Published : May 06, 2020, 10:52 PM ISTUpdated : May 07, 2020, 01:55 PM IST
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮುದ್ದಿನ ನಾಯಿ ಬ್ರುನೋ ಸಾವನ್ನಪ್ಪಿದೆ. ಕಳೆದ 11 ವರ್ಷಗಳಿಂದ ಜೊತೆಯಾಗಿದ್ದ ಬ್ರುನೋ ಇನ್ನಿಲ್ಲ ಅನ್ನೋದು ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾಗೆ ಅರಗಿಸಿಕೊಳ್ಳಲು ಸಾಧ್ಯಾವಾಗುತ್ತಿಲ್ಲ. ವಿರಾಟ್ ಕೊಹ್ಲಿ ನಾಯಿಗಳನ್ನು ಹೆಚ್ಚಾಗಿ ಮುದ್ದು ಮಾಡುತ್ತಿದ್ದರು. ಇನ್ನು ಪ್ರಾಣಿ ಪ್ರಿಯೆ ಆಗಿರುವ ಅನುಷ್ಕಾ ಶರ್ಮಾಗೂ ನಾಯಿಗಳಂದರೆ ಅಚ್ಚು ಮೆಚ್ಚು. ವಿರಾಟ್ ಕೊಹ್ಲಿಯ ಮುದ್ದಿನ ಬ್ರುನೋ ಹಾಗೂ ಕೊಹ್ಲಿ ಪ್ರೀತಿ ಕುರಿತ ಮಾಹಿತಿ ಇಲ್ಲಿದೆ.