IPL 2025 ಟೂರ್ನಿಯಲ್ಲಿ ಅಬ್ಬರಿಸಲು ರೆಡಿಯಾಗಿದ್ದಾರೆ ಈ 5 ಫಾರಿನ್ ಪ್ಲೇಯರ್ಸ್! ಈ ಪಟ್ಟಿಯಲ್ಲಿದ್ದಾನೆ RCB ಆಟಗಾರ

Published : Jan 29, 2025, 02:16 PM IST

ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮಾರ್ಚ್ 21ರಿಂದ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಈ ಐವರು ಬ್ಯಾಟರ್‌ಗಳು ರನ್ ಮಳೆ ಸುರಿಸಲು ಸಜ್ಜಾಗಿದ್ದಾರೆ. ಯಾರವರು ನೋಡೋಣ ಬನ್ನಿ. 

PREV
111
IPL 2025 ಟೂರ್ನಿಯಲ್ಲಿ ಅಬ್ಬರಿಸಲು ರೆಡಿಯಾಗಿದ್ದಾರೆ ಈ 5 ಫಾರಿನ್ ಪ್ಲೇಯರ್ಸ್! ಈ ಪಟ್ಟಿಯಲ್ಲಿದ್ದಾನೆ RCB ಆಟಗಾರ

ಪ್ರತಿ ವರ್ಷ ಭಾರತದಲ್ಲಿ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ ವಿಶ್ವಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಆಕರ್ಷಿಸುತ್ತದೆ. ಅತ್ಯಂತ ದುಬಾರಿ ಟೂರ್ನಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಐಪಿಎಲ್‌ಗೆ ಭಾರತದಲ್ಲಿ ಮಾತ್ರವಲ್ಲದೆ, ಪ್ರಪಂಚದಾದ್ಯಂತ ಅಪಾರ ಅಭಿಮಾನಿಗಳಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಮುಂದಿನ ತಿಂಗಳು ಶುರುವಾಗುತ್ತೆ. ಇದು ಮುಗಿದ ತಕ್ಷಣ ಐಪಿಎಲ್ ಸಮರ ಆರಂಭವಾಗಲಿದೆ.

211

ಪ್ರತಿ ಐಪಿಎಲ್ ತಂಡ ಪಂದ್ಯವೊಂದರಲ್ಲಿ ಗರಿಷ್ಠ ನಾಲ್ಕು ವಿದೇಶಿ ಆಟಗಾರರನ್ನು ಕಣಕ್ಕಿಳಿಸಬಹುದು. ಇವರು ಹೆಚ್ಚಾಗಿ ತಂಡದ ಗೆಲುವಿಗೆ ಮುಖ್ಯವಾದ ಅನುಭವಿ ಪವರ್ ಹಿಟ್ಟರ್‌ಗಳು. ಈ ಪಟ್ಟಿಯಲ್ಲಿರುವ ಕೆಲವು ಆಟಗಾರರಿಗೆ ಡೈ ಹಾರ್ಡ್ ಫ್ಯಾನ್ಸ್ ಇದ್ದಾರೆ. ಈ ವಿದೇಶಿ ಆಟಗಾರರು ಐಪಿಎಲ್ 2025 ರಲ್ಲಿ ಧೂಳೆಬ್ಬಿಸಲು ರೆಡಿ ಇದ್ದಾರೆ. ಆ 5 ಆಟಗಾರರ ಬಗ್ಗೆ ಈಗ ತಿಳಿದುಕೊಳ್ಳೋಣ.

311
1. ಟ್ರ್ಯಾವಿಸ್ ಹೆಡ್

ಭಾರತೀಯ ಅಭಿಮಾನಿಗಳ ಕಿರಿಕಿರಿಗೆ ಕಾರಣನಾದ ಆಟಗಾರ ಟ್ರಾವಿಸ್ ಹೆಡ್. ಯಾಕಂದ್ರೆ ಇತ್ತೀಚೆಗೆ ಏಕದಿನ ಓವರ್‌ಗಳ ವಿಶ್ವಕಪ್, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗಳಲ್ಲಿ ಭಾರತದ ವಿರುದ್ಧ ಅದ್ಭುತ ಇನ್ನಿಂಗ್ಸ್‌ಗಳನ್ನು ಆಡಿ ಟೀಮ್ ಇಂಡಿಯಾ ಸೋಲಿಗೆ ಕಾರಣನಾಗಿದ್ದ. ಆದರೆ, ಈ ಆಟಗಾರ ಐಪಿಎಲ್‌ನಲ್ಲಿ ಆಡುವಾಗ ಅವನಿಗೆ ಅನೇಕ ಭಾರತೀಯ ಅಭಿಮಾನಿಗಳಿದ್ದಾರೆ.

