ ವಿದಾಯ ಹೇಳುತ್ತಾರೆ ಎಂದರ್ಥವಲ್ಲ. ಆರ್‌ಸಿಬಿ ಜತೆಗಿನ ಬ್ರ್ಯಾಂಡ್ ಜತೆಗಿನ ಒಪ್ಪಂದವನ್ನು ಮಾತ್ರ ನವೀಕರಿಸಿಲ್ಲ. ಆರ್‌ಸಿಬಿಯಾಗಲಿ ಅಥವಾ ವಿರಾಟ್ ಕೊಹ್ಲಿಯಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
68
18ನೇ ಆವೃತ್ತಿಯಲ್ಲಿ ಆರ್‌ಸಿಬಿ ಬ್ಯಾಟಿಂಗ್ ಬೆನ್ನೆಲುಬು ಕೊಹ್ಲಿ
18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಚೊಚ್ಚಲ ಟ್ರೋಫಿ ಜಯಿಸುವಲ್ಲಿ ವಿರಾಟ್ ಕೊಹ್ಲಿ ಪ್ರಮುಖ ಪಾತ್ರವಹಿಸಿದ್ದರು. ಆರ್‌ಸಿಬಿ ಪರ ಕೊಹ್ಲಿ 15 ಪಂದ್ಯಗಳನ್ನಾಡಿ 54.75ರ ಬ್ಯಾಟಿಂಗ್ ಸರಾಸರಿಯಲ್ಲಿ 8 ಅರ್ಧಶತಕ ಸಹಿತ 657 ರನ್ ಸಿಡಿಸಿದ್ದರು.
78
ಐಪಿಎಲ್ ಸಾರ್ವಕಾಲಿಕ ಗರಿಷ್ಠ ರನ್ ಸರದಾರ
ಇನ್ನು ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ರನ್ ಬಾರಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಕೊಹ್ಲಿ ಆರ್‌ಸಿಬಿ ಪರ 267 ಪಂದ್ಯಗಳನ್ನಾಡಿ 39.54ರ ಬ್ಯಾಟಿಂಗ್ ಸರಾಸರಿಯಲ್ಲಿ 8 ಶತಕ ಹಾಗೂ 63 ಅರ್ಧಶತಕ ಸಹಿತ 8,661 ರನ್ ಬಾರಿಸಿದ್ದಾರೆ.
88
18 ಸೀಸನ್ ಒಂದೇ ಫ್ರಾಂಚೈಸಿ ಪ್ರತಿನಿಧಿಸಿರುವ ಕೊಹ್ಲಿ
ಸತತ 18 ಸೀಸನ್ ಒಂದೇ ಐಪಿಎಲ್ ತಂಡವನ್ನು ಪ್ರತಿನಿಧಿಸಿದ ಏಕೈಕ ಬ್ಯಾಟರ್ ಎನ್ನುವ ಅಪರೂಪದ ಹೆಗ್ಗಳಿಕೆಯೂ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ.