ನವದೆಹಲಿ: ಭಾರತದ ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿ 12 ವರ್ಷಗಳ ಬಳಿಕ ಮೊದಲ ಬಾರಿಗೆ ರಣಜಿ ಟ್ರೋಫಿ ಪಂದ್ಯವನ್ನಾಡುತ್ತಿದ್ದಾರೆ. ಈ ವೇಳೆ ವಿರಾಟ್ ಕೊಹ್ಲಿ ಲಂಚ್ ಬ್ರೇಕ್‌ಗಾಗಿ ವಿಶೇಷ ಖಾದ್ಯ ನೀಡಲಾಗುತ್ತಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
ಟೀಂ ಇಂಡಿಯಾ ಮಾಜಿ ನಾಯಕ, ರನ್ ಮಷೀನ್ ವಿರಾಟ್ ಕೊಹ್ಲಿ ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಸಜ್ಜಾಗುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಫಾರ್ಮ್ ಕಂಡುಕೊಳ್ಳಲು ಬರೋಬ್ಬರಿ 12 ವರ್ಷಗಳ ಬಳಿಕ ವಿರಾಟ್ ಕೊಹ್ಲಿ ಇದೀಗ ಮೊದಲ ಬಾರಿಗೆ ರಣಜಿ ಪಂದ್ಯವನ್ನಾಡುತ್ತಿದ್ದಾರೆ
29
ವಿರಾಟ್ ಕೊಹ್ಲಿ 2012ರಲ್ಲಿ ವಿರೇಂದ್ರ ಸೆಹ್ವಾಗ್ ನಾಯಕತ್ವದಲ್ಲಿ ಕೊನೆಯ ಬಾರಿಗೆ ಡೆಲ್ಲಿ ಪರ ರಣಜಿ ಕ್ರಿಕೆಟ್ ಪಂದ್ಯವನ್ನಾಡಿದ್ದರು. ಇದೀಗ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಮತ್ತೊಮ್ಮೆ ಕಿಂಗ್ ಕೊಹ್ಲಿ ರಣಜಿ ಪಂದ್ಯವನ್ನಾಡಲು ಮೈದಾನಕ್ಕಿಳಿದಿದ್ದಾರೆ.
39
ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿಂದು ಆತಿಥೇಯ ಡೆಲ್ಲಿ ಹಾಗೂ ರೈಲ್ವೇಸ್ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದ ಡೆಲ್ಲಿ ತಂಡದ ನಾಯಕ ಆಯುಷ್ ಬದೋನಿ ಮೊದಲು ಬೌಲಿಂಗ್ ಮಾಡುವ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ.
49
ದಶಕದ ಬಳಿಕ ರಣಜಿ ಪಂದ್ಯವನ್ನಾಡಲು ಕಣಕ್ಕಿಳಿದ ವಿರಾಟ್ ಕೊಹ್ಲಿಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಸ್ಟೇಡಿಯಂಗೆ ಬಂದಿದ್ದಾರೆ. ಆಧಾರ್ ಕಾರ್ಡ್ ಇದ್ದವರಿಗೆ ಉಚಿತವಾಗಿ ಗೌತಮ್ ಗಂಭೀರ್ ಸ್ಟ್ಯಾಂಡ್‌ಗೆ ಪ್ರವೇಶ ಕಲ್ಪಿಸಲಾಗಿದೆ.
59
ಇದೀಗ ರಣಜಿ ಟ್ರೋಫಿ ಪಂದ್ಯದ ಲಂಚ್ ವೇಳೆಯಲ್ಲಿ ವಿರಾಟ್ ಕೊಹ್ಲಿ ತಮ್ಮ ನೆಚ್ಚಿನ ಚಿಲ್ಲಿ ಪನೀರ್ ಆರ್ಡರ್ ಮಾಡಿದ್ದಾರೆ. ಅಂದಹಾಗೆ ನಿಮಗೆ ಗೊತ್ತಿರಲಿ, ವಿರಾಟ್ ನಾನ್‌ವೆಜ್ ತಿನ್ನುವಾಗ ಹೆಚ್ಚಾಗಿ ಚಿಲ್ಲಿ ಚಿಕನ್ ಇಷ್ಟಪಟ್ಟು ತಿನ್ನುತ್ತಿದ್ದರು.
69
ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಕಳೆದ 25 ವರ್ಷಗಳಿಂದ ಕ್ಯಾಂಟೀನ್ ನಡೆಸುತ್ತಾ ಬಂದಿರುವ ಸಂಜಯ್ ಝಾ ಅವರು ಈ ಬಗ್ಗೆ ಮಾತನಾಡಿದ್ದು, 'ವಿರಾಟ್ ಕೊಹ್ಲಿಯವರು ಬಾಲ್ಯದಿಂದಲೂ ನನಗೆ ಚೆನ್ನಾಗಿ ಗೊತ್ತಿದೆ' ಎಂದು ಹೇಳಿದ್ದಾರೆ.
79
ವಿರಾಟ್ ರಣಜಿ ಪಂದ್ಯಗಳನ್ನಾಡುವ ಸಂದರ್ಭದಲ್ಲಿ ನಮ್ಮ ಕ್ಯಾಂಟೀನ್‌ನಿಂದಲೇ ಊಟ ಮಾಡುತ್ತಿದ್ದರು. ಅವರು ಈ ಕ್ಯಾಂಟೀನ್ ಅನ್ನು ತಮ್ಮದೇ ಕ್ಯಾಂಟೀನ್ ಎಂದು ಭಾವಿಸುತ್ತಿದ್ದರು ಎಂದು ಸಂಜಯ್ ಝಾ ಹೇಳಿದ್ದಾರೆ.
89
ಮೊದಲು ಇಷ್ಟಪಟ್ಟು ನಾನ್‌ವೆಜ್ ತಿನ್ನುತ್ತಿದ್ದ ವಿರಾಟ್ ಕೊಹ್ಲಿ ಇದೀಗ ಅಪ್ಪಟ ಸಸ್ಯಹಾರಿಯಾಗಿ ಬದಲಾಗಿದ್ದಾರೆ. ಮೊದಲು ವಿರಾಟ್ ಕೊಹ್ಲಿ ಬಟರ್ ಚಿಕನ್ ಹಾಗೂ ಚೋಲೆ ಬಟೋರೆಯನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಿದ್ದರು ಎನ್ನುವ ವಿಚಾರ ಗುಟ್ಟಾಗಿಯೇನೂ ಉಳಿದಿಲ್ಲ.
99
ವಿರಾಟ್ ಕೊಹ್ಲಿ ಪ್ರೋಟೀನ್ ಆಹಾರಕ್ಕೆ ಹೆಚ್ಚಿನ ಆಧ್ಯತೆ ನೀಡಿದ್ದರಿಂದಾಗಿ ಸಸ್ಯಹಾರಿಯಾಗಿ ಬದಲಾಗಿರುವುದು ಅವರ ಅಭಿಮಾನಿಗಳು ಅಚ್ಚರಿಗೀಡಾಗುವಂತೆ ಮಾಡಿದ್ದಾರೆ. ಈ ಹಿಂದಿನ ಸಂದರ್ಶನವೊಂದರಲ್ಲಿ ವಿರಾಟ್ ಕೊಹ್ಲಿ ತಾವು ಸರ್ವಿಕಲ್ ಸ್ಪೇನ್ ಸಮಸ್ಯೆ ಉಂಟಾಗಿದ್ದರಿಂದ ಮಾಂಸಹಾರ ತ್ಯಜಿಸಿದ್ದಾಗಿ ಹೇಳಿದ್ದರು.