ಕ್ರಿಕೆಟ್ ಜಗತ್ತಿನ ಕಿಂಗ್ ವಿರಾಟ್ ಕೊಹ್ಲಿ 29ನೇ ವಯಸ್ಸಿಗೆ ಮಾಡಿದ ಸಾಧನೆಯನ್ನು ಭಾರತೀಯ ಕ್ರಿಕೆಟ್‌ನ ವಂಡರ್ ಕಿಡ್ ವೈಭವ್ ಸೂರ್ಯವಂಶಿ ಅವರು ಕೇವಲ 15 ವರ್ಷಕ್ಕೆ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಭಾರತೀಯರಲ್ಲಿ ಅತಿ ಕಿರಿಯ ವಯಸ್ಸಿಗೆ ಈ ಸಾಧನೆ ಮಾಡಿದ ಸೆಲೆಬ್ರಿಟಿಗಳ ಸಾಲಿಗೆ ಸೇರಿದ್ದಾರೆ.
ಕ್ರಿಕೆಟ್ ಜಗತ್ತಿನ ರಾಜನೆಂದೇ ಖ್ಯಾತಿಯನ್ನು ಪಡೆದಿರುವ ಕಿಂಗ್ ಕೊಹ್ಲಿ ತಮ್ಮ 29ನೇ ವಯಸ್ಸಿನಲ್ಲಿ ಮಾಡಿದ ಸಾಧನೆಯನ್ನು ಭಾರತೀಯ ಕ್ರಿಕೆಟ್‌ನ 'ವಂಡರ್‌ಕಿಡ್' ಎಂದೇ ಖ್ಯಾತರಾಗಿರುವ ವೈಭವ್ ಸೂರ್ಯವಂಶಿ ತಮ್ಮ 15 ವರ್ಷಕ್ಕೆ ಈ ಸಾಧನೆಯನ್ನು ಮಾಡಿದ್ದಾರೆ. ಈ ಮೂಲಕ ತಮ್ಮ ಹೆಸರಿಗೆ ಮತ್ತೊಂದು ಐತಿಹಾಸಿಕ ದಾಖಲೆ ಸೇರಿಸಿದ್ದಾರೆ. ಈ ಬಾರಿ ಕ್ರಿಕೆಟ್ ಮೈದಾನದ ಹೊರಗೆ ಜಾಗತಿಕ ಮಟ್ಟದಲ್ಲಿ ಅವರು ಈ ಬೃಹತ್ ಗೌರವ ಪಡೆದಿದ್ದಾರೆ.
ಭವಿಷ್ಯವನ್ನು ಬದಲಾಯಿಸುವ ಮತ್ತು ವಿವಿಧ ಕ್ಷೇತ್ರಗಳಲ್ಲಿ ಪ್ರಭಾವ ಬೀರುವ ಉದಯೋನ್ಮುಖ ತಾರೆಗಳನ್ನು ಗುರುತಿಸುವ ಪ್ರತಿಷ್ಠಿತ 'ಟೈಮ್' (TIME) ನಿಯತಕಾಲಿಕೆಯ 'TIME 100 Next 2026' ಪಟ್ಟಿಯಲ್ಲಿ ವೈಭವ್ ಸ್ಥಾನ ಪಡೆದಿದ್ದಾರೆ. ವಿಶೇಷವೆಂದರೆ, ಈ ಇಡೀ ಪಟ್ಟಿಯಲ್ಲಿರುವ ಅತ್ಯಂತ ಕಿರಿಯ ವ್ಯಕ್ತಿ ವೈಭವ್.
24
ಪಟ್ಟಿಯಲ್ಲಿರುವ ಏಕೈಕ ಭಾರತೀಯ
ಈ ವರ್ಷದ (2026) 'TIME 100 Next' ಪಟ್ಟಿಯಲ್ಲಿ ಜಾಗತಿಕ ಕ್ರೀಡಾ ಕ್ಷೇತ್ರದಿಂದ ಆಯ್ಕೆಯಾದ 7 ಕ್ರೀಡಾಪಟುಗಳಲ್ಲಿ ವೈಭವ್ ಸೂರ್ಯವಂಶಿ ಕೂಡ ಒಬ್ಬರು. ಅಷ್ಟೇ ಅಲ್ಲ, ಈ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಮತ್ತು ಏಕೈಕ ಕ್ರಿಕೆಟಿಗ ಇವರೇ!
