ಧೋನಿಗಿಂತ ಸೌರವ್ ಗಂಗೂಲಿ ಅತ್ಯುತ್ತಮ ನಾಯಕ; ಅನುಮಾನವೇ..? ಈ ಸ್ಟೋರಿ ಓದಿ

Published : Jul 14, 2024, 04:46 PM ISTUpdated : Jul 15, 2024, 08:59 AM IST

ಬೆಂಗಳೂರು: ಮೂರು ಐಸಿಸಿ ಟ್ರೋಫಿ ಗೆದ್ದ ಏಕೈಕ ನಾಯಕ ಎನ್ನುವ ಹೆಗ್ಗಳಿಕೆ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿದೆ. ಹೀಗಿದ್ದೂ ಧೋನಿಗಿಂತ ಸೌರವ್ ಗಂಗೂಲಿ, ಭಾರತದ ಅತ್ಯುತ್ತಮ ನಾಯಕ ಎನ್ನುವುದರಲ್ಲಿ ಅನುಮಾನವಿಲ್ಲ. ಯಾಕೆ ಗೊತ್ತಾ?

PREV
110
ಧೋನಿಗಿಂತ ಸೌರವ್ ಗಂಗೂಲಿ ಅತ್ಯುತ್ತಮ ನಾಯಕ; ಅನುಮಾನವೇ..? ಈ ಸ್ಟೋರಿ ಓದಿ

ಕೋಲ್ಕತಾದ ಮಹಾರಾಜ ಖ್ಯಾತಿಯ ಸೌರವ್ ಗಂಗೂಲಿ 2000ನೇ ಇಸವಿಯಿಂದ 2005ರವರೆಗೆ ಭಾರತ ಕ್ರಿಕೆಟ್ ತಂಡವನ್ನು ನಾಯಕನಾಗಿ ಯಶಸ್ವಿಯಾಗಿ ಮುನ್ನಡೆಸಿದ್ದರು,

210

ಹಲವು ಕ್ರಿಕೆಟ್ ಪರಿಣಿತರ ಹಾಗೂ ಅಭಿಮಾನಿಗಳ ಪ್ರಕಾರ, ಮಹೇಂದ್ರ ಸಿಂಗ್ ಧೋನಿ ಅವರಿಂತ ಸೌರವ್ ಗಂಗೂಲಿಯೇ ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ ಎಂದು ಪರಿಗಣಿಸುತ್ತಾರೆ. ಹೀಗನ್ನಲಿ ಕಾರಣವೂ ಇದೆ.

310

ಸೌರವ್ ಗಂಗೂಲು ನಾಯಕತ್ವ ತೆಗೆದುಕೊಳ್ಳುವಾಗ ಟೀಂ ಇಂಡಿಯಾ ಮ್ಯಾಚ್ ಫಿಕ್ಸಿಂಗ್ ಹಗರಣದಿಂದ ಕಂಗೆಟ್ಟು ಹೋಗಿತ್ತು. ಆ ಸಂದರ್ಭದಲ್ಲಿ ಯಾರೊಬ್ಬರೂ ಟೀಂ ಇಂಡಿಯಾ ನಾಯಕರಾಗಲು ಸಿದ್ದರಿರಲಿಲ್ಲ. ಅಂತಹ ಸಂದರ್ಭದಲ್ಲಿ ದಾದಾ ನಾಯಕತ್ವ ವಹಿಸಿಕೊಂಡರು.

410

ಸ್ವತಃ ಆಕ್ರಮಣಕಾರಿ ಮನೋಭಾವದ ವ್ಯಕ್ತಿಯಾಗಿದ್ದ ಸೌರವ್ ಗಂಗೂಲಿ, ಭಾರತ ತಂಡವು ಕೇವಲ ಭಾರತದಲ್ಲಿ ಮಾತ್ರವಲ್ಲ ವಿದೇಶಿ ನೆಲದಲ್ಲೂ ಗೆಲ್ಲುವ ಸಾಮರ್ಥ್ಯವನ್ನು ಹೊಂದಿದೆ ಎಂದು ಸಾಧಿಸಿ ತೋರಿಸಿದ್ದರು. ಅಂತಹ ಮನಸ್ಥಿತಿಯನ್ನು ಆಟಗಾರರಲ್ಲೂ ಮೂಡಿಸಿದರು.

