Published : Jul 29, 2026, 08:04 PM ISTUpdated : Jul 29, 2026, 08:10 PM IST
ಉಪನಾಯಕನಾಗಿ 15 ವರ್ಷದ ವೈಭವ್ ಸೂರ್ಯವಂಶಿ ಆಯ್ಕೆಯಾಗಿದ್ದಾರೆ. ಅಸಾಧಾರಣ ಬ್ಯಾಟಿಂಗ್ ಪ್ರದರ್ಶನ ಮತ್ತು ನಾಯಕತ್ವದ ಗುಣಗಳನ್ನು ಪರಿಗಣಿಸಿ ಆಯ್ಕೆ ಮಂಡಳಿ ಈ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಈ ಮೂಲಕ ದೇಶಿ ಕ್ರಿಕೆಟ್‌ನಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಈ ಜವಾಬ್ದಾರಿ ಪಡೆದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.
ಭಾರತೀಯ ದೇಶಿ ಕ್ರಿಕೆಟ್ ಅಂಗಳದಲ್ಲಿ ಪ್ರತಿದಿನವೂ ನೂರಾರು ಪ್ರತಿಭೆಗಳು ಹುಟ್ಟಿಕೊಳ್ಳುತ್ತವೆ. ಆದರೆ, ಕೆಲವು ನಿರ್ಧಾರಗಳು ಇಡೀ ಕ್ರಿಕೆಟ್ ಲೋಕವೇ ತಿರುಗಿ ನೋಡುವಂತೆ ಮಾಡುತ್ತವೆ. ಮುಂಬರುವ ಪ್ರತಿಷ್ಠಿತ ದುಲೀಪ್ ಟ್ರೋಫಿ (Duleep Trophy) ಟೂರ್ನಿಗಾಗಿ ಪೂರ್ವ ವಲಯ (East Zone) ತನ್ನ ಹೊಸ ತಂಡವನ್ನು ಪ್ರಕಟಿಸಿದಾಗ, ಎಲ್ಲರ ಕಣ್ಣು ಬಿದ್ದದ್ದು ಆ ಒಂದು ಹೆಸರಿನ ಮೇಲೆ. ಹಲವು ಅನುಭವಿ ಆಟಗಾರರು, ರಣಜಿ ಆಡಿ ಪಳಗಿದ ದೈತ್ಯ ಕ್ರಿಕೆಟಿಗರು ಇರುವ ತಂಡದಲ್ಲಿ, ಕೇವಲ 15 ವರ್ಷದ ಹರೆಯದ ಬಾಲಕನೊಬ್ಬನಿಗೆ ತಂಡದ 'ಉಪನಾಯಕ' (Vice-Captain) ಎಂಬ ಮಹತ್ವದ ಜವಾಬ್ದಾರಿಯನ್ನು ಹಸ್ತಾಂತರಿಸಲಾಗಿತ್ತು! ಹೌದು, ಕಿರಿಯ ವಯಸ್ಸಿನಲ್ಲೇ ತನ್ನ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಇಡೀ ಭಾರತೀಯ ಕ್ರಿಕೆಟ್‌ನಲ್ಲಿ ಸೌಂಡ್ ಮಾಡುತ್ತಿರುವ ಬಾಲಕ ವೈಭವ್ ಸೂರ್ಯವಂಶಿ ಅವರಿಗೆ ಆಯ್ಕೆ ಮಂಡಳಿ ಈ ಬಿಗ್ ಪ್ರಮೋಷನ್ ನೀಡಿದೆ.
24
ಅಚ್ಚರಿಯ ಆಯ್ಕೆಗೆ ಕಾರಣವೇನು?
ಸಾಮಾನ್ಯವಾಗಿ ದುಲೀಪ್ ಟ್ರೋಫಿಯಂತಹ ಪ್ರಥಮ ದರ್ಜೆ ದೇಶಿ ಟೂರ್ನಿಗಳಲ್ಲಿ ನಾಯಕತ್ವ ಅಥವಾ ಉಪನಾಯಕತ್ವದ ಪಟ್ಟವನ್ನು ಅನುಭವಿಗಳಿಗೆ ನೀಡಲಾಗುತ್ತದೆ. ಆದರೆ, ವೈಭವ್ ಸೂರ್ಯವಂಶಿ ಇತ್ತೀಚಿನ ದಿನಗಳಲ್ಲಿ ತೋರುತ್ತಿರುವ ಅಸಾಧಾರಣ ಆಟ, ಅವರ ಕ್ರೀಡಾ ಮನೋಭಾವ ಮತ್ತು ಮೈದಾನದಲ್ಲಿನ ಮುಕ್ತ ನಿರ್ಧಾರಗಳು ಆಯ್ಕೆಗಾರರ ಮನಗೆದ್ದಿವೆ. ಕೇವಲ 15ರ ಹರೆಯದಲ್ಲೇ ಟಿ20 ಹಾಗೂ ದೇಶಿ ಪಂದ್ಯಗಳಲ್ಲಿ ಅಂತರರಾಷ್ಟ್ರೀಯ ಮಟ್ಟದ ಬೌಲರ್‌ಗಳನ್ನೇ ಬೆಂಡೆತ್ತಿದ ವೈಭವ್, ಇತ್ತೀಚೆಗಷ್ಟೇ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲೂ ಸರಣಿಶ್ರೇಷ್ಠ ಪ್ರಶಸ್ತಿ ಗೆದ್ದು ತಮ್ಮ ಭವಿಷ್ಯದ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು.
