ಗೌತಮ್ ಗಂಭೀರ್ ಮಾತಿಗೆ ಉಲ್ಟಾ ಹೊಡೆದ ಬಿಸಿಸಿಐ; ಗೌತಿ ಶಿಫಾರಸಿಗೆ ಡೋಂಟ್ ಕೇರ್..!

First Published | Jul 12, 2024, 3:52 PM IST

ಬೆಂಗಳೂರು: ಟೀಂ ಇಂಡಿಯಾ ನೂತನ ಹೆಡ್‌ ಕೋಚ್ ಆಗಿ ನೇಮಕಗೊಂಡ ಗೌತಮ್‌ ಗಂಭೀರ್‌ಗೆ ಆರಂಭದಲ್ಲಿಯೇ ಹಿನ್ನಡೆಯಾಗಿದೆ. ಹೊಸ ಕನಸು ಹಾಗೂ ಗುರಿಯನ್ನಿಟ್ಟುಕೊಂಡು ಟೀಂ ಇಂಡಿಯಾ ಹೆಡ್ ಕೋಚ್ ಹುದ್ದೆ ಅಲಂಕರಿಸುವ ಗಂಭೀರ್‌ಗೆ ಬಿಸಿಸಿಐ ಶಾಕ್ ನೀಡಿದೆ. ಏನಿದು ಹೊಸ ವಿಚಾರ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

ರಾಹುಲ್ ದ್ರಾವಿಡ್ ಅವರಿಂದ ತೆರವಾದ ಟೀಂ ಇಂಡಿಯಾ ಹೆಡ್ ಕೋಚ್ ಸ್ಥಾನಕ್ಕೆ ಇದೀಗ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ನೇಮಕವಾಗಿದ್ದಾರೆ. ಟೀಂ ಇಂಡಿಯಾ ಹೆಡ್ ಕೋಚ್ ಆದ ಅತಿಕಿರಿಯ ವ್ಯಕ್ತಿ ಎನ್ನುವ ಹಿರಿಮೆಗೆ ಗಂಭೀರ್ ಪಾತ್ರರಾಗಿದ್ದಾರೆ.

2024ರ ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿ ಸೈ ಎನಿಸಿಕೊಂಡಿದ್ದ ಗಂಭೀರ್‌ಗೆ ಒಂದು ಹಂತದಲ್ಲಿ ಟೀಂ ಇಂಡಿಯಾ ಹೆಡ್ ಕೋಚ್ ಆಗಲು ಸ್ವತಃ ಬಿಸಿಸಿಐ ಆಹ್ವಾನ ನೀಡಿತ್ತು ಎಂದೆಲ್ಲಾ ಸುದ್ದಿಯಾಗಿತ್ತು.

Latest Videos


ಇದೀಗ ಕಳೆದ ಜುಲೈ 09ರಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಟೀಂ ಇಂಡಿಯಾ ಹೆಡ್ ಕೋಚ್ ಅಗಿದ್ದಾರೆ ಎಂದು ಘೋಷಿಸಿದ್ದರು. 

ಹೊಸ ಹುರುಪು, ಹೊಸ ಕನಸು ಹಾಗೂ ವಿನೂತನ ಲೆಕ್ಕಾಚಾರದೊಂದಿಗೆ ಟೀಂ ಇಂಡಿಯಾ ಹೆಡ್ ಕೋಚ್ ಹುದ್ದೆ ಅಲಂಕರಿಸಿದ್ದ ಗೌತಮ್ ಗಂಭೀರ್‌ಗೆ ಇದೀಗ ಬಿಸಿಸಿಐ ಆರಂಭದಲ್ಲೇ ಹಿನ್ನಡೆಯನ್ನುಂಟು ಮಾಡಿದೆ.

ಟೀಂ ಇಂಡಿಯಾ ಫೀಲ್ಡಿಂಗ್ ಕೋಚ್ ಆಗಿ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಅವರನ್ನು ನೇಮಕ ಮಾಡಿ ಎಂದು ಗಂಭೀರ್, ಬಿಸಿಸಿಐ ಬಳಿ ಮನವಿ ಮಾಡಿದ್ದರು. ಆದರೆ ಗೌತಿ ಮನವಿಯನ್ನು ಬಿಸಿಸಿಐ ಸಾರಾಸಗಟಾಗಿ ತಿರಸ್ಕರಿಸಿದೆ ಎಂದು ವರದಿಯಾಗಿದೆ.

ಹಿಂದೂಸ್ಥಾನ್ ಟೈಮ್ಸ್ ಈ ಕುರಿತಂತೆ ವರದಿ ಮಾಡಿದ್ದು, ಜಾಂಟಿ ರೋಡ್ಸ್ ಬದಲಿಗೆ ಯಾವುದಾದರೂ ಭಾರತೀಯ ಮಾಜಿ ಕ್ರಿಕೆಟಿಗನನ್ನು ಫೀಲ್ಡಿಂಗ್ ಕೋಚ್ ಆಗಿ ನೇಮಿಸಿಕೊಳ್ಳುವಂತೆ ಬಿಸಿಸಿಐ ಸೂಚಿಸಿದೆ ಎನ್ನಲಾಗುತ್ತಿದೆ.

ಜಾಂಟಿ ರೋಡ್ಸ್ ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಫೀಲ್ಡರ್ ಆಗಿದ್ದರು ಎಂದು ನಿಮಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇನ್ನು ಜಾಂಟಿ ರೋಡ್ಸ್ ಹಾಗೂ ಗೌತಮ್ ಗಂಭೀರ್, ಐಪಿಎಲ್‌ನಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ತಂಡದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.

ಇನ್ನು ಇದಕ್ಕೂ ಮೊದಲು ಟೀಂ ಇಂಡಿಯಾ ಬೌಲಿಂಗ್ ಕೋಚ್ ಆಗಿ ಕನ್ನಡಿಗ ಆರ್ ವಿನಯ್ ಕುಮಾರ್ ಅವರನ್ನು ನೇಮಕ ಮಾಡಿ ಎಂದು ಗಂಭೀರ್ ಶಿಫಾರಸು ಮಾಡಿದ್ದರು. ಆದರೆ ಬಿಸಿಸಿಐ ಈ ಶಿಫಾರಸನ್ನು ತಳ್ಳಿ ಹಾಕಿದೆ ಎಂದು ವರದಿಯಾಗಿದೆ.

ಗಂಭೀರ್ ತಾವು ಟೀಂ ಇಂಡಿಯಾ ಹೆಡ್ ಕೋಚ್ ಹುದ್ದೆ ಅಲಂಕರಿಸಬೇಕಿದ್ದರೇ, ತಮಗೆ ಬೇಕಾದ ಸಹಾಯಕ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲು ಅವಕಾಶ ನೀಡಬೇಕು ಎನ್ನುವ ಡಿಮ್ಯಾಂಡ್ ಇಟ್ಟಿದ್ದರು. ಆದರೆ ಇದೀಗ ಗಂಭೀರ್ ಶಿಫಾರಸು ಕಡೆಗಣಿಸುವ ಮೂಲಕ ಬಿಸಿಸಿಐ ಉಲ್ಟಾ ಹೊಡೆದಿದೆ.                     

click me!