510

ಸೌರವ್ ಗಂಗೂಲಿ ನಾಯಕರಾದ ಬಳಿಕ ಯುವರಾಜ್ ಸಿಂಗ್, ವಿರೇಂದ್ರ ಸೆಹ್ವಾಗ್, ಎಂ ಎಸ್ ಧೋನಿ, ಜಹೀರ್ ಖಾನ್ ಹಾಗೂ ಹರ್ಭಜನ್ ಸಿಂಗ್ ಅವರಂತಹ ಯುವಕರಿಗೆ ಮಣೆ ಹಾಕುವ ಮೂಲಕ ಬಲಿಷ್ಠ ತಂಡವನ್ನು ಕಟ್ಟುವಲ್ಲಿ ಯಶಸ್ವಿಯಾದರು.

610
ಆಸೀಸ್‌ಗೆ ಸೋಲಿನ ರುಚಿ ತೋರಿಸಿದ್ದು ದಾದಾ:

ಸೌರವ್ ಗಂಗೂಲಿ ನಾಯಕರಾಗಿದ್ದ ಸಂದರ್ಭದಲ್ಲಿ ಆಸ್ಟ್ರೇಲಿಯಾ ತಂಡವು ವಿಶ್ವ ಕ್ರಿಕೆಟ್‌ನ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿತ್ತು. ಅಜೇಯವಾಗಿ ಗೆಲುವಿನ ನಾಗಾಲೋಟ ಮುಂದುವರೆಸಿದ್ದ ಕಾಂಗರೂ ಪಡೆಗೆ ಸೌರವ್ ಗಂಗೂಲಿ ನೇತೃತ್ವದ ಟೀಂ ಇಂಡಿಯಾ ಸೋಲಿನ ರುಚಿ ತೋರಿಸಿದ್ದು ಈಗ ಇತಿಹಾಸ.

710

ಈ ಮೊದಲೇ ಹೇಳಿದಂತೆ ಆಕ್ರಮಣಕಾರಿ ಮನೋಭಾವ ಹೊಂದಿದ್ದ ಸೌರವ್ ಗಂಗೂಲಿ, ಸಹ ಆಟಗಾರರಲ್ಲಿಯೂ ಅದೇ ಮನೋಭಾವ ಬೆಳೆಸಿದರು. ಅವಮಾನವನ್ನು ಸಹಿಸದೇ ಅಲ್ಲೇ ಪ್ರತ್ಯುತ್ತರ ನೀಡಬೇಕು ಎಂದು ತೋರಿಸಿಕೊಟ್ಟಿದ್ದೇ ದಾದಾ.

810
ಟೀಂ ಇಂಡಿಯಾಗೆ ಅಡಿಪಾಯ ಹಾಕಿದ್ದ ದಾದಾ:

ಸೌರವ್ ಗಂಗೂಲಿ ನಾಯಕರಾಗಿದ್ದಾಗ ಸಾಕಷ್ಟು ಯುವ ಆಟಗಾರರಿಗೆ ಅವಕಾಶ ನೀಡಿ ನೆಲೆನಿಲ್ಲುವಂತೆ ಮಾಡಿದ್ದರು. ಅದೇ ಆಟಗಾರರನ್ನು ಇಟ್ಟುಕೊಂಡು ಧೋನಿ, ವಿಶ್ವಕಪ್ ಚಾಂಪಿಯನ್ ಪಟ್ಟ ಅಲಂಕರಿಸಿದರು.

910

2003ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಗಂಗೂಲಿ ನೇತೃತ್ವದಲ್ಲಿ ಟೀಂ ಇಂಡಿಯಾ ಹಲವು ತಂಡಗಳನ್ನು ಬಗ್ಗು ಬಡಿದ ಫೈನಲ್ ಪ್ರವೇಶಿಸಿತ್ತು. ಅದೇ ತಂಡದಲ್ಲಿದ್ದ ಸೆಹ್ವಾಗ್, ಸಚಿನ್, ಹರ್ಭಜನ್, ಯುವರಾಜ್, ಜಹೀರ್ ಖಾನ್ ಅವರನ್ನ ಇಟ್ಟುಕೊಂಡೇ ಧೋನಿ 2011ರ ಏಕದಿನ ವಿಶ್ವಕಪ್ ಗೆದ್ದರು.

1010

ಧೋನಿ ನಾಯಕತ್ವ ತೆಗೆದುಕೊಳ್ಳುವಾಗ ಯಾವುದೇ ಒತ್ತಡಗಳು ಇರಲಿಲ್ಲ. ಈಗ ಹೇಳಿ ಭಾರತದ ಅತ್ಯುತ್ತಮ ನಾಯಕ ಸೌರವ್ ಗಂಗೂಲಿ ನಾ ಅಥವಾ ಮಹೇಂದ್ರ ಸಿಂಗ್ ಧೋನಿ ನಾ ಎಂದು.

Read more Photos on
click me!

Recommended Stories