ಅನುಷ್ಕಾ ಶರ್ಮಾನ ಮದ್ವೆ ಆಗುತ್ತಿದ್ದಂತೆ ಕೊಹ್ಲಿ ವ್ಯಕ್ತಿತ್ವವೇ ಬದಲಾಯ್ತಾ? ಫ್ರೆಂಡ್ಸ್‌ನಿಂದನೂ ದೂರವಾದ್ರಾ?

Published : Jul 18, 2024, 04:37 PM IST

ಭಾರತ ಟಿ20 ವರ್ಲ್ಡ್ ಕಪ್‌ ಗೆದ್ದ ನಂತರದಿಂದ ವಿರಾಟ್‌ ಕೊಹ್ಲಿ ಸುದ್ದಿಯಲ್ಲಿದ್ದಾರೆ. ಕೊಹ್ಲಿ ಫ್ಯಾಮಿಲಿ ಜೊತೆ ಲಂಡನ್‌ಗೆ ಶಿಫ್ಟ್ ಆಗಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿತ್ತು. ಅದರ ನಂತರ ವಿರಾಟ್‌ ಕೊಹ್ಲಿ ಅವರು ಮದುವೆಯ ನಂತರ ಬದಲಾಗಿದ್ದಾರೆ ಎಂದು ಮಾಜಿ ಆಟಗಾರ ಇಂಶಾತ್‌ ಶರ್ಮ ಹೇಳಿಕೆ ನೀಡಿದ್ದರು. ಈಗ ವಿರಾಟ್‌ ಕೊಹ್ಲಿ ಜೊತೆ ಆಡಿದ ಮಾಜಿ ಆಟಗಾರ ಆಮಿತ್‌ ಮಿಶ್ರಾ ಶಾಕಿಂಗ್‌ ಹೇಳಿಕೆ ನೀಡಿದ್ದು, ವಿರಾಟ್‌ ಅವರ ವರ್ತನೆಯಿಂದ ಟೀಮ್‌ ಇಂಡಿಯಾದಲ್ಲಿ ಫ್ರೆಂಡ್ಸ್‌ ಕಡಿಮೆ ಎಂದಿದ್ದಾರೆ.

PREV
18
ಅನುಷ್ಕಾ ಶರ್ಮಾನ ಮದ್ವೆ ಆಗುತ್ತಿದ್ದಂತೆ ಕೊಹ್ಲಿ ವ್ಯಕ್ತಿತ್ವವೇ ಬದಲಾಯ್ತಾ? ಫ್ರೆಂಡ್ಸ್‌ನಿಂದನೂ ದೂರವಾದ್ರಾ?

ವಿರಾಟ್ ಕೊಹ್ಲಿಯ ಬದಲಾದ ವರ್ತನೆಯನ್ನು ಟೀಮ್‌ ಇಂಡಿಯಾದ ಮಾಜಿ ಆಗಾರ  ಅಮಿತ್ ಮಿಶ್ರಾ ಬಹಿರಂಗಪಡಿಸಿದ್ದಾರೆ. ಅಮಿತ್‌ ಮಿಶ್ರಾ ಹೇಳಿಕೆ ಸಖತ್‌ ವೈರಲ್‌ ಆಗಿದೆ. 

28

ನಾಯಕರಾದ ನಂತರ  ವಿರಾಟ್‌ ಕೊಹ್ಲಿಯ ನಡವಳಿಕೆಯಯಲ್ಲಿ ಬದಲಾವಣೆ ಆಯಿತು ಎಂದು ಭಾರತ ತಂಡದ ಹಿರಿಯ ಸ್ಪಿನ್ನರ್ ಅಮಿತ್ ಮಿಶ್ರಾ  ಆಘಾತಕಾರಿ ಹೇಳಿಕೆ ನೀಡಿದ್ದಾರೆ.