'ಫಿನಾಮ್' ವಿಭಾಗದಲ್ಲಿ ವೈಭವ್‌ಗೆ ಸ್ಥಾನ
ಟೈಮ್ ನಿಯತಕಾಲಿಕೆ ವೈಭವ್ ಅವರನ್ನು 'ಫಿನಾಮ್' (Phenom) ವಿಭಾಗದಲ್ಲಿ ಸೇರಿಸಿದೆ. ಕ್ರೀಡಾ ಜಗತ್ತಿನಿಂದ ಈ ಗೌರವಾನ್ವಿತ ಪಟ್ಟಿಯಲ್ಲಿ ಸ್ಥಾನ ಪಡೆದ ಏಳು ಕ್ರೀಡಾಪಟುಗಳಲ್ಲಿ ವೈಭವ್ ಕೂಡ ಒಬ್ಬರು. ಆರ್ಚ್ ಮ್ಯಾನಿಂಗ್ (ಅಮೆರಿಕನ್ ಫುಟ್ಬಾಲ್ ಕ್ವಾರ್ಟರ್‌ಬ್ಯಾಕ್), ಟೈರೀಸ್ ಮ್ಯಾಕ್ಸಿ (NBA ಬ್ಯಾಸ್ಕೆಟ್‌ಬಾಲ್ ಆಟಗಾರ), ನವೋಮಿ ಗಿರ್ಮಾ (ಮಹಿಳಾ ಫುಟ್ಬಾಲ್ ಆಟಗಾರ್ತಿ), ಫೋಲರಿನ್ ಬಲೋಗುನ್ (ಫುಟ್ಬಾಲ್ ಸ್ಟ್ರೈಕರ್), ಅಲೆಕ್ಸಾಂಡ್ರಾ ಈಲಾ (ಟೆನಿಸ್ ಆಟಗಾರ್ತಿ) ಮತ್ತು ಒಲಿವಿಯಾ ಮೈಲ್ಸ್ (ಬ್ಯಾಸ್ಕೆಟ್‌ಬಾಲ್ ಆಟಗಾರ್ತಿ) ಈ ಪಟ್ಟಿಯಲ್ಲಿರುವ ಇತರ ಪ್ರಮುಖ ಕ್ರೀಡಾಪಟುಗಳು.
34
ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ
ವೈಭವ್ ಸೂರ್ಯವಂಶಿ ಅವರ ಕ್ರಿಕೆಟ್ ಪಯಣ ಒಂದು ಸಿನಿಮಾ ಕಥೆಯಷ್ಟೇ ರೋಚಕವಾಗಿದೆ. 2024ರ ಐಪಿಎಲ್ ಹರಾಜಿನಲ್ಲಿ, ಕೇವಲ 13 ವರ್ಷ ವಯಸ್ಸಿದ್ದಾಗ ರಾಜಸ್ಥಾನ್ ರಾಯಲ್ಸ್ ತಂಡ ಇವರನ್ನು ಖರೀದಿಸಿತ್ತು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ಬರೆದರು.
ಮರುವರ್ಷವೇ ಐಪಿಎಲ್‌ಗೆ ಪದಾರ್ಪಣೆ ಮಾಡಿದ ವೈಭವ್, ಪುರುಷರ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಚಿಕ್ಕ ವಯಸ್ಸಿಗೆ ಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಇತಿಹಾಸ ಸೃಷ್ಟಿಸಿದರು. ಪ್ರಸ್ತುತ ಅವರು ಭಾರತ ತಂಡಕ್ಕಾಗಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಟೈಮ್ಸ್ 100 ಪಟ್ಟಿಯಲ್ಲಿ ಸ್ಥಾನ ಪಡೆದ ಕಿರಿಯ ಭಾರತೀಯ
ವಿರಾಟ್ ಕೊಹ್ಲಿ ಅವರು ಕಳೆದ 2018ನೇ ವರ್ಷದಲ್ಲಿ (ಅಂದರೆ ಕೊಹ್ಲಿಗೆ ಆಗ 29 ವರ್ಷ ವಯಸ್ಸಾಗಿತ್ತು) ಟೈಮ್ ನಿಯತಕಾಲಿಕೆಯಲ್ಲಿ ಸ್ಥಾನ ಪಡೆದಿದ್ದರು. ಇದೇ ವೇಳೆ ನಟಿ ದೀಪಿಕಾ ಪಡುಕೋಣೆ ಕೂಡ ಟೈಮ್ 100ನಲ್ಲಿ ಸ್ಥಾನ ಪಡೆದಿದ್ದರು. ಈವರೆಗೆ ಟೈಮ್ 100 ಪಟ್ಟಿಯಲ್ಲಿ ಸ್ಥಾನ ಪಡೆದ ಅತಿ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ವೈಭವ್ ಸೂರ್ಯವಂಶಿ ಪಾತ್ರರಾಗಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ಕೂಡ ವೈಭವ್ ಸೂರ್ಯವಂಶಿ ಅವರಿಗೆ ಸಲ್ಲುತ್ತದೆ. ಈ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ಬಹುಕಾಲದ ದಾಖಲೆಯನ್ನು ಇವರು ಮುರಿದರು. ಪ್ರಸ್ತುತ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಟೂರ್ನಿಗಾಗಿ ಪ್ರಕಟಿಸಿರುವ ಭಾರತ ತಂಡದಲ್ಲೂ ವೈಭವ್ ಅತ್ಯಂತ ಕಿರಿಯ ಆಟಗಾರ ಎಂಬುದು ಗಮನಾರ್ಹ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.