411

ಟ್ರ್ಯಾವಿಸ್ ಹೆಡ್ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡ್ತಿದ್ದಾನೆ. ಕಳೆದ ಸೀಸನ್‌ನಲ್ಲಿ ತನ್ನ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಅಭಿಮಾನಿಗಳನ್ನು ರಂಜಿಸಿದ್ದ. ಐಪಿಎಲ್ 2024 ರಲ್ಲಿ ಒಂದು ಶತಕ, ನಾಲ್ಕು ಅರ್ಧಶತಕಗಳೊಂದಿಗೆ 567 ರನ್‌ಗಳಿಸಿ, ಆರೆಂಜ್‌ ಆರ್ಮಿ ಫೈನಲ್‌ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಹೀಗಾಗಿ ಮತ್ತೊಮ್ಮೆ ಆ ತಂಡ ಅವನನ್ನು 14 ಕೋಟಿ ರೂ.ಗಳಿಗೆ ಉಳಿಸಿಕೊಂಡಿದೆ. ಮುಂಬರುವ ಸೀಸನ್‌ನಲ್ಲೂ ರನ್‌ಗಳ ಸುನಾಮಿ ತರಲು ಸಜ್ಜಾಗಿದ್ದಾನೆ.

511
2. ಲಿಯಾಮ್ ಲಿವಿಂಗ್‌ಸ್ಟೋನ್

ಇಂಗ್ಲೆಂಡ್ ಮೂಲದ ಪವರ್‌ ಹಿಟ್ಟರ್ ಲಿಯಾಮ್ ಲಿವಿಂಗ್‌ಸ್ಟೋನ್ ಬಗ್ಗೆ ಕ್ರಿಕೆಟ್ ಅಭಿಮಾನಿಗಳಿಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಯಾವುದೇ ಮೈದಾನದಲ್ಲಿ ಯಾವುದೇ ಸಂದರ್ಭದಲ್ಲಿ ವಿಸ್ಪೋಟಕ ಬ್ಯಾಟಿಂಗ್ ನಡೆಸುವ ಸಾಮರ್ಥ್ಯ ಲಿವಿಂಗ್‌ಸ್ಟೋನ್‌ ಅವರಿಗೆ ಇದೆ.

611

ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದ ಲಿವಿಂಗ್‌ಸ್ಟೋನ್, ಈ ಬಾರಿ ರಾಯಲ್ ಚಾಲೆಂಜರ್ಸ್ ಪರ ಕಾಣಿಸಿಕೊಳ್ಳಲಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಿಕ್ಸರ್‌ಗಳ ಸುರಿಮಳೆ ಸುರಿಸಲು ಲಿವಿಂಗ್‌ಸ್ಟೋನ್ ರೆಡಿಯಾಗಿದ್ದಾರೆ.

711
3. ಜೋಸ್ ಬಟ್ಲರ್

ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಸ್ಪೋಟಕ ಇನ್ನಿಂಗ್ಸ್‌ಗಳಿಗೆ ಹೆಸರುವಾಸಿ. ಅದ್ಭುತ ಆಟದಿಂದ ಮಿಂಚುತ್ತಿರುವ ಈ ಆಟಗಾರ ಪ್ರಸ್ತುತ ಸೂಪರ್ ಫಾರ್ಮ್‌ನಲ್ಲಿದ್ದಾನೆ. ಮುಂಬರುವ ಐಪಿಎಲ್ 2025 ಸೀಸನ್‌ನಲ್ಲಿ ರನ್‌ಗಳ ಪ್ರವಾಹ ಹರಿಸಲು ಉತ್ಸುಕನಾಗಿದ್ದಾನೆ. ಐಪಿಎಲ್‌ನಲ್ಲಿ ಬಟ್ಲರ್ ರಾಜಸ್ಥಾನ ರಾಯಲ್ಸ್ ತಂಡದ ಪರ ದೀರ್ಘಕಾಲ ಆಡಿದ್ದ. ಆದರೆ, ಮುಂದಿನ ಸೀಸನ್‌ಗಾಗಿ ಆ ತಂಡ ಅವನನ್ನು ಬಿಟ್ಟುಬಿಟ್ಟಿದೆ.