34
ಇತಿಹಾಸ ಬರೆದ 15 ರ ಹರೆಯದ ತಾರೆ:
ದೇಶಿ ಕ್ರಿಕೆಟ್‌ನ ಇತಿಹಾಸದಲ್ಲೇ ಇಷ್ಟು ಕಿರಿಯ ವಯಸ್ಸಿನಲ್ಲಿ ದುಲೀಪ್ ಟ್ರೋಫಿಯಂತಹ ದೊಡ್ಡ ಟೂರ್ನಿಗೆ ಉಪನಾಯಕನಾಗಿ ಆಯ್ಕೆಯಾದ ಅಪರೂಪದ ದಾಖಲೆ ವೈಭವ್ ಪಾಲಾಗಿದೆ. ಆಯ್ಕೆ ಮಂಡಳಿಯ ಈ ಅಚ್ಚರಿಯ ನಡೆಯು, "ಭಾರತೀಯ ಕ್ರಿಕೆಟ್ ಕೇವಲ ಅನುಭವಕ್ಕೆ ಮಾತ್ರವಲ್ಲ, ಪ್ರಖರ ಪ್ರತಿಭೆ ಹಾಗೂ ನಾಯಕತ್ವದ ಗುಣಗಳಿಗೂ ಮಣೆ ಹಾಕುತ್ತದೆ" ಎಂಬುದಕ್ಕೆ ಸಾಕ್ಷಿಯಾಗಿದೆ. ಉಪನಾಯಕನಾಗಿ ತಂಡವನ್ನು ಮುನ್ನಡೆಸುವ ಜತೆಗೆ, ಬ್ಯಾಟರ್ ಆಗಿ ಪೂರ್ವ ವಲಯಕ್ಕೆ ರನ್ ಹೊಳೆ ಹರಿಸುವ ದೊಡ್ಡ ಜವಾಬ್ದಾರಿ ಈಗ ಈ 15 ವರ್ಷದ ಯುವ ತಾರೆಯ ಹೆಗಲೇರಿದೆ. ವೈಭವ್ ಸೂರ್ಯವಂಶಿ ಅವರ ಈ ಅದ್ಭುತ ಬೆಳವಣಿಗೆಯನ್ನು ಕಂಡು ಕ್ರೀಡಾಪಂಡಿತರು ಹಾಗೂ ಅಭಿಮಾನಿಗಳು ಅಚ್ಚರಿಯ ಜತೆಗೆ ಹರ್ಷ ವ್ಯಕ್ತಪಡಿಸಿದ್ದು, ದುಲೀಪ್ ಟ್ರೋಫಿಯಲ್ಲಿ ಅವರ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.
ಇಶಾನ್ ಕಿಶನ್ (ನಾಯಕ), ವೈಭವ್ ಸೂರ್ಯವಂಶಿ (ಉಪನಾಯಕ), ಅಭಿಮನ್ಯು ಈಶ್ವರನ್, ಕುಮಾರ್ ಕುಶಾಗ್ರಾ, ವಿರಾಟ್ ಸಿಂಗ್, ಅನುಕುಲ್ ರಾಯ್, ಸುದೀಪ್ ಘರಾಮಿ, ಶಿಖರ್ ಮೋಹನ್, ಸುಭ್ರಾಂಶು ಸೇನಾಪತಿ, ಅಭಿಜಿತ್ ಸರ್ಕಾರ್, ಡ್ಯಾನಿಶ್ ದಾಸ್, ಮುಹಮ್ಮದ್ ಸುಬಾಜ್ ವಾಲ್ ಮತ್ತು ಶಹಬಾಜ್ ವಾಲ್ ಶಮಿ,
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.