ಇಂದೋರ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಮೋಘ ಶತಕ ಸಿಡಿಸಿದರು. ತಂಡವನ್ನು ಸೋಲಿನಿಂದ ಪಾರುಮಾಡಲು ವಿಫಲರಾದರೂ, ಹಲವು ದಾಖಲೆಗಳನ್ನು ಕೊಹ್ಲಿ ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾದರು.
ನ್ಯೂಜಿಲೆಂಡ್ ವಿರುದ್ಧ ಏಕದಿನದಲ್ಲಿ ಗರಿಷ್ಠ ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ನಂ.1 ಸ್ಥಾನಕ್ಕೇರಿದ್ದಾರೆ. ಅವರು 36 ಇನ್ನಿಂಗ್ಸ್‌ಗಳಲ್ಲಿ 7 ಶತಕ. ರಿಕಿ ಪಾಂಟಿಂಗ್ 6(50 ಇನ್ನಿಂಗ್ಸ್), ಸೆಹ್ವಾಗ್ 6(23 ಇನ್ನಿಂಗ್ಸ್) ಶತಕ ಸಿಡಿಸಿದ್ದಾರೆ.
26
ಕಿವೀಸ್ ಎದುರು ಒಟ್ಟಾರೆ 10 ಶತಕ ಸಿಡಿಸಿದ ಮೊದಲ ಬ್ಯಾಟರ್:
ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಕಿವೀಸ್ ಎದುರು ಅತಿಹೆಚ್ಚು ಶತಕ ಸಿಡಿಸಿದ ಬ್ಯಾಟರ್ ಎನ್ನುವ ಹಿರಿಮೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ವಿರಾಟ್ ಕಿವೀಸ್ ಎದುರು 73 ಇನ್ನಿಂಗ್ಸ್‌ಗಳನ್ನಾಡಿ 10 ಶತಕ ಸಿಡಿಸಿದ್ದಾರೆ. ಇನ್ನು ಇದಕ್ಕೂ ಮೊದಲು ಜಾಕ್ ಕಾಲಿಸ್ 76 ಇನ್ನಿಂಗ್ಸ್‌ಗಳನ್ನಾಡಿ 9 ಶತಕ ಸಿಡಿಸಿದ್ದರು.
36
35 ತಾಣಗಳಲ್ಲಿ ಸೆಂಚುರಿ
ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ವಿಶ್ವದಾದ್ಯಂತ ಒಟ್ಟು 35 ಕ್ರೀಡಾಂಗಣಗಳಲ್ಲಿ ಶತಕ ಬಾರಿಸಿದ್ದಾರೆ. ಇದು ಗರಿಷ್ಠ. ಸಚಿನ್ ತೆಂಡುಲ್ಕರ್ 34 ತಾಣಗಳಲ್ಲಿ ಶತಕ ಬಾರಿಸಿದ್ದು, ಅವರನ್ನು ಕೊಹ್ಲಿ ಹಿಂದಿಕ್ಕಿದ್ದಾರೆ.
ಕೊಹ್ಲಿ ಒಟ್ಟು 5 ದೇಶಗಳ ವಿರುದ್ಧ ತಲಾ 7 ಅಥವಾ ಅದಕ್ಕಿಂತ ಹೆಚ್ಚು ಶತಕ ಬಾರಿಸಿದ್ದಾರೆ. ಶ್ರೀಲಂಕಾ ವಿರುದ್ಧ 10, ವಿಂಡೀಸ್ ವಿರುದ್ಧ 9, ಆಸ್ಟ್ರೇಲಿಯಾ ವಿರುದ್ಧ 8, ದ.ಆಫ್ರಿಕಾ, ಕಿವೀಸ್ ವಿರುದ್ಧ ತಲಾ 7 ಶತಕ ಗಳಿಸಿದ್ದಾರೆ.
56
ಮೂರನೇ ಕ್ರಮಾಂಕದಲ್ಲಿ ಅತಿಹೆಚ್ಚು ರನ್ ಬಾರಿಸಿದ ಬ್ಯಾಟರ್
ಏಕದಿನ ಕ್ರಿಕೆಟ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಅತಿಹೆಚ್ಚು ರನ್ ಬಾರಿಸಿದ್ದ ರಿಕಿ ಪಾಂಟಿಂಗ್ ದಾಖಲೆಯನ್ನೂ ಕೊಹ್ಲಿ ನುಚ್ಚುನೂರು ಮಾಡಿದರು. ಪಾಂಟಿಂಗ್ ಮೂರನೇ ಕ್ರಮಾಂಕದಲ್ಲಿ 12,655 ರನ್ ಬಾರಿಸಿದ್ದರು. ಇದೀಗ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ 12,672 ರನ್ ಸಿಡಿಸಿ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ.
66
7 ಪಂದ್ಯದಲ್ಲಿ 616 ರನ್!
ಕೊಹ್ಲಿ ಅಭೂತಪೂರ್ವ ಲಯದಲ್ಲಿದ್ದು, ಕೊನೆ 7 ಏಕದಿನ ಪಂದ್ಯಗಳಲ್ಲಿ ಬರೋಬ್ಬರಿ 616 ರನ್ ಗಳಿಸಿದ್ದಾರೆ. ಇದರಲ್ಲಿ 3 ಶತಕ, 3 ಅರ್ಧಶತಕ ಒಳಗೊಂಡಿವೆ. ಈ ಪೈಕಿ 2 ಪಂದ್ಯಗಳಲ್ಲಿ ಔಟಾಗದೆ ಉಳಿದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.