811

ರಾಜಸ್ಥಾನ ರಾಯಲ್ಸ್ ಪರ ದೀರ್ಘಕಾಲ ಆಡಿದ್ದ ಜೋಸ್ ಬಟ್ಲರ್ ಕಳೆದ ಸೀಸನ್‌ನಲ್ಲಿ ಎರಡು ಶತಕಗಳೊಂದಿಗೆ 359 ರನ್‌ಗಳಿಸಿದ್ದ. ಆದರೆ, ರಾಜಸ್ಥಾನ ಬಿಟ್ಟುಬಿಟ್ಟಿದ್ದರಿಂದ, ಅವನನ್ನು ಗುಜರಾತ್ ಟೈಟಾನ್ಸ್ ₹15.75 ಕೋಟಿಗೆ ಖರೀದಿಸಿದೆ. ಗುಜರಾತ್ ಪರವಾಗಿಯೂ ಶತಕಗಳ ಬೇಟೆ ಮುಂದುವರೆಸುವುದು ಬಹುತೇಕ ಖಚಿತ ಎನಿಸಿದೆ.

911
4. ಡೆವಾನ್ ಕಾನ್ವೇ

ನ್ಯೂಜಿಲೆಂಡ್ ಸ್ಟಾರ್ ಆಟಗಾರ ಡೆವಾನ್ ಕಾನ್ವೇ ಕೂಡ ಮುಂಬರುವ ಐಪಿಎಲ್ 2025 ಸೀಸನ್‌ನಲ್ಲಿ ಸೂಪರ್ ಶೋ ನೀಡಲು ಸಜ್ಜಾಗಿದ್ದಾನೆ. ಐಪಿಎಲ್‌ನಲ್ಲಿ ಡೆವಾನ್ ಕಾನ್ವೇ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡ್ತಿದ್ದಾನೆ. ಚೆನ್ನೈ ತಂಡದ ಪ್ರಮುಖ ಬ್ಯಾಟ್ಸ್‌ಮನ್. ಗಾಯದ ಕಾರಣ 2024ರ ಐಪಿಎಲ್‌ನಿಂದ ಹೊರಗುಳಿದಿದ್ದ. ಅದಕ್ಕೂ ಮೊದಲು, 2023 ರಲ್ಲಿ ಆರು ಅರ್ಧಶತಕಗಳೊಂದಿಗೆ 672 ರನ್‌ಗಳಿಸಿ ಮಿಂಚಿದ್ದ.

1011

ಸ್ಪಿನ್ ಆಡುವಲ್ಲಿ ನಿಪುಣನಾಗಿರುವ ಡೆವಾನ್ ಕಾನ್ವೇ ಬ್ಯಾಟಿಂಗ್ ಚೆನ್ನೈನ ಸ್ಪಿನ್-ಸ್ನೇಹಿ ಪಿಚ್‌ಗಳಿಗೆ ಸೂಕ್ತ. ಹೀಗಾಗಿ ಈ ಸೀಸನ್‌ನಲ್ಲಿ ಅವನಿಂದ ಅದ್ಭುತ ಪ್ರದರ್ಶನ ನಿರೀಕ್ಷಿಸಲಾಗಿದೆ. ಕಾನ್ವೆ ಸಿಡಿದರೆ, ಚೆನ್ನೈಗೆ 6ನೇ ಐಪಿಎಲ್ ಕಪ್ ಗ್ಯಾರಂಟಿ.

1111
5. ಜೇಕ್ ಫ್ರೇಜರ್ ಮೆಕ್‌ಗುರ್ಕ್

23 ವರ್ಷದ ಆಸ್ಟ್ರೇಲಿಯಾದ ಪವರ್ ಹಿಟ್ಟರ್ ಜೇಕ್ ಫ್ರೇಜರ್ ಮೆಕ್‌ಗುರ್ಕ್‌ನನ್ನು 2024ರ ಐಪಿಎಲ್ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಖರೀದಿಸಿತ್ತು. ತನ್ನ ಮೊದಲ ಸೀಸನ್‌ನಲ್ಲೇ ನಾಲ್ಕು ಅರ್ಧಶತಕಗಳೊಂದಿಗೆ 330 ರನ್‌ಗಳಿಸಿ ಎಲ್ಲರ ಗಮನ ಸೆಳೆದ. ಮೊದಲ ಎಸೆತದಿಂದಲೇ ನಿರ್ಭಯವಾಗಿ ಬ್ಯಾಟ್ ಮಾಡುವುದು ಅವನ ಬಲ. ಐಪಿಎಲ್ 2025 ಸೀಸನ್‌ನಲ್ಲೂ ಅವನು ತನ್ನ ಆಕ್ರಮಣಕಾರಿ ಆಟದಿಂದ ರನ್‌ಗಳ ಪ್ರವಾಹ ಹರಿಸಲು ಉತ್ಸುಕನಾಗಿದ್ದಾನೆ.

Read more Photos on
click me!

Recommended Stories