38

ವಿರಾಟ್ ಕೊಹ್ಲಿ ಅವರ ನಾಯಕತ್ವದಲ್ಲಿ ಅಮಿತ್ ಮಿಶ್ರಾ ಭಾರತಕ್ಕೆ ತಂಡಕ್ಕೆ ಆಡಿದ್ದರು. 2015 ರಿಂದ 2017 ರವರೆಗೆ ಕೊಹ್ಲಿ ನಾಯಕತ್ವದಲ್ಲಿ ಆಡಿದ ಅಮಿತ್ ಮಿಶ್ರಾ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವಿನ ವ್ಯತ್ಯಾಸವನ್ನು ವಿವರಿಸಿದ್ದಾರೆ

48

ನಾಯಕತ್ವ ಮತ್ತು ಖ್ಯಾತಿ ಪಡೆದ ನಂತರ ವಿರಾಟ್ ಕೊಹ್ಲಿ ವರ್ತನೆ ಬದಲಾಯಿತೆಂದೆ ಹೇಳಿದ್ದು ಈ ಸಹ ಆಟಗಾರ ಅಮಿತ್‌ ಮಿಶ್ರಾವೇ ಮೊದಲಲ್ಲ. ಬೇರೆಯವರೂ ಈ ಬಗ್ಗೆ ಹಲವು ಸಾರಿ ಹೇಳಿದ್ದಾರೆ. 

58

ನಾಯಕತ್ವ ಮತ್ತು ಖ್ಯಾತಿ ಪಡೆದ ನಂತರ ವಿರಾಟ್ ಕೊಹ್ಲಿ ವರ್ತನೆ ಹೇಗೆ ಬದಲಾಯಿತು. ಆದರೆ ಪ್ರಸ್ತುತ ಭಾರತೀಯ ನಾಯಕ ರೋಹಿತ್ ಶರ್ಮಾ ಈಗಲೂ ಹಾಗೆಯೇ ಇದ್ದಾರೆ ಎಂದು ಅಮಿತ್‌ ಹೇಳಿದ್ದಾರೆ.

68

ಅಮಿತ್‌ ಅವರ ಕ್ರಿಕೆಟ್‌ನ ಆರಂಭಿಕ ದಿನಗಳಲ್ಲಿ ಅವರು ಮತ್ತು ರೋಹಿತ್‌ ಶರ್ಮಾ ಬಹಳ ಸಂತೋಷ ಮತ್ತು ಸೌಹಾರ್ದಯುತ ಸಂಬಂಧವನ್ನು ಹೊಂದಿದ್ದಾರೆ ಎಂದು  ಅಮಿತ್ ಮಿಶ್ರಾ ಹೇಳಿದ್ದಾರೆ.


 

78

ವಿರಾಟ್ ಕೊಹ್ಲಿಯಿಂದ ನಾನು ಅದೇ ರೀತಿ ನಿರೀಕ್ಷಿಸುವುದಿಲ್ಲ ಎಂದು ಅವರು ಹೇಳಿದರು. ಏಕೆಂದರೆ ಅವರ ವ್ಯಕ್ತಿತ್ವ ಬದಲಾವಣೆಯ ಕಾರಣದಿಂದ ಭಾರತ ತಂಡದಲ್ಲಿ ಕಡಿಮೆ ಸ್ನೇಹಿತರನ್ನು ಹೊಂದಿದ್ದಾರೆಂದಿದ್ದಾರೆ.

88

ವಿರಾಟ್ ನಾಯಕತ್ವ ವಹಿಸಿಕೊಂಡು, ಕ್ರಿಕೆಟಿನಲ್ಲಿ ಯಶಸ್ಸಿನ ಉತ್ತುಂಗಕ್ಕೇರಿದ ನಂತರ ತನ್ನ ಮತ್ತು ವಿರಾಟ್‌ ಬಾಂಡ್ ಕಡಿಮೆಯಾಯಿತು. ಹೀಗಾಗಿ ಅವರಿಗೆ ಭಾರತ ತಂಡದಲ್ಲಿ ಕಡಿಮೆ ಸ್ನೇಹಿತರಿದ್ದಾರೆ ಎಂದು ಅಮಿತ್ ಹೇಳಿದ್ದಾರೆ.

Read more Photos on
click me!

Recommended Stories