ಢಾಕಾ: ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನಾಡಲು ಭಾರತಕ್ಕೆ ಬರುವುದಿಲ್ಲ ಎಂದು ಪಟ್ಟು ಹಿಡಿದಿರುವ ಬಾಂಗ್ಲಾದೇಶ, ಇದೀಗ ಐಸಿಸಿ ಮುಂದೆ ಮತ್ತೊಂದು ಬೇಡಿಕೆಯಿಟ್ಟಿದೆ. ಈ ಕುರಿತಾದ ಇಂಟ್ರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ ನೋಡಿ.
ಬಹುನಿರೀಕ್ಷಿತ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಮುಂಬರುವ ಫೆಬ್ರವರಿ 07ರಿಂದ ಆರಂಭವಾಗಲಿದ್ದು, ಈ ಪ್ರತಿಷ್ಠಿತ ಟೂರ್ನಿಗೆ ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯ ವಹಿಸಿವೆ.
28
ಭಾರತದಲ್ಲಿ ಆಡಲು ಹಿಂದೇಟು ಹಾಕುತ್ತಿರುವ ಬಾಂಗ್ಲಾದೇಶ
ಐಪಿಎಲ್‌ನಿಂದ ಮುಸ್ತಾಫಿಜುರ್ ರಹಮಾನ್‌ರನ್ನು ಕೈಬಿಟ್ಟ ಬಳಿಕ ಭದ್ರತೆ ಕಾರಣ ನೀಡಿ ಭಾರತದಲ್ಲಿ ಟಿ20 ವಿಶ್ವಕಪ್ ಆಡಲು ನಿರಾಕರಿಸುತ್ತಿರುವ ಬಾಂಗ್ಲಾದೇಶ ಈಗ ಮತ್ತೊಂದು ಬೇಡಿಕೆ ಮುಂದಿಟ್ಟಿದೆ.
38
'ಬಿ' ಗುಂಪಿನಲ್ಲಿ ಆಡಿಸುವಂತೆ ಹೊಸ ಡಿಮ್ಯಾಂಡ್
ಬಾಂಗ್ಲಾಕ್ಕೆ ತೆರಳಿದ್ದ ಐಸಿಸಿ ಅಧಿಕಾರಿಗಳ ಜೊತೆ ಸಭೆಯಲ್ಲಿ ಈ ಬಗ್ಗೆ ಮನವಿ ಮಾಡಿರುವ ಬಾಂಗ್ಲಾ, ತನ್ನನ್ನು ‘ಸಿ’ ಗುಂಪಿನ ಬದಲು ‘ಬಿ’ ಗುಂಪಿನಲ್ಲಿ ಆಡಿಸುವಂತೆ ಕೋರಿದೆ.
ಬಾಂಗ್ಲಾದೇಶದ ಪಂದ್ಯಗಳು ಕೋಲ್ಕತಾ-ಮುಂಬೈನಲ್ಲಿ ನಿಗದಿಯಾಗಿವೆ.
ಬಾಂಗ್ಲಾ ಸದ್ಯ ವಿಂಡೀಸ್, ಇಂಗ್ಲೆಂಡ್, ಇಟಲಿ, ನೇಪಾಳ ಜೊತೆ ‘ಸಿ’ ಗುಂಪಿನಲ್ಲಿದೆ. ಈ ಗುಂಪಿನ ಪಂದ್ಯಗಳು ಕೋಲ್ಕತಾ ಮುಂಬೈನಲ್ಲಿ ನಡೆಯಬೇಕಿದೆ.
58
'ಬಿ' ಗುಂಪಿನ ಬಹುತೇಕ ಪಂದ್ಯಗಳು ಶ್ರೀಲಂಕಾದಲ್ಲಿ ನಿಗದಿ
ಆದರೆ ತನ್ನನ್ನು ‘ಬಿ’ ಗುಂಪಿಗೆ ಸೇರಿಸಿ, ಐರ್ಲೆಂಡ್ ಅನ್ನು ‘ಸಿ’ ಗುಂಪಿಗೆ ಹಾಕುವಂತೆ ಕೋರಿದೆ. ‘ಬಿ’ ಗುಂಪಿನ ಪಂದ್ಯಗಳು ಶ್ರೀಲಂಕಾದಲ್ಲಿ ನಿಗದಿಯಾಗಿವೆ.
68
'ಬಿ' ಗುಂಪಿನ ಪಂದ್ಯಗಳು
ಸದ್ಯ 'ಬಿ' ಗುಂಪಿನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಜತೆಗೆ ಐರ್ಲೆಂಡ್, ಒಮಾನ್, ಶ್ರೀಲಂಕಾ ಹಾಗೂ ಜಿಂಬಾಬ್ವೆ ತಂಡಗಳು ಸ್ಥಾನ ಪಡೆದಿವೆ. ಬಾಂಗ್ಲಾದೇಶ ತಂಡವು ಬಿ ಗುಂಪಿನಲ್ಲಿ ಸ್ಥಾನ ಪಡೆದರೆ ಮುಂದಿನ ಸೂಪರ್ 8 ಹಂತಕ್ಕೇರಲು ಕೊಂಚ ಅನುಕೂಲವಾಗಲಿದೆ.
78
ಬಾಂಗ್ಲಾದೇಶದಿಂದ ಮಾಸ್ಟರ್ ಪ್ಲಾನ್?
ಪ್ರತಿ ಗುಂಪಿನಿಂದ ಎರಡು ತಂಡಗಳು ಸೂಪರ್ 8 ಹಂತಕ್ಕೆ ಲಗ್ಗೆಯಿಡಲಿವೆ. ಸದ್ಯ 'ಸಿ' ಗುಂಪಿನಲ್ಲಿ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್‌ನಂತಹ ಬಲಿಷ್ಠ ತಂಡಗಳಿವೆ. ಆದರೆ 'ಬಿ' ನಲ್ಲಿ ಆಸ್ಟ್ರೇಲಿಯಾ ಬಲಿಷ್ಠವಾಗಿದ್ದು, ಶ್ರೀಲಂಕಾವನ್ನು ಸೋಲಿಸಬಹುದು ಎನ್ನುವುದು ಬಾಂಗ್ಲಾದೇಶ ಲೆಕ್ಕಾಚಾರವಾಗಿರಬಹುದು.
88
ಐಸಿಸಿ ತೀರ್ಮಾನದ ಮೇಲೆ ಎಲ್ಲರ ಚಿತ್ತ
ಆದರೆ ಈ ಬಗ್ಗೆ ಐಸಿಸಿ ಇನ್ನಷ್ಟೇ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ. ಸಭೆಗೆ ಐಸಿಸಿ ಅಧಿಕಾರಿಗಳಾದ ಆ್ಯಂಡ್ರ್ಯೂ ಎಪ್‌ಗ್ರೇವ್ ನೇರವಾಗಿ ಹಾಜರಾದರೆ, ಭಾರತದ ಗೌರವ್ ಸಕ್ಸೇನಾ ವರ್ಚುವಲ್ ಆಗಿ ಪಾಲ್ಗೊಂಡರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.